ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಶ್ರಯ ಮನೆ ಯೋಜನೆಗಳಿಗೆ ತಡೆ ಹಾಕುತ್ತಿದ್ದಾರಾ ಶಾಸಕ ರಾಮದಾಸ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 06: ನಾನು ಶಾಸಕನಾಗಿದ್ದ ನಾಲ್ಕು ವರ್ಷಗಳ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಸತಿ ಸಚಿವರಾಗಿದ್ದ ಅಂಬರೀಷ್, ಕೃಷ್ಣಪ್ಪ ಇವರುಗಳಿಗೆ ಒತ್ತಡ ಹಾಕಿ ಮನೆಗಳನ್ನು ಕಟ್ಟಿಸಲು ಬೇಕಾದ ಜಮೀನುಗಳನ್ನು ಮೂಡಾದಿಂದ ಸತತ ಹೋರಾಟ ಮಾಡಿ ತಂದಿದ್ದೆ, ಆದರೆ ಆಶ್ರಯ ಮನೆ ಯೋಜನೆ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿ ಯೋಜನೆಗಳಿಗೆ ತಡೆಯೊಡ್ಡಿರುವ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ಬಡವರ ಮೇಲೆ ಗದಾ ಪ್ರಹಾರ ಮಾಡುತ್ತಿದ್ದಾರೆಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಆರೋಪಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಶಾಸಕ ಸೋಮಶೇಖರ್, ಓರ್ವ ಶಾಸಕನಾಗಿ ಅನಾಗರೀಕರಾಗಿ ವರ್ತಿಸಿ, ಸ್ವಲ್ಪವೂ ಮಾನವೀಯತೆ ಇಲ್ಲದೆ ಬದುಕಿಗಾಗಿ ಕಷ್ಟಪಡುತ್ತಿರುವ ಬಡವರ ತಲೆ ಮೇಲೆ ಚಪ್ಪಡಿ ಎಳೆಯುವ ಕೆಲಸ ಮಾಡಬಾರದು ಎಂದು ವಾಗ್ದಾಳಿ ನಡೆಸಿದರು.

ಮಂತ್ರಿಯಾಗುವ ನನ್ನ ಸ್ನೇಹಿತರಿಗೆ ಶುಭಾಶಯ ಕೋರುತ್ತೇನೆ: ಎಚ್.ವಿಶ್ವನಾಥ್ಮಂತ್ರಿಯಾಗುವ ನನ್ನ ಸ್ನೇಹಿತರಿಗೆ ಶುಭಾಶಯ ಕೋರುತ್ತೇನೆ: ಎಚ್.ವಿಶ್ವನಾಥ್

ನಾನು ಶ್ರಮವಹಿಸಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಈ ಮನೆಗಳಿಗೆ ಬೇಕಾದ ಜಮೀನನ್ನು ಮೂಡಾ ಪ್ರಾಧಿಕಾರದಿಂದ ಎಲ್ಲ ಸದಸ್ಯರ ಮನವೊಲಿಸಿ ಮಳಲವಾಡಿಯಲ್ಲಿ 3.5 ಎಕರೆ ಜಮೀನು, ವಿಶ್ವೇಶ್ವರ ನಗರದಲ್ಲಿ 1.5 ಎಕರೆ ಜಮೀನು ಪಡೆದು ಮಳಲವಾಡಿಯಲ್ಲಿ 1344, ವಿಶ್ವೇಶ್ವರ ನಗರದಲ್ಲಿ 868, ಒಟ್ಟು 2212ಮನೆಗಳು, ಕೊಳಚೆ ನಿರ್ಮೂಲನಾ ಮಂಡಳಿಯಿಂದ ಈ ಎರಡು ಯೋಜನೆಗಳಿಗೆ ಹಣ ಬಿಡುಗಡೆಯಾಗಿ ಕೆಲಸದ ಟೆಂಡರ್ ಮುಗಿದು, ಗುತ್ತಿಗೆದಾರರು ಮನೆ ಕಟ್ಟಲು ಬಂದಿರುವಾಗ ಅವರಿಗೆ ಬೆದರಿಕೆ ಹಾಕಿ ಕೆಲಸ ಪ್ರಾರಂಭವಾಗದಂತೆ ಶಾಸಕ ರಾಮದಾಸ್ ತಡೆದಿದ್ದಾರೆಂದು ಆರೋಪಿಸಿದರು.

