• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಐಪಿಎಸ್ ಅಧಿಕಾರಿ ಡಿ.ರೂಪಾರನ್ನು ಶ್ಲಾಘಿಸಿದ ಸಂಸದ ಪ್ರತಾಪ್ ಸಿಂಹ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 5: ಐಪಿಎಸ್ ಅಧಿಕಾರಿ ಡಿ.ರೂಪಾ ಅವರನ್ನು ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.

ಡಿ.ರೂಪಾ ಅವರನ್ನು ಉಲ್ಲೇಖಿಸಿ ಕಾವೇರಿ ಎಂಪೋರಿಯಂಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಸಂಸದರು, ""ಕಾವೇರಿ ಎಂಪೋರಿಯಂನ ಹೆಸರು ಉಳಿಸಲು ನೀವು ಸರಿಯಾದ ವ್ಯಕ್ತಿಯಾಗಿದ್ದೀರಿ ರೂಪಾ ಮೇಡಂ. ಕೆಲವು ಖಾಸಗಿಯವರು ಇದರ ಉತ್ಪನ್ನಗಳನ್ನು ನಕಲು ಮಾಡಿ, ಹೆಸರು ಹಾಳು ಮಾಡುತ್ತಿದ್ದಾರೆ. ನಾನು ನಿಮ್ಮ ಕಚೇರಿಗೆ ಸಧ್ಯದಲ್ಲೇ ಭೇಟಿ ನೀಡುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಐಪಿಎಸ್ ಅಧಿಕಾರಿ ಡಿ.ರೂಪಾ ಅವರು, 'ನಿಮಗೆ ಸದಾ ಸ್ವಾಗತವಿದೆ ಪ್ರತಾಪ್ ಸಿಂಹ ಸರ್. ನೀವು ಬರುವುದರಿಂದ ನಮಗೆ ದೊಡ್ಡ ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಕಾವೇರಿ ಬ್ರಾಂಡ್ ಗೆ ನೀವೂ ಬ್ರಾಂಡ್ ಅಂಬಾಸಿಡರ್. ನಿಮ್ಮ ಭೇಟಿ ನೂರಾರು ಜನ ಭೇಟಿ ನೀಡುವಂತೆ ಪ್ರೇರೇಪಿಸುತ್ತದೆ'' ಎಂದು ಹೇಳಿದ್ದಾರೆ.

ಮೈಸೂರಲ್ಲಿ ಜನವರಿ 16 ರಂದು ಉದ್ಯೋಗ ಮೇಳ, ನೇರ ನೇಮಕಾತಿಮೈಸೂರಲ್ಲಿ ಜನವರಿ 16 ರಂದು ಉದ್ಯೋಗ ಮೇಳ, ನೇರ ನೇಮಕಾತಿ

   ಬೆಂಗಳೂರು: 12 ಜನ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಪಾಸಿಟಿವ್, ಸೋಂಕಿತರ ಪ್ರೈಮರಿ ಹಾಗೂ ಸೆಕೆಂಡರಿ ಕಾಂಟ್ಯಾಕ್ಟ್ ಟ್ರೇಸ್-ಸಚಿವ ಸುಧಾಕರ್ | Oneindia Kannada

   ಕಾವೇರಿ ಎಂಪೋರಿಯಂ ಬಗ್ಗೆ ನಿಮಗಿರುವ ಹೆಮ್ಮೆ ಮತ್ತು ಕಳಕಳಿಗೆ ನಾನು ಕೃತಜ್ಞಳಾಗಿದ್ದೇನೆ. ಹಾಗೆಯೇ ಸಂಸದ ತೇಜಸ್ವಿ ಸೂರ್ಯ ಅವರೂ ಕಾವೇರಿ ಎಂಪೋರಿಯಂಗೆ ಭೇಟಿ ನೀಡಲಿ ಅಂತ ಮನವಿ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

   English summary
   Mysuru–Kodagu constituency MP Pratap Simha has praised in tweetter the IPS officer D. Rupa.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X