ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯದುವೀರ ಒಡೆಯರ್ ಭಾವಿ ಪತ್ನಿ ರಾಜಸ್ಥಾನಿ ಕುವರಿ

By Mahesh
|
Google Oneindia Kannada News

ಮೈಸೂರು, ಮೇ.28: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಮೈಸೂರು ಅರಸು ಮನೆತನದ 27ನೇ ರಾಜರಾಗಿ ಗುರುವಾರ ಶುಭ ಕರ್ಕಾಟಕ ಲಗ್ನದಲ್ಲಿ ಪಟ್ಟಾಭಿಷಿಕ್ತರಾಗಿದ್ದಾರೆ.[ಯದುವೀರ್ - ತ್ರಿಷಿಕಾ ಮದುವೆ ಚಿತ್ರಗಳು]

'ನಮ್ಮ ಪರಂಪರೆ ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ' ಎಂದು ಹೇಳಿದ್ದಾರೆ. ಈ ಅಪೂರ್ವ ಸಮಾರಂಭಕ್ಕೆ ಸಾಕ್ಷಿಯಾದ ಅನೇಕ ಗಣ್ಯರ ಪೈಕಿ ರಾಜಸ್ಥಾನದ ಯುವರಾಣಿ ತ್ರಿಷಿಕಾ ಕುಮಾರಿ ಸಿಂಗ್ ಎಲ್ಲರ ಗಮನ ಸೆಳೆದರು. [ಪಟ್ಟಾಭಿಷೇಕದ ಚಿತ್ರಗಳು]

ಮೈಸೂರು ಹಾಗೂ ರಾಜಸ್ಥಾನದ ರಾಜಮನೆತನಗಳ ನಡುವೆ ಈಗಾಗಲೇ ನೆಂಟಸ್ತನ ಬೆಸೆದುಕೊಂಡಿದೆ. ಡುಂಗರಾಪುರ್ ಕುಟುಂಬದೊಡನೆ ಮೈಸೂರಿನ ಮಹರಾಜ ಯದುವೀರರ ಸಂಬಂಧ ಬೆಳೆಸಿರುವ ರಾಜಮಾತೆ ಪ್ರಮೋದಾ ದೇವಿ ಅವರು ಸಂತಸದಿಂದಿದ್ದಾರೆ. [ಪಟ್ಟಾಭಿಷೇಕಕ್ಕೆ ಬಂದಿದ್ದ ಗಣ್ಯರು ಹೇಳಿದ್ದೇನು?]

ಸುಮಾರು 40 ವರ್ಷಗಳ ನಂತರ ಮೈಸೂರಿನ ಅರಮನೆಯ ಮಂಟಪದಲ್ಲಿ ಮತ್ತೆ ಶುಭ ಕಾರ್ಯಕ್ಕೆ ನಾಂದಿ ಹಾಡಲಾಗಿದೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಆಶಯದಂತೆ ಯದುವೀರರು ಸಾಗಬೇಕಿದೆ. [ಯುವರಾಜ ಯದುವೀರ್ ಪರಿಚಯ]

ಮೈಸೂರು ಅರಸು ಮನೆತನ ಸೇರಲಿರುವ ಭಾವೀಪತ್ನಿ ತ್ರಿಷಿಕಾ ಅವರು ಕೂಡಾ ಯದುವೀರರ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.[ಯದುವೀರರ ಪಟ್ಟಾಭಿಷೇಕ, ಕ್ಷಣಕ್ಷಣದ ವರದಿ]

ಮೈಸೂರು, ರಾಜಸ್ಥಾನ, ಜೈಪುರ ಸೇರಿದಂತೆ ವಿವಿಧ ರಾಜವಂಶಸ್ಥರು, ಅರಸು ಕುಟುಂಬದವರು, ಯದುವೀರರ ಭಾವೀಪತ್ನಿ ತ್ರಿಷಿಕಾ ಹಾಗೂ ಅವರ ಕುಟುಂಬದವರು ಪಾಲ್ಗೊಂಡಿದ್ದರು. ಹಲವಾರು ವಿದೇಶಿ ಗಣ್ಯರು, ಯದುವೀರರ ಸಹಪಾಠಿಗಳು ಭಾಗವಹಿಸಿದ್ದರು.[550 ವರ್ಷಗಳ ಭವ್ಯ ಇತಿಹಾಸ]

