ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಡೀ ದೇಶದಲ್ಲಿ ಸಮ್ಮಿಶ್ರ ಹೋರಾಟ ಮಾಡುತ್ತೇವೆ: ಕೃಷ್ಣ ಭೈರೇಗೌಡ

|
Google Oneindia Kannada News

ಮೈಸೂರು, ನವೆಂಬರ್ 17: ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ. ಹಾಗಾಗಿ ಕಾಂಗ್ರೆಸ್ - ಜೆಡಿಎಸ್ ಎರಡೂ ಪಕ್ಷಗಳು ಒಂದುಗೂಡಿ ಮುಂದಿನ ಐದು ವರ್ಷ ಮೈಸೂರು ಪಾಲಿಕೆ ಆಡಳಿತ ನಡೆಸಲಿದ್ದಾರೆ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ಮೈಸೂರು ಮೇಯರ್ ಸ್ಥಾನ ಜೆಡಿಎಸ್‌ ಕೈತಪ್ಪಿದ್ದಕ್ಕೆ ಜಿ.ಟಿ.ದೇವೇಗೌಡ ಬೇಸರಮೈಸೂರು ಮೇಯರ್ ಸ್ಥಾನ ಜೆಡಿಎಸ್‌ ಕೈತಪ್ಪಿದ್ದಕ್ಕೆ ಜಿ.ಟಿ.ದೇವೇಗೌಡ ಬೇಸರ

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಎರಡು ವರ್ಷದ ಅವಧಿಗೆ ಕಾಂಗ್ರೆಸ್ ಪಕ್ಷದಿಂದ ಮೇಯರ್, ಜೆಡಿಎಸ್ ನಿಂದ ಉಪಮೇಯರ್ ನೇಮಕವಾಗಲಿದೆ. ಇದಾದ ಬಳಿಕ ಮೂರು ವರ್ಷಗಳ ಕಾಲ ಜೆಡಿಎಸ್ ನಿಂದ ಮೇಯರ್ , ಕಾಂಗ್ರೆಸ್ಸಿನಿಂದ ಉಪಮೇಯರ್ ಒಪ್ಪಂದ ನಡೆದಿದೆ. ಈ ಮೈತ್ರಿ ಮುಂದಿನ ಲೋಕಸಭೆ ಚುನಾವಣೆವರೆಗೂ ಇರಲಿದೆ.

 ಮೈಸೂರು ಮೇಯರ್ ಸ್ಥಾನ ಜೆಡಿಎಸ್‌ ಕೈತಪ್ಪಿದ್ದಕ್ಕೆ ಜಿ.ಟಿ.ದೇವೇಗೌಡ ಬೇಸರ ಮೈಸೂರು ಮೇಯರ್ ಸ್ಥಾನ ಜೆಡಿಎಸ್‌ ಕೈತಪ್ಪಿದ್ದಕ್ಕೆ ಜಿ.ಟಿ.ದೇವೇಗೌಡ ಬೇಸರ

ಇಡೀ ದೇಶದಲ್ಲಿ ಸಮ್ಮಿಶ್ರ ಹೋರಾಟ ಮಾಡುತ್ತೇವೆ . ಈಗಾಗಲೇ ಉಪ ಚುನಾವಣೆಯನ್ನು ಗಮನಿಸುವುದಾದರೆ ಜನರು ಸಮ್ಮಿಶ್ರ ಸರ್ಕಾರದ ಪರವಾಗಿದ್ದಾರೆ. ಬಿಜೆಪಿಯನ್ನು ಕಿತ್ತೊಗೆಯುವ ಸಲುವಾಗಿ ನಾವು ಮುಂದಿನ ದಿನಗಳಲ್ಲಿಯೂ ಮೈತ್ರಿಯನ್ನು ಮುಂದುವರೆಸುತ್ತೇವೆ. ಮೈಸೂರಿನ ಈ ಹೊಂದಾಣಿಕೆ ಆಡಳಿತ ಮುಂದಿನ ನಮ್ಮ ನಡೆಗೆ ಸಾಕ್ಷಿಯಾಗಿದೆ.

Krishna Byregowda said Congress and JDS will administer Mysore mahanagara palike

ಮುಂದಿನ ದಿನಗಳಲ್ಲಿ ಯಾವುದೇ ಕಚ್ಚಾಟ ಮಾಡಿಕೊಳ್ಳದೆ ಹೊಂದಾಣಿಕೆಯಿಂದ ಸಾಗುವ ಭರವಸೆ ಇದೆ ಎಂದರು.

ಇನ್ನು ಮೈಸೂರು ಮೇಯರ್ ವಿಚಾರದಲ್ಲಿ ನಮ್ಮ ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ಮೈಸೂರಿನಲ್ಲಿ ಸಾರಾ ಮಹೇಶ್ ಹೇಳಿದ್ದಾರೆ. ಸಿದ್ದರಾಮಯ್ಯ ನಮ್ಮೆಲ್ಲರಿಗಿಂತ ದೊಡ್ಡವರು. ಮಾಜಿ ಮುಖ್ಯಮಂತ್ರಿ ಆಗಿದ್ದವರು . ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿದ್ದಾರೆ. ಅವರ ತೀರ್ಮಾನದಂತೆಯೇ ನಾವು ಸಚಿವರಾಗಿದ್ದೇವೆ.

 ಮೈಸೂರು ಮೇಯರ್ ಸ್ಥಾನ: ಕುಮಾರಸ್ವಾಮಿ vs ಸಿದ್ದರಾಮಯ್ಯ ಮೈಸೂರು ಮೇಯರ್ ಸ್ಥಾನ: ಕುಮಾರಸ್ವಾಮಿ vs ಸಿದ್ದರಾಮಯ್ಯ

ಮೇಯರ್ ಆಯ್ಕೆ ಸಂಬಂಧ ಕಾಂಗ್ರೆಸ್ ತಮ್ಮ ವರಿಷ್ಠರಿಗೆ ಮನವಿ ಮಾಡಿದ್ದರು. ಅದರಂತೆ ನಮ್ಮ ವರಿಷ್ಠರು ಮೇಯರ್ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ. ಮೊದಲ ಹಾಗೂ ಮೂರನೇ ಅವಧಿಗೆ ಕಾಂಗ್ರೆಸ್ , ಎರಡನೇ ನಾಲ್ಕನೇ ಹಾಗೂ ಐದನೇ ಅವಧಿಗೆ ಜೆಡಿಎಸ್ ಪಕ್ಷದಿಂದ ಮೇಯರ್ ಆಗಲಿದ್ದಾರೆ ಎಂದು ತಿಳಿಸಿದ್ದಾರೆ.

English summary
Minister Krishna Byregowda Said that Both Congress and JDS will administer Mysore mahanagara palike for the next five years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X