ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಿಂಗಾಂಬೂದಿಪಾಳ್ಯ ಕೆರೆಗೆ ಹರಿಯಲಿದೆ ಕೆಆರ್‌ಎಸ್ ನೀರು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 21: "ಲಿಂಗಾಂಬೂದಿಪಾಳ್ಯ ಕೆರೆಗೆ ಕೆಆರ್‌ಎಸ್‌ನಿಂದ ನೀರು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಕೆರೆಗೆ ಕೊಳಚೆ ನೀರು ಹೋಗುತ್ತಿರುವುದನ್ನು ತಡೆಗಟ್ಟಲು ಕ್ರಮಕೈಗೊಳ್ಳಿ" ಎಂದು ಅಧಿಕಾರಿಗಳಿಗೆ ಶಾಸಕ‌ ಜಿ. ಟಿ. ದೇವೇಗೌಡ ಸೂಚನೆ ನೀಡಿದರು.

ಗುರುವಾರ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಅವರು, ಕೆರೆಗೆ ಹೋಗುತ್ತಿರುವ ಕೊಳಚೆ ನೀರನ್ನು ತೆಡೆಯುವ ಸಂಬಂಧ ಅಧಿಕಾರಿಗಳ ಸಭೆಯನ್ನು ಶಾಸಕರ ಕಛೇರಿಯಲ್ಲಿ ನಡೆಸಿದರು.

ಕುಂದವಾಡ ಕೆರೆ ಅಭಿವೃದ್ಧಿ ಕಾಮಗಾರಿಗೆ ಸಿದ್ದೇಶ್ವರರಿಂದ ಚಾಲನೆ ಕುಂದವಾಡ ಕೆರೆ ಅಭಿವೃದ್ಧಿ ಕಾಮಗಾರಿಗೆ ಸಿದ್ದೇಶ್ವರರಿಂದ ಚಾಲನೆ

"ಮೈಸೂರು ನಗರದ ದಟ್ಟಗಳ್ಳಿಗೆ ಹೊಂದಿಕೊಂಡಂತೆ ಇರುವ ಲಿಂಗಾಬೂದಿಕೆರೆಗೆ ಒಳಚರಂಡಿ ನೀರು ಬರುತ್ತಿದೆ. ಇದರಿಂದ ಕೆರೆ ಮಲಿನಗೊಳ್ಳುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು" ಎಂದು ಪಾಲಿಕೆ ಹಾಗೂ ಮೂಡಾ ಆಯುಕ್ತರಿಗೆ ಸೂಚನೆ ನೀಡಿದರು.

 ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗುತ್ತಾ ಮಂಡ್ಯದ ಈ ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗುತ್ತಾ ಮಂಡ್ಯದ ಈ

KRS Water To Fill Lingambudhipalya Lake Soon

ಮಳೆ ನೀರು ಚರಂಡಿಗೆ ಗ್ರೀಲ್ ಅಳವಡಿಕೆ ಮಾಡಿ ಎಂದು ಸೂಚನೆ ನೀಡಿದ ಶಾಸಕರು, ಪ್ರತಿ ಹದಿನೈದು ದಿನಕ್ಕೊಮ್ಮೆ ಗ್ರಿಲ್ ಸ್ವಚ್ಚಗೊಳಿಸಲು ಸೂಚಿಸಿದರು. ನಂತರ ವಿಜಯನಗರ 3ನೇ ಹಂತದ ಒಳಚರಂಡಿ ಸಮಸ್ಯೆ ಗೆ ಸಂಬಂಧಿಸಿದಂತೆ ಕೂಡಲೆ ಒಳಚರಂಡಿ ಕಾಮಗಾರಿ ಕೈಗೊಳ್ಳಲು ನಿರ್ದೇಶನ ನೀಡಿದರು.

ಲಿಂಗಾಂಬುಧಿ ಕೆರೆ ದಂಡೆಯಲ್ಲಿ ತಲೆ ಎತ್ತಲಿದೆ ಮೈಸೂರಿನ ಮೊದಲ ಬಟಾನಿಕಲ್ ಗಾರ್ಡನ್‌ ಲಿಂಗಾಂಬುಧಿ ಕೆರೆ ದಂಡೆಯಲ್ಲಿ ತಲೆ ಎತ್ತಲಿದೆ ಮೈಸೂರಿನ ಮೊದಲ ಬಟಾನಿಕಲ್ ಗಾರ್ಡನ್‌

ಮೂಡಾವತಿಯಿಂದ ಕಾಮಗಾರಿ ಕೈಗೊಳ್ಳುವುದಾಗಿ ಮೂಡಾ ಆಯುಕ್ತರು ಶಾಸಕರಿಗೆ ತಿಳಿಸಿದರು. ಸಭೆಯಲ್ಲಿ ಪಾಲಿಕೆ ಆಯುಕ್ತರಾದ ಗುರುದತ್ತ ಹೆಗಡೆ, ಡಿಎಫ್ಓ ಪ್ರಶಾಂತ್, ಮೂಡಾ ಆಯುಕ್ತರಾದ ನಟೇಶ್, ಮೂಡಾ ಅಧೀಕ್ಷಕ ಅಭಿಯಂತರಾದ ಶಂಕರ್ ಮುಂತಾದವರು ಇದ್ದರು.

English summary
Chamundeshwari JD(S) MLA G. T. Deve Gowda said that KRS water will fill to Lingambudhipalya lake. He directed officials to control drainage water to lake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X