Krishnaraja MLA Ramdas Is Obstructing The Housing Scheme

ನಾನು ಮೂರು ವರ್ಷಗಳ ಕಾಲ ಸತತ ಹೋರಾಟ ನಡೆಸಿ 13.8 ಎಕರೆ ಜಮೀನಿಗೆ ಮೂಡಾ ಪ್ರಾಧಿಕಾರಕ್ಕೆ 7 ಕೋಟಿ ರುಪಾಯಿ ಹಣವನ್ನು ಸರ್ಕಾರದಿಂದ ಕಟ್ಟಿಸಿ ಲಲಿತಾದ್ರಿಪುರದ ಜಮೀನನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿ ಆಗಿದೆ. ರಾಜೀವ್ ಗಾಂಧಿ ವಸತಿ ಯೋಜನೆಯಿಂದ ಅನುಮತಿಯಾಗಿರುವ 3084 ಮನೆಗಳಲ್ಲಿ ಲಲಿತಾದ್ರಿಪುರದಲ್ಲಿ 1440 ಮನೆಗಳು, ಗೊರೂರಿನಲ್ಲಿ 1644ಮನೆಗಳು, ಒಟ್ಟು 3084 ಆಶ್ರಯ ಮನೆಗಳಿವೆ.

ಕೆ.ಆರ್.ನಗರದಿಂದ ಮೈಸೂರಿಗೆ ಪ್ರತಿ ಅರ್ಧ ಗಂಟೆಗೊಂದು ಬಸ್ಕೆ.ಆರ್.ನಗರದಿಂದ ಮೈಸೂರಿಗೆ ಪ್ರತಿ ಅರ್ಧ ಗಂಟೆಗೊಂದು ಬಸ್

ನಾನು ಮಾಡಿದ ಹಲವಾರು ಯೋಜನೆಯ ಎಲ್ಲಾ ಕೆಲಸಗಳು ಇಂದಿಗೂ ಮುಂದುವರಿಯುತ್ತಿದೆ. ಉದಾಹರಣೆಗೆ ವಿದ್ಯಾರಣ್ಯರಂ 16ನೇ ಮುಖ್ಯ ರಸ್ತೆ ಮತ್ತು ಎಲ್ಲಾ ರಸ್ತೆಯ ಮರು ನವೀಕರಣದ ಕೆಲಸ ಹಾಗೂ 4.5 ಕೋಟಿ ವೆಚ್ಚದಲ್ಲಿ ದೊಡ್ಡ ಮೋರಿಯಲ್ಲಿ ಹರಿಯುತ್ತಿದ್ದ ಒಳಚರಂಡಿ ನೀರನ್ನು ತಪ್ಪಿಸಿಹೊಸ ದೊಡ್ಡ ಪೈಪ್ ಅಳವಡಿಸಿ ಮಾಡುತ್ತಿರುವ ಕೆಲಸ, ಇನ್ನೂ ಹಲವಾರು ನಾನು ಮಾಡಿದ ಕೆಲಸವನ್ನೇ ಇವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಆದರೆ ಈ ಬಡವರ ಒಂದು ಸೂರು ಕಟ್ಟಿಕೊಳ್ಳುವ ವಿಚಾರದಲ್ಲಿ ರಾಜಕೀಯ ಮಾಡಿ ಅವರನ್ನು ಬೀದಿಗೆ ಬೀಳುವಂತೆ ಮಾಡುವ ಈ ಕ್ರೂರತ್ವ ಏಕೆ? ಇನ್ನು ಹದಿನೈದು ದಿನಗಳಲ್ಲಿ ಕೆಲಸ ಪ್ರಾರಂಭವಾಗಲಿಲ್ಲವೆಂದರೆ ಮುಂದಿನ ಹೋರಾಟ ಉಗ್ರರೂಪ ತಾಳುತ್ತದೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಎಚ್ಚರಿಸಿದರು.

English summary
Krishnaraja constituency legislator SA Ramadas was harassing the poor alleged Former MLA MK Somashekhar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X