ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಅರಮನೆ ಫೋಟೋಶೂಟ್ ವಿವಾದ : ಏನು, ಎತ್ತ?

|
Google Oneindia Kannada News

ಮೈಸೂರು, ಮೇ.26 : ಯುವರಾಜ ಯದುವೀರ ಅರಸ್ ವಿವಾಹಕ್ಕೂ ಮುನ್ನವೇ ಮೈಸೂರು ಅರಮನೆ ಸುದ್ದಿಯಲ್ಲಿದೆ. ಇದಕ್ಕೆ ಕಾರಣವಾಗಿರುವುದು ಯುವ ಜೋಡಿಗಳ ಫೋಟೋ ಶೂಟ್. ಗುರುವಾರ ಸಾಮಾಜಿಕ ತಾಣಗಳಲ್ಲಿ, ಟಿವಿ ವಾಹಿನಿಗಳಲ್ಲಿ ಮೈಸೂರು ಅರಮನೆಯದ್ದೇ ಸುದ್ದಿ.

ಮೈಸೂರು ಅರಮನೆ ಕೇವಲ ರಾಜಮನೆತನಕ್ಕೆ ಸೇರಿದ್ದಲ್ಲ. ಅದು ಕನ್ನಡಿಗರ ಸ್ವತ್ತು ಎಂದೇ ಕನ್ನಡಿಗರು ಪರಿಭಾವಿಸಿದ್ದಾರೆ. ಇಂಥ ವೇಳೆ ಈ ಬಗೆಯ ಫೋಟೋ ಶೂಟ್ ನಡೆದಿದ್ದು ಯುವ ಜೋಡಿಗಳು ಕೈ ಕೈ ಹಿಡಿದು ಓಡಾಡಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. [ಜೂನ್ 27ಕ್ಕೆ ಯದುವೀರ್ ಒಡೆಯರ್ ವಿವಾಹ]

mysuru palace

ಏಪ್ರಿಲ್ ನಲ್ಲಿ ವಿಡಿಯೋವನ್ನು ಯೂಟ್ಯೂಬ್ ಗೆ ಅಪ್ ಲೋಡ್ ಮಾಡಲಾಗಿದ್ದು ಈಗ ಸುದ್ದಿ ಮಾಡುತ್ತಿದೆ. 2016 ಫೆಬ್ರುವರಿ 27, 28ರಂದು ನಡೆದ ಆದಿತ್ಯ-ನವ್ಯಾ ವಿವಾಹ ಕಾರ್ಯಕ್ರಮದ ವೇಳೆ ತೆಗೆದ ವಿಡಿಯೋ ಇದಾಗಿದೆ. ಬೆಂಗಳೂರು ನಿವಾಸಿ ಆದಿತ್ಯ ಲಂಡನ್ ನ ನ್ಯಾಟಿಂಗ್ಯಾಮ್ ವಿವಿಯಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ ಎಂದು ಹೇಳಲಾಗಿದೆ. [ಯುವರಾಣಿ ತ್ರಿಷಿಕಾ ಕಾಣದೆ ನಿರಾಶರಾದ ಜನ]

ನಮಗೆ ಗೊತ್ತಿಲ್ಲ : 'ಫೋಟೋ ಶೂಟ್ ಬಗ್ಗೆ ನಮಗೆ ಗೊತ್ತಿಲ್ಲ. ಅರಮನೆಯಲ್ಲಿ ಭದ್ರತೆ ಇದ್ದರೂ ಹೇಗೆ ಫೋಟೋ ಮಾಡಿದ್ದಾರೆ ಎಂಬುದು ತಿಳಿದಿಲ್ಲ. ನಾವೇ ಎಂದೂ ಈ ಬಗೆಯಾಗಿ ಫೋಟೋ ತೆಗೆಸಿಕೊಂಡಿಲ್ಲ. ಇದು ಹೇಗೆ ಮಾಡಿದ್ದಾರೆ? ಎಂಬುದನ್ನು ತನಿಖೆ ಮಾಡುತ್ತೇವೆ' ಎಂದು ರಾಣಿ ಪ್ರಮೋದಾ ದೇವಿ ಅವರು ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮೈಸೂರು ಅಂಬಾ ವಿಲಾಸ ಅರಮನೆಯ ದರ್ಬಾರ್ ಹಾಲ್, ಖಾಸಗಿ ಹಾಲ್, ಕಲ್ಯಾಣ ಮಂಟಪಗಳಲ್ಲಿ ಚಿತ್ರೀಕರಣ ಮಾಡಿರುವುದು ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಸಿನಿಮಾಗಳ ಶೂಟಿಂಗ್ ಗೂ ಸಹ ಕೇಳಲಾಗಿದ್ದರೂ ಅವಕಾಶ ಸಿಕ್ಕಿರಲಿಲ್ಲ. ಆದರೆ ಇದೀಗ ಫೋಟೋ ಶೂಟ್ ಗೆ ಅವಕಾಶ ಸಿಕ್ಕಿದ್ದಾದರೂ ಹೇಗೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

English summary
Mysuru: The Karnataka Royal Lineage sign Mysuru Palace in the news on social Media because of a Photo-shoot of a couple. The photo-shoot inside the Durbar Hall premises sparks controversy in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X