ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣೆಗೆ ಸಂಬಂಧಿಸಿದಂತೆ ಹೊಸದೊಂದು ಬಾಂಬ್ ಸಿಡಿಸಿದ ಶಾಸಕ‌ ಜಿಟಿ ದೇವೇಗೌಡ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 26: ರಾಜ್ಯದಲ್ಲಿ ಪಕ್ಷಾಂತರ ಹಾಗೂ ಶಾಸಕರ ಪಟ್ಟಿ ಇರುವ ಬಗ್ಗೆ ಭಾರೀ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಈ ಬಾರಿ ಅವಧಿಗೂ ಮುನ್ನ ವಿಧಾನಸಭಾ ಚುನಾವಣೆ ಬರಲಿದೆ‌ ಎಂಬ ಭಾವನೆ ಮೂಡಿದ್ದು, 2022ರಲ್ಲೇ ಚುನಾವಣೆ ಆಗುವ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳುವ ಮೂಲಕ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ‌ ಜಿ.ಟಿ. ದೇವೇಗೌಡ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ''ಚುನಾವಣೆಗೆ ಇನ್ನು ಒಂದೂವರೆ ವರ್ಷ ಇದೆ. ಇಷ್ಟು ಬೇಗ ಪಕ್ಷಾಂತರಗಳ ಮಾತು ಏಕೆ? ಶಾಸಕರ ಲಿಸ್ಟ್ ಇದೆ ಎಂದು ಹೇಳುವವರು ಲಿಸ್ಟ್ ಬಿಡುಗಡೆ ಮಾಡಿದ್ದಾರಾ? ಎಂದು ಪ್ರಶ್ನಿಸಿದ ಅವರು, ಹಾಗಾದ್ರೆ ಯಾವ ಲಿಸ್ಟ್ ಇದೆ ಅಂತಾರೆ ಅವರನ್ನ ಬಿಡುಗಡೆ ಮಾಡಲು ಹೇಳಿ. ಕೆಲವರು ಚುನಾವಣೆ ಬೇಗ ಬಂದು ಬಿಡುತ್ತದೆ ಎಂಬ ಆತುರದಲ್ಲಿದ್ದು, ಹೀಗಾಗಿ ಕೆಲವರು ಹೀಗೆಲ್ಲಾ ಮಾತನಾಡುತ್ತಿದ್ದಾರೆ. ಕೆಲವು ಪಕ್ಷಾಂತರ ಕೊನೆ ಕ್ಷಣದಲ್ಲಿ ನಿರ್ಧಾರವಾಗುತ್ತದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಇಷ್ಟು ಆತುರ ಬೇಡ'' ಎಂದು ಮೈಸೂರಿನಲ್ಲಿ ಶಾಸಕರ ಪಟ್ಟಿ, ಹಾಗೂ ಪಕ್ಷಾಂತರದ ಬಗ್ಗೆ ಜಿಟಿಡಿ ಹೇಳಿದರು.

ಅಲ್ಲದೇ ಈ ಬಾರಿ ದೊಡ್ಡ ಮಟ್ಟದ ಪಕ್ಷಾಂತರ ಆಗುತ್ತದೆ ಎಂದು ನನಗೆ ಅನಿಸುವುದಿಲ್ಲ. ಏಕೆಂದರೆ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಮೂರು ಪಕ್ಷಗಳು ಸಮರ್ಥವಾಗಿದೆ. ಮೂರು ಪಕ್ಷಗಳಲ್ಲು ಜಿದ್ದಾಜಿದ್ದಿ ಪೈಪೋಟಿ ಇದೆ.

Karnataka may expect early elections in 2022: MLA G. T Devegowda

ಹೀಗಾಗಿ ದೊಡ್ಡ ಮಟ್ಟದ ಪಕ್ಷಾಂತರ ಲಕ್ಷಣ ಕಾಣುತ್ತಿಲ್ಲ ಎಂದ ಅವರು, ಮೂರು ಪಕ್ಷಗಳಲ್ಲು ಎಲ್ಲರಿಗು ಸ್ನೇಹಿತರು ಇದ್ದಾರೆ, ಕೆಲವರು ಕಾರ್ಡ್‌ ಆಡಲು, ಪಾರ್ಟಿಗೆ ಸೇರುತ್ತಾರೆ. ಇದರಲ್ಲೆಲ್ಲ ರಾಜಕೀಯ ಇರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
English summary
Amid of political development in all parties, Karnataka may expect early Assembly elections in 2022 said MLA G. T Devegowda
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X