ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ಮಕ್ಕಳ ಕಳ್ಳಸಾಗಾಟ ಜಾಲ ಭೇದಿಸಿದ ಪೊಲೀಸರು

ಮೈಸೂರಿನಲ್ಲಿ ಮಕ್ಕಳನ್ನು ಕಳ್ಳ ಸಾಗಾಟ ಮಾಡುತ್ತಿದ್ದ ಜಾಲವನ್ನು ಮೈಸೂರು ಪೊಲೀಸರು ಬೇಧಿಸಿದ್ದು, ಪ್ರಕರಣ ಸಂಬಂಧ 11 ಮಂದಿಯನ್ನು ಬಂಧಿಸಿದ್ದಾರೆ.ಬಂಧಿತರು ಮಕ್ಕಳನ್ನು ಹೊರದೇಶಗಳಿಗೂ ಸಾಗಾಟ ಮಾಡುತ್ತಿದ್ದರು ಎಂಬುದನ್ನು ಪೊಲೀಸರು ತಿಳಿಸಿದ್ದಾರೆ

By Prithviraj
|
Google Oneindia Kannada News

ಮೈಸೂರು, ಡಿಸೆಂಬರ್,2: ಮಕ್ಕಳಿಲ್ಲದ ದಂಪತಿಗಳಿಗೆ ಅಕ್ರಮವಾಗಿ ಶಿಶು ಮತ್ತು ಮಕ್ಕಳನ್ನು ಕಳ್ಳ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಮೈಸೂರು ಪೊಲೀಸರು ಭೇದಿಸಿದ್ದಾರೆ.

ಪ್ರಕರಣ ಸಂಬಂಧ ಒಟ್ಟು 11 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಬಂಧಿತರು ಮಕ್ಕಳನ್ನು ಕರ್ನಾಟಕ, ಕೇರಳ ಸೇರಿದಂತೆ ಅಮೆರಿಕ, ಕೀನ್ಯಾ ಮತ್ತಿತರರ ದೇಶಗಳಿಗೂ ಮಾರಾಟ ಮಾಡುತ್ತಿದ್ದರು ಎಂಬುದನ್ನು ಪತ್ತೆಹಚ್ಚಿದ್ದಾರೆ.

Karnataka police busts child trafficking racket in Mysuru

25 ದಿನಗಳ ಶಿಶುವಿನಿಂದ 6 ವರ್ಷದ ಮಗುವರೆಗೆ ಈ ಕಳ್ಳರು ಮಾರಾಟ ಮಾಡುತ್ತಿದ್ದರು. ಕಳೆದ ಒಂದು ತಿಂಗಳಲ್ಲೇ 16 ಮಕ್ಕಳು ಕಾಣೆಯಾಗಿರುವ ಬಗ್ಗೆ ಪ್ರಕರಣಗಳು ವರದಿಯಾದ ನಂತರ ಮಕ್ಕಳ ಕಳ್ಳ ಸಾಗಾಟ ಪ್ರಕರಣವನ್ನು ಬೇಧಿಸಲು ಪೊಲೀಸರು ಅಖಾಡಕ್ಕೆ ಇಳಿದಿದ್ದರು.

ಆರೋಪಿಗಳು ಕಳೆದ ಆರು ವರ್ಷಗಳಿಂದ ಮಕ್ಕಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು. ಬಡವರು ಮತ್ತು ದುರ್ಬಲರ ಮಕ್ಕಳನ್ನೇ ಗುರಿಯಾಗಿಸಿಕೊಂಡು ಅಕ್ರಮವಾಗಿ ಮರಾಟ ಮಾಡುತ್ತಿದ್ದರು. ಇವರೊಂದಿಗೆ ಆಸ್ಪತ್ರೆಯ ನಾಲ್ಕು ಮಂದಿ ಸಿಬ್ಬಂದಿಯೂ ಸಹ ಕೈ ಜೋಡಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಗರದ ನಸೀಮಾ ಆಸ್ಪತ್ರೆಯ ಉಷಾ, ನಕಲಿ ವೈದ್ಯೆ ಅನುಷಾ, ಚೆಲುವಾಂಬಾ ಆಸ್ಪತ್ರೆಯ ಸೌಮ್ಯ, ಕೆ.ಆರ್. ಆಸ್ಪತ್ರೆಯ ಚೆಲುವಾಂಬ, ಮೋಹನ್, ರೇಣುಕಾ, ನಸೀಮಾ ಆಸ್ಪತ್ರೆಯ ಸಿಜೆ. ಫ್ರಾನ್ಸಿಸ್ ಈ ಅಪರಾಧದಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಕ್ಕಳನ್ನು ಒಂದು ಲಕ್ಷದಿಂದ ನಾಲ್ಕು ಲಕ್ಷ ರೂ.ಗೆ ಮಾರಾಟ ಮಾಡುತ್ತಿದ್ದರು. ಮಗು ಇನ್ನೂ ಚೆನ್ನಾಗಿದ್ದರೆ. ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಅಪಹರಣ ಮಾಡಿದ ಮಕ್ಕಳ ಪೈಕಿ ಅಮೆರಿಕ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರಿಗೆ, ಕೀನ್ಯಾದ ದಂಪತಿಗಳಿಗೂ ಇವರೂ ಮಕ್ಕಳನ್ನು ಮಾರಾಟ ಮಾಡಿದ್ದಾರೆ ಎಂದು ಹೇಳಿದ್ದಾರೆ.

ದುಬಾರಿ ಜೀವನ ನಡೆಸಬೇಕೆಂಬ ಆಸೆ ಮತ್ತು ಬೇಗ ಹಣ ಸಂಪಾದನೆ ಮಾಡಬೇಕೆಂಬ ಬಯಕೆಯಿಂದ ಈ ಕಳ್ಳರು ಮಕ್ಕಳನ್ನು ಅಕ್ರಮವಾಗಿ ಸಾಗಿಸುತ್ತಿದ್ದರು ಎಂದು ಮೈಸೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಚೆನ್ನಣ್ಣನವರ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

English summary
The Mysuru police have busted a child trafficking gang and arrested 11 persons who sold children to childless couples in places including Karnataka, Kerala, US and Kenya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X