ಪಟ್ಟಾಭಿಷೇಕ ಪೂರ್ಣಗೊಂಡ ನಂತರ ಅರಮನೆ ಆವರಣದಲ್ಲಿರುವ ಭುವನೇಶ್ವರಿ, ತ್ರಿನೇಶ್ವರ, ಸೋಮೇಶ್ವರ, ಗಾಯತ್ರಿ, ವರಾಹ, ಆಂಜನೇಯ, ಕೃಷ್ಣ, ಖಿಲ್ಲೆ ವೆಂಕಟರಮಣ ದೇವಸ್ಥಾನ ಸೇರಿದಂತೆ 16 ದೇವಾಲಯಗಳಿಗೆ ಮಹಾರಾಜ ಯದುವೀರರು ತೆರಳಿ ವಿಶೇಷ ಪೂಜೆ ಸಲ್ಲಿಸಿ ಅರಮನೆ ಪುರೋಹಿತರುಗಳಿಂದ ಆಶೀರ್ವಾದ ಪಡೆದರು.[ಯದುವೀರನ ಮದುವೆ ಆಲೋಚನೆ ಈಗಿಲ್ಲ]

ರಾಜಸ್ಥಾನಿ ಬೆಡಗಿ ತ್ರಿಷಿಕಾ ಕುಮಾರಿ ಸಿಂಗ್

ರಾಜಸ್ಥಾನಿ ಬೆಡಗಿ ತ್ರಿಷಿಕಾ ಕುಮಾರಿ ಸಿಂಗ್

ರಾಜಸ್ಥಾನದ ಡುಂಗರಾಪುರ್ ಮನೆತನ ಹರ್ಷವರ್ಧನ್ ಸಿಂಗ್,ಮಹೇಶ್ರೀ ಕುಮಾರಿ ಅವರ ಕಿರಿಯ ಪುತ್ರಿ ತ್ರಿಷಿಕಾ ಕುಮಾರಿ ಸಿಂಗ್ ಅವರ ಜೊತೆ ಯದುವೀರ್ ಒಡೆಯರ್ ಅವರ ವಿವಾಹ ನಿಶ್ಚಯವಾಗಿದೆ. ಡಿಸೆಂಬರ್ ವೇಳೆಗೆ ಗಟ್ಟಿಮೇಳ ಮೊಳಗುವ ಸಾಧ್ಯತೆಯಿದೆ. ಚಿತ್ರದಲ್ಲಿ: ಎಡದಿಂದ ಎರಡನೇಯವರು ತ್ರಿಷಿಕಾ

ಮೈಸೂರು ರಾಜ ಬಿರಿಯಾನಿ ಪ್ರಿಯ

ಮೈಸೂರು ರಾಜ ಬಿರಿಯಾನಿ ಪ್ರಿಯ

ಅಮೆರಿಕದ ಬೋಸ್ಟನ್ ನಲ್ಲಿ ಇಂಗ್ಲೀಷ್, ಎಕಾನಾಮಿಕ್ಸ್ ಓದಿರುವ 23 ವರ್ಷ ವಯಸ್ಸಿನ ಯದುವೀರ ಅರಸ್ ಅವರು ಈಗ ಮೈಸೂರು ಮನೆತನದ 27ನೇ ಒಡೆಯರ್ ಆಗಿದ್ದಾರೆ. ಮೈಸೂರಿನ ನೂತನ ಮಹರಾಜರಿಗೆ ಬಿರಿಯಾನಿ ಎಂದರೆ ಬಲು ಪ್ರೀತಿಯಂತೆ.

