ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಸಂದರ್ಶನ

By ಯಶಸ್ವಿನಿ ಎಂಕೆ, ಮೈಸೂರು
|
Google Oneindia Kannada News

ಮೈಸೂರು, ನವೆಂಬರ್ 3 : ತಮ್ಮ ತವರು ಜಿಲ್ಲೆಯ ಮಹಿಳೆಗೆ ಮಹಿಳಾ ಅಧ್ಯಕ್ಷ ಪಟ್ಟ ಕೊಡಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಕೈ ಪಾಳಯದಲ್ಲಿ ಹೊಸ ಸಂಚಲವನ್ನು ಸೃಷ್ಟಿಸಿದ್ದಾರೆ. ರಾಜ್ಯ ಕೆಪಿಸಿಸಿ ಮಹಿಳಾ ಘಟಕದ ನೂತನ ಅಧ್ಯಕ್ಷೆಯಾಗಿ ಡಾ. ಪುಷ್ಪಾ ಅಮರನಾಥ್ ಅವರು ನೇಮಕವಾಗಿದ್ದಾರೆ.

ಕೆಪಿಸಿಸಿ ಮಹಿಳಾ ಘಟಕದ ಹಿಂದಿನ ಅಧ್ಯಕ್ಷೆ, ಪ್ರಭಾವಿ ರಾಜಕಾರಣಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸ್ಥಾನವನ್ನು ಈಗ ಡಾ. ಪುಷ್ಪಾ ಅಮರನಾಥ್ ಅವರು ಅಲಂಕರಿಸಿದ್ದಾರೆ. ಜಾರಕಿಹೊಳಿ ಸಹೋದರರನ್ನು ಎದುರು ಹಾಕಿಕೊಂಡು ಭಾರೀ ಸುದ್ದಿಗೀಡಾಗಿದ್ದ ಲಕ್ಷ್ಮೀ ಅವರ ಅಧಿಕಾರಾವಧಿ ಇನ್ನೂ ಮೂರು ತಿಂಗಳು ಇರುವಾಗಲೇ ಹುದ್ದೆ ತ್ಯಜಿಸುವಂತೆ ಸೂಚಿಸಲಾಗಿತ್ತು.

ದೀಪಾವಳಿ ವಿಶೇಷ ಪುರವಣಿ

ಮೈಸೂರಿನ ತಿ. ನರಸೀಪುರದ ಬನ್ನೂರು ಗ್ರಾಮದ ಪುಷ್ಪಾರವರು, ಹುಣಸೂರಿನ ಅಮರ್‌ನಾಥ್‌ ಅವರನ್ನು ವಿವಾಹವಾಗಿದ್ದಾರೆ. ಹಾಲಿ ಹುಣಸೂರು ಜಿಲ್ಲಾ ಪಂಚಾಯತ್‌ ಸದಸ್ಯೆಯಾಗಿರುವ ಮೈಸೂರು ಜಿಲ್ಲಾ ಪಂಚಾಯತ್‌ನ ಮಾಜಿ ಅಧ್ಯಕ್ಷೆಯಾಗಿಯೂ 2015ರಲ್ಲಿ ಅಧಿಕಾರ ಸ್ವೀಕರಿಸಿದ್ದರು.

ಕಾಂಗ್ರೆಸ್ ನಲ್ಲಿಯೇ ಮೊದಲಿನಿಂದಲೂ ಗುರುತಿಸಿಕೊಂಡಿದ್ದ ಪುಷ್ಪಾ ಅಮರ್​​ನಾಥ್​​ ಮೊದಲ ಬಾರಿ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದಾಗ 2015-2017ರವರೆಗೆ ಮೈಸೂರು ಜಿ.ಪಂ ಅಧ್ಯಕ್ಷೆಯಾಗಿದ್ದರು. ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ, ಎಐಸಿಸಿ ಸದಸ್ಯೆಯಾಗಿಯೂ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ.

ಗೆದ್ದ ಜಾರಕಿಹೊಳಿ ಪ್ರಭಾವ, ಮಹಿಳಾ ಘಟಕ ಅಧ್ಯಕ್ಷೆ ಸ್ಥಾನದಿಂದ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಕೋಕ್‌ ಗೆದ್ದ ಜಾರಕಿಹೊಳಿ ಪ್ರಭಾವ, ಮಹಿಳಾ ಘಟಕ ಅಧ್ಯಕ್ಷೆ ಸ್ಥಾನದಿಂದ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಕೋಕ್‌

ಭಾವೀ ಶಾಸಕಿ ಎಂದೇ ಬಿಂಬಿತರಾಗಿರುವ ಡಾ. ಪುಷ್ಪಾ ಅಮರನಾಥ್ ಅವರು ಮೈಸೂರು ಜಿಲ್ಲೆಯಲ್ಲಿ ಹಲವಾರು ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಕೊಂಡವರು. ಸಹಜವಾಗಿ ಎಲ್ಲರ ದೃಷ್ಟಿ ಅವರ ಮೇಲೆ ನೆಟ್ಟಿದೆ. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಆಯ್ಕೆಯಾಗುತ್ತಿದ್ದಂತೆ ಒನ್ಇಂಡಿಯಾ ಕನ್ನಡದ ಜೊತೆ ಚುಟುಕಾಗಿ ಮಾತಿಗೆ ಸಿಕ್ಕರು.

