ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುಜಿಸಿ ಮಾನ್ಯತೆ ಪಡೆದ ಕೆಎಸ್‌ಒಯುನ 17 ಕೋರ್ಸ್‌ಗಳು ಯಾವುವು?

By Gururaj
|
Google Oneindia Kannada News

ಬೆಂಗಳೂರು, ಆಗಸ್ಟ್ 10 : ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಕೆಎಸ್‌ಒಯುನ ಕೋರ್ಸ್‌ಗಳಿಗೆ ಕೊನೆಗೂ ಮಾನ್ಯತೆ ನೀಡಿದೆ. 2013-14ನೇ ಸಾಲಿನಿಂದ ಕೆಎಸ್‌ಒಯು ಕೋರ್ಸ್‌ಗಳಿಗೆ ಮಾನ್ಯತೆ ಇರಲಿಲ್ಲ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ 2022-23ರ ತನಕ ಮಾತ್ರ ಈ ಮಾನ್ಯತೆ ಚಾಲ್ತಿಯಲ್ಲಿ ಇರುತ್ತದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಎಲ್ಲಾ 32 ಕೋರ್ಸ್‌ಗಳಿಗೂ ಮಾನ್ಯತೆ ನೀಡುವಂತೆ ಕೋರಿತ್ತು. ಆದರೆ, ಯುಜಿಸಿ 17 ಕೋರ್ಸ್‌ಗಳಿಗೆ ಮಾತ್ರ ಮಾನ್ಯತೆ ನೀಡಿದೆ.

ಕೆಎಸ್‌ಒಯು ಮಾನ್ಯತೆ ರದ್ದು : ಏಕೆ, ಏನು, ಮುಂದೇನು?ಕೆಎಸ್‌ಒಯು ಮಾನ್ಯತೆ ರದ್ದು : ಏಕೆ, ಏನು, ಮುಂದೇನು?

ಜೂನ್ 4ರಂದು ಮೈಸೂರಿನಲ್ಲಿ ಮಾನವ ಸಂಪನ್ಮೂಲ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ ಸಭೆ ನಡೆದಿತ್ತು. ವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಅವರು ಕೋರ್ಸ್‌ಗೆ ಮಾನ್ಯತೆ ನೀಡುವಂತೆ ಕೋರಿ ಪ್ರಾತ್ಯಕ್ಷಿಕೆ ನೀಡಿದ್ದರು.

Karnataka State Open University 17 courses finally get UGC recognition

2013-14ನೇ ಸಾಲಿನಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕೋರ್ಸ್‌ಗಳಿಗೆ ಯುಜಿಸಿ ಮಾನ್ಯತೆ ಇರಲಿಲ್ಲ. ಇದರಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿತ್ತು. ವಿವಿ ಮಾನ್ಯತೆ ನೀಡುವಂತೆ ಕೋರಿ ಹಲವಾರು ಬಾರಿ ಯುಜಿಸಿಗೆ ಮನವಿ ಮಾಡಿತ್ತು.

ಕೆಎಸ್ಒಯುಗೆ ಮಾನ್ಯತೆ ನೀಡಲು ಒಪ್ಪಿಗೆ ನೀಡಿದ ಯುಜಿಸಿಕೆಎಸ್ಒಯುಗೆ ಮಾನ್ಯತೆ ನೀಡಲು ಒಪ್ಪಿಗೆ ನೀಡಿದ ಯುಜಿಸಿ

2013-14ರಿಂದ ವಿಶ್ವವಿದ್ಯಾಲಯದ ಕೋರ್ಸ್‌ಗೆ ಮಾನ್ಯತೆ ಇಲ್ಲ. ಆದ್ದರಿಂದ ಇಲ್ಲಿ ವ್ಯಾಸಂಗ ಮಾಡಿದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ವಿವಿಗೆ ಮಾನ್ಯತೆ ನೀಡುವಂತೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ ಎಂದು ಕುಲಪತಿಗಳು ಕೇಂದ್ರದ ತಂಡಕ್ಕೆ ವಿವರಣೆ ನೀಡಿದ್ದರು.

ಮಾನ್ಯತೆ ರದ್ದಾಗಿದ್ದು ಏಕೆ? : ವ್ಯಾಪ್ತಿ ಮೀರಿ ಚಟುವಟಿಕೆ ವಿಸ್ತರಣೆ, ನಿಯಮ ಉಲ್ಲಂಘಿಸಿ ತಾಂತ್ರಿಕ ಮತ್ತು ವೃತ್ತಿ ಶಿಕ್ಷಣ ಕೋರ್ಸ್‌ ಆರಂಭಿಸಿದ್ದ ಕಾರಣಕ್ಕೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಕೆಎಸ್‌ಒಯು ಕೋರ್ಸ್‌ಗಳ ಮಾನ್ಯತೆ ರದ್ದುಗೊಳಿಸಿತ್ತು.

ತನ್ನ ವ್ಯಾಪ್ತಿಯನ್ನು ಮೀರಿ ಹೊರ ರಾಜ್ಯಗಳಲ್ಲಿಯೂ ಖಾಸಗಿ ಸಂಸ್ಥೆಗಳು, ಕೋಚಿಂಗ್‌ ಕೇಂದ್ರಗಳ ಸಹಯೋಗದಲ್ಲಿ ದೂರ ಶಿಕ್ಷಣದಡಿ ವಿವಿಧ ಕೋರ್ಸ್‌ಗಳನ್ನು ಕೆಎಸ್‌ಒಯು ನಡೆಸುತ್ತಿದೆ ಎಂಬ ಆರೋಪದಡಿ ಮಾನ್ಯತೆ ರದ್ದು ಮಾಡಲಾಗಿತ್ತು.

ksou

ಶೋಕಾಸ್ ನೋಟಿಸ್ : ಕೆಎಸ್‌ಒಯು ಯುಜಿಸಿಯ ನಿಯಮಗಳನ್ನು ಪಾಲಿಸಿಲ್ಲ ಎಂದು 2011ರ ಜೂನ್‌ 10ರಂದು ಶೋಕಾಸ್ ನೋಟಿಸ್ ಜಾರಿಮಾಡಿತ್ತು. ಕೆಎಸ್‌ಒಯು ಈ ನೋಟಿಸ್‌ಗೆ ವಿವಿ ನೀಡಿದ ಉತ್ತರದ ಆಧಾರದ ಮೇಲೆ ಕೆಎಸ್‌ಒಯು ಕೋರ್ಸ್‌ ಮಾನ್ಯತೆಗಳನ್ನು ರದ್ದುಪಡಿಸಲಾಗಿತ್ತು.

English summary
Karnataka State Open University (KSOU) 17 course finally get the University Grants Commission (UGC) recognition. UGC de-recognized courses run by the KSOU in June 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X