ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಸ್ತಿ ವಿವಾದ : ಕಾಂತರಾಜೇ ಅರಸ್ ಅರ್ಜಿ ಹೈಕೋರ್ಟ್‌ನಲ್ಲಿ ವಜಾ

|
Google Oneindia Kannada News

ಮೈಸೂರು, ಏ.7 : ಮೈಸೂರು ಸಂಸ್ಥಾನದ ಆಸ್ತಿಯಲ್ಲಿ ಪಾಲು ನೀಡಬೇಕು ಎಂದು ಕಾಂತರಾಜೇ ಅರಸ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಕೆಳಹಂತದ ನ್ಯಾಯಾಲಯದಲ್ಲಿಯೇ ಈ ಅರ್ಜಿಯ ವಿಚಾರಣೆ ಮುಂದುವರೆಯಲಿದೆ.

ಬೆಂಗಳೂರಿನ ಮೇಯೋ ಹಾಲ್ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸೋದರಳಿಯ ಕಾಂತರಾಜೇ ಅರಸ್ ಪರವಾಗಿ ವಕೀಲ ಗೋವಿಂದರಾಜು ಅವರು ಫೆ.19ರಂದು ಅರ್ಜಿ ಸಲ್ಲಿಸಿದ್ದರು. ಫೆ.23ರಂದು ದತ್ತು ಸ್ವೀಕಾರ ಸಮಾರಂಭವಿತ್ತು ಅದಕ್ಕೂ ಮೊದಲೇ ಈ ಅರ್ಜಿ ಸಲ್ಲಿಕೆಯಾಗಿತ್ತು.

Kantharaj Urs

ಮೈಸೂರು ಸಂಸ್ಥಾನದ ಆಸ್ತಿಯಲ್ಲಿ ಪಾಲು ನೀಡಬೇಕು ಮತ್ತು ಈಗಿರುವ ಆಸ್ತಿಯನ್ನು ಮೂರನೇ ವ್ಯಕ್ತಿಗೆ ಹಸ್ತಾಂತರ ಮಾಡದಂತೆ ತಡೆ ನೀಡಬೇಕು ಎಂದು ಕಾಂತರಾಜೇ ಅರಸ್ ಅರ್ಜಿಯಲ್ಲಿ ಮನವಿ ಮಾಡಿದ್ದರು. ಆದರೆ, ಕೋರ್ಟ್ ಆಸ್ತಿ ಹಸ್ತಾಂತರಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು. [ಕಾಂತರಾಜೇ ಅರಸ್ ವಿರುದ್ಧ ಭೂ ದಾಖಲೆ ತಿದ್ದುಪಡಿ ಆರೋಪ]

ಹೈಕೋರ್ಟ್‌ಗೆ ಮೊರೆ : ಸಿಟಿ ಸಿವಿಲ್ ನ್ಯಾಯಾಲಯ ತಡೆ ನೀಡಲು ನಿರಾಕರಿಸಿರುವುದನ್ನು ಪ್ರಶ್ನಿಸಿ ಕಾಂತರಾಜೇ ಅರಸ್ ಪರ ವಕೀಲರು ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್ ಸೂಚನೆ ನೀಡಿತ್ತು. [ಯದುವೀರ್ ಯದುವಂಶದ 27ನೇ ಅರಸ]

ಏ.6ರ ಸೋಮವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಪುನಃ ಅರ್ಜಿಯ ವಿಚಾರಣೆ ನಡೆಯಿತು. ಈ ಸಂದರ್ಭದಲ್ಲಿ ಅರ್ಜಿಯ ವಿಚಾರಣೆ ಕೆಳಹಂತದ ನ್ಯಾಯಾಲಯದಲ್ಲಿಯೇ ನಡೆಯಲಿ ಎಂದು ಹೈಕೋರ್ಟ್ ಹೇಳಿದ್ದು, ಕಾಂತರಾಜೇ ಅರಸ್ ಮೇಲ್ಮನವಿಯನ್ನು ತಿರಸ್ಕರಿಸಿದೆ.

ರಾಣಿ ಪ್ರಮೋದಾ ದೇವಿ ಅವರ ಪರವಾಗಿ ಹೈಕೋರ್ಟ್‌ನಲ್ಲಿ ನಳಿನಿ ಚಿದಂಬರಂ ವಾದ ಮಂಡಿಸಿದರು. ಹೈಕೋರ್ಟ್ ಅರ್ಜಿಯ ವಿಚಾರಣೆಗೆ ಕೆಳಹಂತದ ನ್ಯಾಯಾಲಯದಲ್ಲಿ ಅವಕಾಶ ನೀಡಿದ್ದು, ಮೇಯೋ ಹಾಲ್ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಏ.10ರಂದು ಅರ್ಜಿಯ ವಿಚಾರಣೆ ನಡೆಯಲಿದೆ.

English summary
Chaduranga Kantharaj Urs has sought his share in properties owned by the Mysuru royal family. The Karnataka high court dismissed Urs petition on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X