• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಟ್ಸಾಪ್‌ಗೆ ಬರಲಿದೆ ಕರ್ನಾಟಕ ಮುಕ್ತ ವಿವಿ ಪರೀಕ್ಷಾ ಫಲಿತಾಂಶ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಆಗಸ್ಟ್‌ 9 : ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಎಲ್ಲಾ ಕೆಲಸಗಳು ಸರಳ ಹಾಗೂ ಸರಾಗವಾಗಿ ನಡೆಯುತ್ತಿದೆ. ಇದಕ್ಕೆ ಪೂರಕವೆಂಬಂತೆ ಕರ್ನಾಟಕ ರಾಜ್ಯ ಮುಕ್ತ ವಿವಿ ಪರೀಕ್ಷಾ ಫಲಿಶಾಂಶವನ್ನು ವಿದ್ಯಾರ್ಥಿಗಳ ವಾಟ್ಸಾಪ್‌ಗೆ ನೇರವಾಗಿ ಕಳಹಿಸುವ ಯೋಜನೆ ರೂಪಿಸಿದೆ.

ಸಾಮಾನ್ಯವಾಗಿ ಪರೀಕ್ಷಾ ಫಲಿತಾಂಶವನ್ನೂ ಕಾಲೇಜಿನ ನೋಟಿಸ್ ಬೋರ್ಡ್‌ನಲ್ಲಿ ಅಥವಾ ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದು ವಾಡಿಕೆ. ಆದರೆ, ಕರಾಮುವಿವಿ ಒಂದು ಹೆಜ್ಜೆ ಮುಂದೆ ಹೋಗಿ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಫಲಿತಾಂಶದ ಶೀಟ್ ಕಳುಹಿಸಲು ಕ್ರಮ ಕೈಗೊಂಡಿದೆ. ಇದು ವಿದ್ಯಾರ್ಥಿಗಳ ಸಮೂಹದಲ್ಲಿ ಸಂಭ್ರಮಕ್ಕೆ ಕಾರಣವಾಗಿದ್ದು, ಕರಾಮುವಿವಿ ನೂತನ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.

ಶಿಕ್ಷಕರ ಅರ್ಹತಾ ಪರೀಕ್ಷೆ(TET) ನವೆಂಬರ್ 6ಕ್ಕೆ ನಿಶ್ಚಿತ- ಸಚಿವ ಬಿಸಿ ನಾಗೇಶ್ಶಿಕ್ಷಕರ ಅರ್ಹತಾ ಪರೀಕ್ಷೆ(TET) ನವೆಂಬರ್ 6ಕ್ಕೆ ನಿಶ್ಚಿತ- ಸಚಿವ ಬಿಸಿ ನಾಗೇಶ್

ಮದುವೆ ಕರೆಯೋಲೆಯಿಂದ ಹಿಡಿದು ಕಚೇರಿಯ ಪ್ರಮುಖ ಮಾಹಿತಿ ವಾಟ್ಸಾಪ್‌ನಲ್ಲೇ ಹಂಚಿಕೆ ಆಗುತ್ತಿದೆ. ಇದರ ಮುಂದುವರಿದ ಭಾಗವಾಗಿ ಪರೀಕ್ಷೆ ಫಲಿತಾಂಶ ಕೂಡ ವಿದ್ಯಾರ್ಥಿಗಳಿಗೆ ಸುಲಭವಾಗಿ ತಲುಪುವಂತೆ ಮಾಡಲು ಮುಕ್ತ ವಿವಿ ರಾಜ್ಯದಲ್ಲೇ ಮೊದಲ ಬಾರಿಗೆ ಹೊಸ ವಿಧಾನ ಅಳವಡಿಸಿ ಕೊಳ್ಳುತ್ತಿದೆ.