ಈ ಹುದ್ದೆ ಖಂಡಿತವಾಗಿಯೂ ನಿರೀಕ್ಷಿಸಿರಲಿಲ್ಲ

ಈ ಹುದ್ದೆ ಖಂಡಿತವಾಗಿಯೂ ನಿರೀಕ್ಷಿಸಿರಲಿಲ್ಲ

ಪ್ರ : ನಿಮ್ಮನ್ನು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆಯಾಗಿದ್ದೀರಿ? ಹೇಗೆನಿಸುತ್ತದೆ?

: ನಾನು ಈ ಹುದ್ದೆಯನ್ನು ಖಂಡಿತವಾಗಿಯೂ ನಿರೀಕ್ಷಿಸಿರಲಿಲ್ಲ. ಆಯ್ಕೆಯಾಗಿದ್ದೇನೆಂದು ತಿಳಿದಾಗ ನನ್ನ ಸಂತೋಷಕ್ಕೆ ಪಾರವಿಲ್ಲ. ಇಂತಹ ದೊಡ್ಡ ಹುದ್ದೆ ನೀಡಿದ್ದಕ್ಕೆ ನನ್ನ ಪಕ್ಷಕ್ಕೆ ಧನ್ಯವಾದಗಳು. ಈ ಹುದ್ದೆ ನನ್ನ ಜವಾಬ್ದಾರಿಯನ್ನೂ ಹೆಚ್ಚಿಸಿದೆ. ನಿಭಾಯಿಸಲು ಸರ್ವ ಪ್ರಯತ್ನ ಮಾಡುತ್ತೇನೆ.

ಮಹಿಳಾ ಕಾಂಗ್ರೆಸ್‌ಗೆ ನೂತನ ಸಾರಥಿ, ಲಕ್ಷ್ಮೀ ಹೆಬ್ಬಾಳ್ಕರ್ ತಲೆದಂಡ? ಮಹಿಳಾ ಕಾಂಗ್ರೆಸ್‌ಗೆ ನೂತನ ಸಾರಥಿ, ಲಕ್ಷ್ಮೀ ಹೆಬ್ಬಾಳ್ಕರ್ ತಲೆದಂಡ?

ರಾಹುಲ್ ಗಾಂಧಿ ಸಂದರ್ಶನ ತೆಗೆದುಕೊಂಡರು

ರಾಹುಲ್ ಗಾಂಧಿ ಸಂದರ್ಶನ ತೆಗೆದುಕೊಂಡರು

ಪ್ರ : ಕೆಪಿಸಿಸಿ ಅಧ್ಯಕ್ಷೆ ಆಯ್ಕೆಯ ಪ್ರಕ್ರಿಯೆ ಹೇಗಿತ್ತು?
: ಲಕ್ಷ್ಮೀ ಹೆಬ್ಬಾಳಕರ್ ಮೇಡಂರವರು ಅಲಂಕರಿಸಿದ್ದ ಈ ಹುದ್ದೆ 3 ವರ್ಷದ ಅವಧಿಯದ್ದು. ಅವರ ಅವಧಿ ಪೂರ್ಣಗೊಳ್ಳಲು ಇನ್ನು 3 ತಿಂಗಳು ಸಮಯವಿತ್ತು. ಅಲ್ಲದೇ ಅವರು ಎಂಎಲ್ಎ ಆಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನದಲ್ಲಿ ಈ ಹುದ್ದೆಯನ್ನು ತೆರವುಗೊಳಿಸುವಂತೆ ಪತ್ರ ಬರೆದಿದ್ದರು. ಆ ಬಳಿಕ ಪಕ್ಷದಿಂದ ಅವರಿಗೆ 15 ಮಂದಿ ಸೂಚಿಸುವಂತೆ ಅವರಿಗೆ ತಿಳಿಸಲಾಗಿತ್ತು. ಅವರು ನನ್ನ ಹೆಸರನ್ನು 15 ಜನರಲ್ಲಿ ಒಬ್ಬರಂತೆ ಸೂಚಿಸಿದ್ದರು. ಬಳಿಕ ನಮ್ಮೆಲ್ಲರೂ ನಮ್ಮ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಸುಶ್ಮಿತಾ ಮತ್ತು ರಾಹುಲ್ ಗಾಂಧಿಯವರು ಇಂಟರ್ ವ್ಯೂ ತೆಗೆದುಕೊಂಡರು.

ಮೊದಲ ಸುತ್ತಿನಲ್ಲಿ ಸೆಲೆಕ್ಟ್ ಆದೆ. ನಂತರ 2 ಸುತ್ತಿನ ಮಾತುಕತೆ ಸಹ ನಡೆಯಿತು. ಕಡೆಯದಾಗಿ ಐವರು ಆಕಾಂಕ್ಷಿಗಳ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಐವರು ಕೂಡ ಸರಿಸಮವಾದ ಸ್ಥಾನದಲ್ಲಿಯೇ ಇದ್ದೆವು.

