ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಷಾ ಅಸುರನಲ್ಲ, ದೇವತೆಗಳೆಲ್ಲಾ ಕುಡುಕರು: ಕೆ.ಎಸ್.ಭಗವಾನ್

|
Google Oneindia Kannada News

ಮೈಸೂರು, ಅಕ್ಟೋಬರ್. 7: ಚಾಮುಂಡಿ ದಸರಾಗೆ ಸೆಡ್ಡು ಹೊಡೆದ ಪ್ರಗತಿಪರ ಚಿಂತಕರು ಇಂದು ಭಾನುವಾರ (ಅ.07)ಮೈಸೂರಿನಲ್ಲಿ ಚಾಮುಂಡಿ ದಸರಾಗೆ ಪ್ರತಿಯಾಗಿ ಮಹಿಷ ದಸರಾಗೆ ಚಾಲನೆ ನೀಡಿದರು.

ಮಹಿಷಾ ದಸರಾ ಆಚರಣಾ ಸಮಿತಿ ವತಿಯಿಂದ ಮಹಿಷ ದಸರಾ ಆಚರಿಸಿದ ಚಿಂತಕರಾದ ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಜ್ಞಾನ ಪ್ರಕಾಶ ಸ್ವಾಮೀಜಿ, ಸಾಹಿತಿ ಕೆ.ಎಸ್.ಭಗವಾನ್, ‌ಮಹೇಶ್ ಚಂದ್ರಗುರು ಭಾಗಿಯಾಗಿದ್ದರು.

ಮಹಿಷಾಸುರ ಪ್ರಿಯ ಕೆ.ಎಸ್.ಭಗವಾನ್‌ಗೆ ದೊರೆತಿದೆ ಹೊಸ ಬಿರುದು!ಮಹಿಷಾಸುರ ಪ್ರಿಯ ಕೆ.ಎಸ್.ಭಗವಾನ್‌ಗೆ ದೊರೆತಿದೆ ಹೊಸ ಬಿರುದು!

ಇನ್ನು ಇದೇ ವೇಳೆ ಮಾತನಾಡಿದ ಚಿಂತಕ ಕೆ. ಎಸ್ ಭಗವಾನ್, ಮಹಿಷಾಸುರ ರಾಕ್ಷಸನಲ್ಲ, ಸರ್ವಜನಾಂಗದ ಏಳಿಗೆಗಾಗಿ ಇದ್ದವನು. ಆತ ರಾಕ್ಷಸನಾಗಿದ್ದರೆ ಅವನ ಹೆಸರನ್ನೇಕೆ ಮೈಸೂರಿಗೆ ಇಟ್ಟರು. ಮಹಿಷಾಸುರ ಬುದ್ಧನ ಮಹಾನ್ ಅನುಯಾಯಿ ಎಂದು ಭಾವಿಸಬೇಕು. ನಮ್ಮ ಜನ ಓದಬೇಕು, ಇತಿಹಾಸವನ್ನು ತಿಳಿದುಕೊಳ್ಳಬೇಕು.

KS Bhagwan Said All the gods are drinkers

ಹೊಸ ಹೊಸ ಸಂಗತಿಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು. ಪುರೋಹಿತಶಾಹಿಗಳ ಮಾತು ಕೇಳಿ ಮಹಿಷನ ಈ ವಿಗ್ರಹ ಈ ರೂಪಿತವಾಯಿತು. 1950ರಲ್ಲಿ ಜಯಚಾಮರಾಜ ಒಡೆಯರ್ ಅವರು ರಾಕ್ಷಸ ರೂಪದ ಮಹಿಷಾಸುರನ ವಿಗ್ರಹ ನಿರ್ಮಾಣ ಮಾಡಿಸಿದರು.

