ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದ ಆಡಳಿತ ಕುಸಿದಿರುವುದಕ್ಕೆ ಮೈಸೂರಿನ ಗಲಾಟೆಯೇ ಸಾಕ್ಷಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 15: "ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದ್ದು, ಇದಕ್ಕೆ ಮೈಸೂರಿನಲ್ಲಿ ನಡೆದ ಐಎಎಸ್ ಅಧಿಕಾರಿಗಳ ಗಲಾಟೆಯೇ ಸಾಕ್ಷಿ," ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದರು.

ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ಸರ್ಕಾರ ಕುಸಿದಿರುವುದಕ್ಕೆ ಮೈಸೂರಿನ ಘಟನೆ ಪ್ರತಿಬಿಂಬ ಎಂಬಂತೆ ಕಾಣುತ್ತಿದೆ. ಮೈಸೂರಿನಂತಹ ಜಿಲ್ಲೆಯಲ್ಲೇ ಆಡಳಿತ ಕುಸಿದ ಮೇಲೆ ಬೇರೆ ಜಿಲ್ಲೆಯ ಸ್ಥಿತಿ ಹೇಗಿರಬೇಡಾ?" ಎಂದು ಪ್ರಶ್ನಿಸಿದರು.

ಜನರ ಹಣವನ್ನು ಮೋದಿ ಸರ್ಕಾರ ಪಿಕ್‌ಪಾಕೆಟ್ ಮಾಡುತ್ತಿದೆಜನರ ಹಣವನ್ನು ಮೋದಿ ಸರ್ಕಾರ ಪಿಕ್‌ಪಾಕೆಟ್ ಮಾಡುತ್ತಿದೆ

"ರಾಜ್ಯದ ಸಚಿವರು ಹಾಗೂ ಸಿಎಂ ಯಡಿಯೂರಪ್ಪ ನಡುವೆ ಸಮನ್ವಯತೆ ಇಲ್ಲ. ಸಿಎಂ ಅಲ್ಲಿ ಇಲ್ಲಿ ಸಭೆ ಮಾಡಿಕೊಂಡು ಓಡಾಡುತ್ತಿದ್ದಾರೆ. ಸಚಿವ ಏನು ಮಾಡುತ್ತಿದ್ದಾರೆ? ನೀವೇ ಹೇಳಿ," ಎಂದು ಡಿ.ಕೆ. ಶಿವಕುಮಾರ್ ಮರು ಪ್ರಶ್ನಿಸಿದರು.

Mysuru: KPCC President DK Shivakumar Expressed Outrage On State Government

"ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಮುಂದುವರೆಯುತ್ತಾರೋ? ಇಲ್ಲವೋ? ಎಂಬುದು ನನಗೆ ಸಂಬಂಧಿಸಿದ ವಿಚಾರವಲ್ಲ. ನಿನ್ನೆ‌ ಮೊನ್ನೆ‌ ಸುತ್ತೂರು ಮಠಕ್ಕೆ ಬಂದವರನ್ನು ಕೇಳಿದರೆ ಗೊತ್ತಾಗಬಹುದು," ಎಂದು ಪ್ರಶ್ನೆಯೊಂದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉತ್ತರಿಸಿದರು.

Mysuru: KPCC President DK Shivakumar Expressed Outrage On State Government

ಸತ್ತವರ ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರ ವಿಚಾರದ ಕುರಿತು ವ್ಯಂಗ್ಯವಾಡಿದ ಡಿ.ಕೆ. ಶಿವಕುಮಾರ್, 'ಅಮ್ಮನವರು ಪಟ್ಟಕ್ಕೆ ಬರುವುದರೊಳಗೆ, ಐನೋರು ಚಟ್ಟಕ್ಕೆ ಹೋಗುವ ರೀತಿ' 1 ಲಕ್ಷ ಪರಿಹಾರ ಕೊಡುವುದಕ್ಕಿಂತ, ಖಾಸಗಿ ಆಸ್ಪತ್ರೆಗೆ ಕೊರೊನಾ ರೋಗಿಗಳು ಕಟ್ಟಿರುವ ಬಿಲ್ ವಾಪಸ್ ಕೊಡಿಸಿ," ಎಂದು ಆಗ್ರಹಿಸಿದರು.

English summary
The state administration machine was in complete decline and Covid situation was not handling the situation properly, KPCC president DK Shivakumar criticized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X