ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಟಿ ಸನ್ನಿ ಲಿಯೋನ್ ವಿರುದ್ಧ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು

|
Google Oneindia Kannada News

ಮೈಸೂರು, ಅಕ್ಟೋಬರ್.23: 'ವೀರ ಮಹಾದೇವಿ' ಚಲನಚಿತ್ರದಲ್ಲಿ ನಟಿ ಸನ್ನಿಲಿಯೋನ್ ಅಭಿನಯಿಸಬಾರದು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇಂದು ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು, ಚಲನಚಿತ್ರ ನಿರ್ಮಾಪಕ ವಾಡಿ ಉದಯನ್ ಹಾಗೂ ನಟಿ ಸನ್ನಿಲಿಯೋನ್ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸನ್ನಿ ಲಿಯೋನ್‌ ಆಗಮನ ವಿರೋಧಿಸಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆಸನ್ನಿ ಲಿಯೋನ್‌ ಆಗಮನ ವಿರೋಧಿಸಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

ಕನ್ನಡದ ಹೆಮ್ಮೆಯ ರಾಜೇಂದ್ರ ಚೋಳನ್ ಅವರ ಸತಿಯಾದ ವೀರ ಮಹಾದೇವಿ ಅವರು ಗೌರವಾನ್ವಿತ ನಾರಿಯಾಗಿದ್ದು, ಅವರ ಪಾತ್ರದಲ್ಲಿ ಸನ್ನಿಲಿಯೋನ್ ಅವರು ನಟನೆ ಮಾಡುತ್ತಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ನಿರ್ಮಾಪಕರು ಈ ಚಿತ್ರ ನಿರ್ಮಾಣವನ್ನು ಕೂಡಲೇ ಕೈ ಬಿಡಬೇಕು.

Karnataka Rakshana Vedike activists protested against Sunny Leone

ಇಲ್ಲವಾದಲ್ಲಿ ಹೋರಾಟವನ್ನು ತೀವ್ರಗೊಳಿಸುತ್ತೇವೆ. ಸನ್ನಿಲಿಯೋನ್ ನಮ್ಮ ರಾಜ್ಯದ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾದರೂ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ವೀರಮಹಾದೇವಿ ಚಿತ್ರದಲ್ಲಿ ಸನ್ನಿಲಿಯೋನ್ ಪಾತ್ರ ಕೈಬಿಡುವಂತೆ ಪ್ರತಿಭಟನೆವೀರಮಹಾದೇವಿ ಚಿತ್ರದಲ್ಲಿ ಸನ್ನಿಲಿಯೋನ್ ಪಾತ್ರ ಕೈಬಿಡುವಂತೆ ಪ್ರತಿಭಟನೆ

ವೇದಿಕೆಯ ಜಿಲ್ಲಾಧ್ಯಕ್ಷ ಜಿ.ಬಸವಣ್ಣ, ಎನ್.ನಂದೀಶ್, ಲೋಕೇಶ್, ನಾಗೇಶ್, ಶಿವಣ್ಣ, ನಾಗೇಂದ್ರ, ಸೂರಜ್, ತೋಂಟದಾರ್ಯ, ಶಿವು, ಬಸವಣ್ಣ, ಶಿವಕುಮಾರ್, ಯೋಗೇಶ್ವರ್, ಅವಿನಾಶ್, ರಾಘವೇಂದ್ರ, ಷಣ್ಮುಖ, ಲಿಂಗಣ್ಣಸ್ವಾಮಿ ಇನ್ನಿತರರು ಹಾಜರಿದ್ದರು.

English summary
Karnataka Rakshana Vedike activists protested against Sunny Leone in Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X