ಕೇಳಲಾದ ಪ್ರಶ್ನೆ, ಉತ್ತರ ಬಹಿರಂಗಪಡಿಸುವಂತಿಲ್ಲ

ಕೇಳಲಾದ ಪ್ರಶ್ನೆ, ಉತ್ತರ ಬಹಿರಂಗಪಡಿಸುವಂತಿಲ್ಲ

ಪ್ರ : ಸಂದರ್ಶನದಲ್ಲಿ ಏನನ್ನು ಕೇಳಲಾಯಿತು? ನಿಮ್ಮನ್ನು ಈ ಪ್ರಧಾನ ಹುದ್ದೆಗೆ ಆಯ್ಕೆ ಮಾಡಿದ್ದಕ್ಕೆ ನಿಮ್ಮಲ್ಲಿರುವ ಇರುವ ವಿಶೇಷ ಗುಣವೇನು?

: ಕ್ಷಮಿಸಿ. ಅದನ್ನು ಎಲ್ಲಿಯೂ ಬಹಿರಂಗಪಡಿಸುವಂತಿಲ್ಲ. ನನ್ನ ಆಯ್ಕೆ ವಿಶೇಷತೆ ಏನೆಂಬುದು ನನಗೆ ಗೊತ್ತಿಲ್ಲ. ನನ್ನಲ್ಲಿರುವ ವಿಶೇಷತೆಯನ್ನು ಗುರುತಿಸಿಯೇ ವರಿಷ್ಠರು ನನ್ನನ್ನು ಈ ಹುದ್ದೆಗೆ ಆಯ್ಕೆ ಮಾಡಿದ್ದಾರೆ. ಅಷ್ಟು ಸಾಕು.

ನನ್ನಲ್ಲಿನ ಪ್ರತಿಭೆ ಗುರುತಿಸಿದ್ದು ಸಿದ್ದರಾಮಯ್ಯನವರು

ನನ್ನಲ್ಲಿನ ಪ್ರತಿಭೆ ಗುರುತಿಸಿದ್ದು ಸಿದ್ದರಾಮಯ್ಯನವರು

ಪ್ರ : ಮೈಸೂರಿನವರಾಗಿ ಈ ಬಗ್ಗೆ ಏನೆನಿಸುತ್ತದೆ? ಯಾರ್ಯಾರಿಂದ ಪ್ರೋತ್ಸಾಹ ಸಿಕ್ಕಿದೆ?

: ಖಂಡಿತಾ ಸಂತಸದ ವಿಚಾರ. ನಾನು ನನ್ನ ಕಾಂಗ್ರೆಸ್ ಪಯಣವನ್ನು ಆರಂಭಿಸಿದ್ದು ಇಲ್ಲಿಯೇ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಎಲ್ಲದರಲ್ಲಿಯೂ ಇದ್ದೇನೆ. ನನ್ನನ್ನು ಗುರುತಿಸಿದ್ದು ಮಾಜಿ ಸಿಎಂ ಸಿದ್ದರಾಮಯ್ಯನವರು. ನನ್ನ ಈ ಬೆಳವಣಿಗೆಗೆ ಅವರು, ದಿನೇಶ್ ಗುಂಡೂರಾವ್ ಸರ್, ಪರಮೇಶ್ವರ್ ಸರ್ ರವರೇ ಪ್ರಮುಖ ಕಾರಣ. ಅವರಿಗೆ ಧನ್ಯವಾದ ತಿಳಿಸುತ್ತೇನೆ.

ಹೆಚ್ಚಿಗೆ ಇನ್ನೇನನ್ನೂ ಹೇಳಲಾರೆ, ಕಾದು ನೋಡಿ

ಹೆಚ್ಚಿಗೆ ಇನ್ನೇನನ್ನೂ ಹೇಳಲಾರೆ, ಕಾದು ನೋಡಿ

ಪ್ರ : ನಿಮ್ಮ ಮುಂದಿನ ಯೋಜನೆಗಳೇನು?

: ನಾನು ಆ ಸ್ಥಾನಕ್ಕೆ ಗೌರವ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂಬ ಇಚ್ಛೆಯಿದೆ. ಹಿರಿಯರು, ಕಿರಿಯರು ಮಾತನ್ನು ಕೇಳಿ ಮುನ್ನಡೆಯುತ್ತೇನೆ. ಹೆಚ್ಚಿಗೆ ಇನ್ನೇನನ್ನೂ ಹೇಳಲಾರೆ. ಮುಂದೆ ನೀವೇ ಕಾದು ನೋಡಿ.

English summary
KPCC women wing president Dr Pushpa Amarnath interview. Former CM Siddaramaiah has lent his hand in selecting Pushpa Amarnath who is also from Mysuru. Pushpa Amarnath has replaced Lakshmi Hebbalkar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X