ವಾಟ್ಸಪ್‌ನಲ್ಲಿ ಫಲಿತಾಂಶ ನೀಡಲು ಕಾರಣ

ವಾಟ್ಸಪ್‌ನಲ್ಲಿ ಫಲಿತಾಂಶ ನೀಡಲು ಕಾರಣ

ಕರಾಮುವಿವಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಈ ಮೊದಲು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತಿತ್ತು. ಅಲ್ಲದೆ, ವಿದ್ಯಾರ್ಥಿಗಳ ಮೇಲ್ ಐಡಿಗೂ ರಿಸಲ್ಟ್ ಶೀಟ್ ಕಳುಹಿಸುತ್ತಿತ್ತು. ಆದರೆ, ಮುಕ್ತ ವಿವಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಬೇರೆ ಬೇರೆ ಜಿಲ್ಲೆಗಳ ಹಳ್ಳಿಗಳಲ್ಲಿ ನೆಲೆಸಿದ್ದಾರೆ. ಬಹುತೇಕರು ಉದ್ಯೋಗದಲ್ಲಿರುವ ಕಾರಣ ಅವರಿಗೆ ಸಕಾಲದಲ್ಲಿ ಮೇಲ್ ಚೆಕ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ, ತಾಂತ್ರಿಕ ಕಾರಣದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸೂಕ್ತ ಸಮಯಕ್ಕೆ ಫಲಿತಾಂಶವೂ ಲಭ್ಯವಾಗುತ್ತಿರಲಿಲ್ಲ. ಇವನ್ನೆಲ್ಲಾ ಮನಗಂಡ ವಿವಿ ವಿದ್ಯಾರ್ಥಿಗಳ ವಾಟ್ಸಾಪ್‌ಗೆ ನೇರವಾಗಿ ಫಲಿತಾಂಶ ನೀಡಲು ಮುಂದಾಗಿದೆ.

ಶಿಕ್ಷಣ ಸಚಿವ ಬಿಸಿ ನಾಗೇಶ್ ಅಧಿಕಾರಕ್ಕೆ ಒಂದು ವರ್ಷ- ಸಚಿವರ ಸಾಧನೆಗಳೇನು?ಶಿಕ್ಷಣ ಸಚಿವ ಬಿಸಿ ನಾಗೇಶ್ ಅಧಿಕಾರಕ್ಕೆ ಒಂದು ವರ್ಷ- ಸಚಿವರ ಸಾಧನೆಗಳೇನು?

ವಿವಿಗೂ ಖರ್ಚಿನ ಹೊರೆ ಆಗುವುದಿಲ್ಲ

ವಿವಿಗೂ ಖರ್ಚಿನ ಹೊರೆ ಆಗುವುದಿಲ್ಲ

ಕರಾಮುವಿವಿಯಲ್ಲಿ ಅಧ್ಯಯನ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳು ತಮ್ಮ ಸಂಪರ್ಕ ಸಂಖ್ಯೆಯನ್ನು ಅರ್ಜಿಯೊಂದಿಗೆ ನೀಡಿದ್ದಾರೆ. ಈ ಎಲ್ಲಾ ನಂಬರ್‌ಗಳ ದಾಖಲೆ ಮುಕ್ತ ವಿವಿ ಬಳಿ ಇದೆ. ಆಯಾ ಕೋರ್ಸಿಗೆ ಅನುಗುಣವಾಗಿ ಇವರೆಲ್ಲರ ಸಂಖ್ಯೆಯನ್ನು ಒಟ್ಟು ಮಾಡಲಾಗುತ್ತದೆ. ವೌಲ್ಯಮಾಪನ ವಿಭಾಗ ಫಲಿತಾಂಶದ ಶೀಟ್ ಸಿದ್ಧಪಡಿಸಿದ ಮೇಲೆ ವಿದ್ಯಾರ್ಥಿಗಳ ನಂಬರ್ ಬಳಸಿ ನೇರವಾಗಿ ವಾಟ್ಸಾಪ್‌ಗೆ ಕಳುಹಿಸಲಾಗುತ್ತದೆ. ಇದಕ್ಕಾಗಿ ಕಾರ್ಯ ನಿರ್ವಹಿಸಲು ಸಿಬ್ಬಂದಿಯ ಪ್ರತ್ಯೇಕ ತಂಡವನ್ನು ರಚನೆ ಮಾಡಲಾಗುತ್ತದೆ. ಒಂದು ಮೆಸೇಜ್‌ಗೆ ಪೈಸೆ ಲೆಕ್ಕದಲ್ಲಿ ಖರ್ಚು ಬರುವುದರಿಂದ ವಿವಿಗೂ ಇದು ಹೊರೆ ಆಗುವುದಿಲ್ಲ ಎಂದು ಮುಕ್ತ ವಿವಿ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ತಿಳಿಸಿದ್ದಾರೆ.