ಯದುವೀರ್-ತ್ರಿಷಿಕಾಗೆ ಬೆಂಗಳೂರಿನ ನಂಟು

ಯದುವೀರ್-ತ್ರಿಷಿಕಾಗೆ ಬೆಂಗಳೂರಿನ ನಂಟು

ಅಮೆರಿಕದಲ್ಲಿ ವ್ಯಾಸಂಗ ಮಾಡುವುದಕ್ಕೂ ಮುನ್ನ ಯದುವೀರ್ ಅವರು ಬೆಂಗಳೂರಿನ ಕೆನಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್ ಹಾಗೂ ವಿದ್ಯಾನಿಕೇತನ್ ಶಾಲೆಯ ವಿದ್ಯಾರ್ಥಿಯಾಗಿದ್ದವರು. ತ್ರಿಷಿಕಾ ಕುಮಾರಿ ಅವರು ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಹಳೆ ವಿದ್ಯಾರ್ಥಿನಿ.

ಸಂಗೀತ ಪ್ರಿಯ ಯದುವೀರ್

ಸಂಗೀತ ಪ್ರಿಯ ಯದುವೀರ್

ಸಲೀಸಾಗಿ ಗಿಟಾರ್ ಬಾರಿಸುವ ಯದುವೀರ್ ಅವರು ಈಗ ಸಾಂಪ್ರದಾಯಿಕ ಸರಸ್ವತಿ ವೀಣೆಯನ್ನು ನುಡಿಸಲು ಕಲಿಯುತ್ತಿದ್ದಾರೆ. ತ್ರಿಷಿಕಾ ಕುಮಾರಿ ಕೂಡಾ ಸಂಗೀತ ಪ್ರಿಯೆ. ಸಂಗೀತದಂತೆ ಟೆನಿಸ್ ಅಟದ ಮೇಲೂ ಯದುವೀರರಿಗೆ ಮೋಹವಿದೆ.

ಯದುವೀರ್ ಗೆ ಫ್ಯಾಂಟಸಿ ಪುಸ್ತಕ ಇಷ್ಟ

ಯದುವೀರ್ ಗೆ ಫ್ಯಾಂಟಸಿ ಪುಸ್ತಕ ಇಷ್ಟ

ಇತಿಹಾಸ, ಅರ್ಥಶಾಸ್ತ್ರ, ತತ್ತ್ವಶಾಸ್ತ್ರ ಅಲ್ಲದೆ ಫ್ಯಾಂಟಸಿ ಕಥೆ, ನಿಗೂಢ ಕಾದಂಬರಿಗಳನ್ನು ಯದುವೀರ್ ಇಷ್ಟಪಡುತ್ತಾರಂತೆ. ಚಿತ್ರದಲ್ಲಿ : ಯದುವೀರ್ ಒಡೆಯರ ಸೋದರಿ.

ಮೈಸೂರು ಪರಂಪರೆಗೆ ತಂತ್ರಜ್ಞಾನದ ನೆರವು

ಮೈಸೂರು ಪರಂಪರೆಗೆ ತಂತ್ರಜ್ಞಾನದ ನೆರವು

ಮೈಸೂರು ಪರಂಪರೆಗೆ ತಂತ್ರಜ್ಞಾನದ ನೆರವು ನೀಡುವ ಅಗತ್ಯವಿದೆ. ತಂತ್ರಜ್ಞಾನ ಬಳಸಿ ಪ್ರವಾಸೋದ್ಯಮ ಬೆಳೆಸುವ ಇರಾದೆ ಇದೆ ಎಂದು ಯದುವೀರ್ ಹೇಳಿದ್ದಾರೆ.

English summary
Know about Mysuru New King Yaduveer Wadiyar Fiancee Trishika Kumari Harshavardhan Singh of Rajasthan. Yaduveer Wadiyar to enter into wedlock with Trishika Kumari, daughter of Harshavardhan Singh, the Yuvaraja of Dungarpur, Rajasthan and Mahesri Kumari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X