ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಚ್ಚುವೆಲಿ-ಬೆಂಗಳೂರು ರೈಲು ಮೈಸೂರು ತನಕ ವಿಸ್ತರಣೆ

|
Google Oneindia Kannada News

ಮೈಸೂರು, ಸೆಪ್ಟೆಂಬರ್ 29 : ಕೊಚ್ಚುವೆಲಿ-ಬೆಂಗಳೂರು ಎಕ್ಸ್‌ಪ್ರೆಸ್ ರೈಲನ್ನು ಮೈಸೂರಿನ ತನಕ ವಿಸ್ತರಣೆ ಮಾಡಲಾಗಿದೆ. ಹಲವು ದಿನಗಳ ಹಿಂದೆ ರೈಲು ಸಂಚಾರ ಮೈಸೂರಿಗೆ ವಿಸ್ತರಣೆ ಮಾಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿತ್ತು.

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ರೈಲು ಸೇವೆ ವಿಸ್ತರಣೆಗೆ ಭಾನುವಾರ ಹಸಿರು ನಿಶಾನೆ ತೋರಿಸಿದರು. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹೊಸಪೇಟೆ-ಕೊಟ್ಟೂರು ರೈಲು ಸಂಚಾರಕ್ಕೆ ಆಯುಕ್ತರ ಒಪ್ಪಿಗೆಹೊಸಪೇಟೆ-ಕೊಟ್ಟೂರು ರೈಲು ಸಂಚಾರಕ್ಕೆ ಆಯುಕ್ತರ ಒಪ್ಪಿಗೆ

ಇದೇ ಸಂದರ್ಭದಲ್ಲಿ ಮೈಸೂರು ರೈಲ್ವೆ ನಿಲ್ದಾಣದ ಫ್ಲಾಟ್‌ ಫಾರಂ ನಂ 6 ರಲ್ಲಿ ನಿರ್ಮಿಸಲಾಗಿರುವ ಎಸ್ಕಲೇಟರ್ ಮತ್ತು ಕಾಯ್ದಿರಿಸಿದ ವಿಶ್ರಾಂತಿ ಕೊಠಡಿಯನ್ನು ಉದ್ಘಾಟಿಸಲಾಯಿತು.

ದಾವಣಗೆರೆ-ಹರಿಹರ ಜೋಡಿ ಮಾರ್ಗ ನಿರ್ಮಾಣ ಪೂರ್ಣದಾವಣಗೆರೆ-ಹರಿಹರ ಜೋಡಿ ಮಾರ್ಗ ನಿರ್ಮಾಣ ಪೂರ್ಣ

Kochuveli-Bangalore Daily Express Extended To Mysuru

ರೈಲು ನಂಬರ್ 16316/16315 ಕೊಚ್ಚುವೆಲಿ-ಬೆಂಗಳೂರು ರೈಲು ಮೈಸೂರಿನ ತನಕ ವಿಸ್ತರಣೆಯಾಗಿದೆ. ರೈಲು ಸಂಖ್ಯೆ 16316 ರೈಲು ಸೆಪ್ಟೆಂಬರ್ 29 ರಿಂದ, ರೈಲು ಸಂಖ್ಯೆ 16315 ಸೆಪ್ಟೆಂಬರ್ 30 ರಿಂದ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ಹೇಳಿದೆ.

ಬೆಂಗಳೂರು-ಬೆಳಗಾವಿ ನಡುವೆ ದಸರಾ ವಿಶೇಷ ರೈಲು, ವೇಳಾಪಟ್ಟಿಬೆಂಗಳೂರು-ಬೆಳಗಾವಿ ನಡುವೆ ದಸರಾ ವಿಶೇಷ ರೈಲು, ವೇಳಾಪಟ್ಟಿ

Kochuveli-Bangalore Daily Express Extended To Mysuru

ಕೊಚ್ಚುವೆಲಿ-ಬೆಂಗಳೂರು ನಡುವೆ ಸಂಚಾರ ನಡೆಸುವ ರೈಲಿನ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಈ ರೈಲಿನಲ್ಲಿ ಎಸಿ2 ಟೈರ್ 1, ಎಸಿ 3 ಟೈರ್ 3, ಸ್ಲಿಪರ್ ಕ್ಲಾಸ್ 13 ಮತ್ತು ಸಾಮಾನ್ಯ ದರ್ಜೆಯ 3 ಕೋಚ್‌ಗಳಿವೆ.

English summary
Kochuveli-Bangalore daily express train extended to Mysuru. Karnataka Chief Minister B.S.Yediyurappa flagged off for train. Railway minister for state Suresh Angadi also present.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X