ಸೆಪ್ಟೆಂಬರ್‌ ಪರೀಕ್ಷೆಯ ಫಲಿತಾಂಶ

ಸೆಪ್ಟೆಂಬರ್‌ ಪರೀಕ್ಷೆಯ ಫಲಿತಾಂಶ

ಕಳೆದ ವರ್ಷದಿಂದ ಕರಾಮುವಿವಿ ಸ್ನಾತಕೋತ್ತರ ವಿಷಯಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಸಿಸ್ಟಂ ಪರೀಕ್ಷೆ ಜಾರಿಗೊಳಿಸಿದೆ. ಪದವಿ ಓದುವ ಮಕ್ಕಳು ವಾರ್ಷಿಕ ಪದ್ಧತಿಯಡಿ ಪರೀಕ್ಷೆ ಎದುರಿಸುತ್ತಾರೆ. ಸದ್ಯ ಜುಲೈನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‌ನಲ್ಲಿ ಪರೀಕ್ಷೆ ನಡೆಯಲಿದೆ. ಈ ವಿದ್ಯಾರ್ಥಿಗಳು ತಮ್ಮ ಮೊಬೈಲ್ ವಾಟ್ಸಾಪ್‌ನಲ್ಲೇ ಈ ಬಾರಿಯ ಫಲಿತಾಂಶ ನೋಡಬಹುದು. ಅಲ್ಲಿ ಪ್ರಯೋಗ ಯಶಸ್ವಿಯಾದರೆ ಇನ್ಮುಂದೆ ವಿವಿಯ ಎಲ್ಲಾ ಕೋರ್ಸಿನ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಫಲಿತಾಂಶವನ್ನು ಸುಲಭವಾಗಿ ಪಡೆದುಕೊಳ್ಳುವ ವ್ಯವಸ್ಥೆ ಜಾರಿಗೆ ಬರಲಿದೆ. ಅಂದಹಾಗೆ ಕರ್ನಾಟಕ ಮುಕ್ತ ವಿವಿಯಲ್ಲಿ 8ರಿಂದ 10 ಸಾವಿರ ವಿದ್ಯಾರ್ಥಿಗಳು ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೋಮಾ ಪದವಿ ಪಡೆಯುತ್ತಿದ್ದಾರೆ.

ವಿವಿಧ ಕೋರ್ಸ್‌ಗಳಲ್ಲಿ 10 ಸಾವಿರ ವಿದ್ಯಾರ್ಥಿಗಳು

ವಿವಿಧ ಕೋರ್ಸ್‌ಗಳಲ್ಲಿ 10 ಸಾವಿರ ವಿದ್ಯಾರ್ಥಿಗಳು

ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯದಲ್ಲಿ ಪ್ರಸ್ತುತ ಸುಮಾರು 10 ಸಾವಿರ ವಿದ್ಯಾರ್ಥಿಗಳು ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೆಮೋದಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ಇನ್ನೂ ಏಪ್ರಿಲ್‌ನಲ್ಲಿ ಎಂಎ, ಎಂಎಸ್ಸಿ, ಎಂ.ಕಾಂ, ಎಂಬಿಎ ಸೇರಿದಂತೆ ಹಲವು ಕೋರ್ಸ್‌ಗಳಿಗೆ ನಡೆದಿದ್ದ 2ನೇ ವರ್ಷದ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೇ ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ ಈ ಹೊಸ ಯೋಜನೆ ವಿದ್ಯಾರ್ಥಿಗಳಿಗೆ ಖುಷಿ ನೀಡಿದೆಯಾದರೂ ಫಲಿತಾಂಶವನ್ನು ಸರಿಯಾದ ಸಮಯಕ್ಕೆ ಪ್ರಕಟಿಸಲಿದಿಯೇ ಎನ್ನುವುದನ್ನು ಕಾದು ನೋಡಬೇಕಿದೆ.

English summary
Karnataka Open University Exam results directly come to students whatsapp Number very soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X