ಭಗವಾನ್ ಅಸಂಬದ್ಧ ಹೇಳಿಕೆ ಕೊಡುವುದನ್ನು ನಿಲ್ಲಿಸಲಿ: ಪೇಜಾವರ ಶ್ರೀಭಗವಾನ್ ಅಸಂಬದ್ಧ ಹೇಳಿಕೆ ಕೊಡುವುದನ್ನು ನಿಲ್ಲಿಸಲಿ: ಪೇಜಾವರ ಶ್ರೀ

ನೀವು ಪೂಜೆ ಮಾಡುವ ದೇವತೆಗಳೆಲ್ಲಾ ಕುಡುಕರು. ಮಹಿಷಾ ಅಸುರನಲ್ಲ, ಉತ್ತಮವಾಗಿ ಆಡಳಿತ ‌ನಡೆಸಿದ ರಾಜ. ಆತ ರಾಜನಾಗದಿದ್ದರೆ ಯಾಕೆ ಮೈಸೂರಿಗೆ ಮಹಿಷನ ಹೆಸರಿಡುತ್ತಿದ್ದರು. ಉತ್ತಮವಾಗಿ ಆಡಳಿತ ನಡೆಸಿದ ರಾಜನನ್ನ ಅಸುರ ಎಂದು ಬಿಂಬಿಸಿದ್ದಾರೆ. ನಾವು ಮಹಿಷನ ಅನುಯಾಯಿಗಳು ಅವರ ಆಚರಣೆಯನ್ನು ನಾವು ಮಾಡುತ್ತೇವೆ.

ಉಪನಿಷತ್, ವೇದಾಂತ ಮೆಚ್ಚುವ ನನ್ನ ಮೇಲೇಕೆ ಸಿಟ್ಟು?: ಭಗವಾನ್ ಸಂದರ್ಶನಉಪನಿಷತ್, ವೇದಾಂತ ಮೆಚ್ಚುವ ನನ್ನ ಮೇಲೇಕೆ ಸಿಟ್ಟು?: ಭಗವಾನ್ ಸಂದರ್ಶನ

ಮಹಿಷ ಒಬ್ಬ ಶೂದ್ರ ಎಂಬ ಕಾರಣಕ್ಕೆ ಆತನನ್ನು ರಾಕ್ಷಸ ಎಂದು ಬಿಂಬಿಸಲಾಗಿದೆ. ಸದ್ಯ ಚಾಮುಂಡಿ ಬೆಟ್ಟದ ಮೇಲಿನ ಮಹಿಷ ಪ್ರತಿಮೆ ಬದಲಾಯಿಸುವ ಬಗ್ಗೆ ಸ್ಥಳೀಯರೊಂದಿಗೆ ಸಮಾಲೋಚಿಸುವೆ. ಮಹಿಷ ರಾಜನಾಗಿ ಸಾಕಷ್ಟು ಒಳ್ಳೆ ಕೆಲಸ ಮಾಡಿದ್ದಾನೆ. ಅದನ್ನು ತಿಳಿಸುವ ಸಲುವಾಗಿ ಮಹಿಷ ದಸರಾ ಆಚರಣೆ ಮಾಡಲಾಗುತ್ತಿದೆ ಎಂದು ಭಗವಾನ್ ಹೇಳಿದರು.

ವಿವೇಕಾನಂದ, ಬಸವಣ್ಣನವರನ್ನು ಕೊಲೆ ಮಾಡಲಾಗಿದೆ: ಪ್ರೊ.ಕೆ ಎಸ್ ಭಗವಾನ್ವಿವೇಕಾನಂದ, ಬಸವಣ್ಣನವರನ್ನು ಕೊಲೆ ಮಾಡಲಾಗಿದೆ: ಪ್ರೊ.ಕೆ ಎಸ್ ಭಗವಾನ್

ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಮಹಿಷ ಒಬ್ಬ ಮಹಾರಾಜ. ಆತ ಮಹಾರಾಜನಾಗಿ ಜನರಿಗೆ ಒಳ್ಳೆಯ ಕೆಲಸ ಮಾಡಿದ್ದಾನೆ. ಅವುಗಳನ್ನು ಜನರಿಗೆ ತಿಳಿಸುವ ಸಲುವಾಗಿ ಮಹಿಷಾ ದಸರಾ ಆಚರಣೆ ಮಾಡುತ್ತಿದ್ದೇವೆ ಎಂದರು.

English summary
KS Bhagwan launched Mahisha dasara and Said that Mahisha is not a demon, Good ruler. All the gods are drinkers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X