ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶರತ್ ಬಿ. ಮತ್ತು ಸರ್ಕಾರದ ನಡುವೆ ಮತ್ತೊಂದು ಕಾನೂನು ಹೋರಾಟ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 20: ಐಎಎಸ್ ಅಧಿಕಾರಿ ಬಿ. ಶರತ್ ಮತ್ತು ಕರ್ನಾಟಕ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಕಾನೂನು ಸಮರ ಆರಂಭವಾಗಿದೆ. ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ನೇಮಕ ಮಾಡಿದ ಕರ್ನಾಟಕ ಸರ್ಕಾರದ ಆದೇಶವನ್ನು ಶರತ್ ಬಿ. ಸಿಎಟಿಯಲ್ಲಿ ಪ್ರಶ್ನೆ ಮಾಡಿದ್ದರು.

ಡಿಸೆಂಬರ್ 15ರಂದು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ಮೈಸೂರು ಜಿಲ್ಲಾಧಿಕಾರಿಯಾಗಿ ಶರತ್ ಬಿ. ಅವರನ್ನು ಮರು ನೇಮಕ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿತ್ತು. ಡಿಸೆಂಬರ್ 22ರೊಳಗೆ ಮರು ನೇಮಕ ಕುರಿತು ಆದೇಶ ಹೊರಡಿಸಬೇಕು ಎಂದು ಹೇಳಿತ್ತು.

ಮೈಸೂರು ಜಿಲ್ಲಾಧಿಕಾರಿ ನೇಮಕ, ರೋಹಿಣಿ ಸಿಂಧೂರಿಗೆ ಹಿನ್ನಡೆ!ಮೈಸೂರು ಜಿಲ್ಲಾಧಿಕಾರಿ ನೇಮಕ, ರೋಹಿಣಿ ಸಿಂಧೂರಿಗೆ ಹಿನ್ನಡೆ!

ಸರ್ಕಾರದ ಆದೇಶವನ್ನು ಪ್ರಶ್ನಿಸಿ ಶರತ್ ಬಿ. ಸಂಕಷ್ಟಕ್ಕೆ ಸಿಲುಕಿದರೆ? ಎಂಬ ಪ್ರಶ್ನೆ ಎದುರಾಗಿದೆ. ಕರ್ನಾಟಕ ಸರ್ಕಾರ ಶರತ್ ಬಿ. ವಿರುದ್ಧ ಸಿಎಟಿಗೆ ಅಫಿಡೆವಿಟ್ ಸಲ್ಲಿಕೆ ಮಾಡಿದೆ. ಸಿಎಟಿ ಡಿಸೆಂಬರ್ 22ರಂದು ಈ ಅಫಿಡೆವಿಟ್ ವಿಚಾರಣೆ ನಡೆಸುವುದಾಗಿ ಹೇಳಿದೆ.

 ವರ್ಗಾವಣೆ ಪ್ರಶ್ನಿಸಿ ಕೆಎಟಿ ಮೆಟ್ಟಿಲೇರಿದ ಮೈಸೂರಿನ ಹಿಂದಿನ ಡಿಸಿ ಬಿ. ಶರತ್ ವರ್ಗಾವಣೆ ಪ್ರಶ್ನಿಸಿ ಕೆಎಟಿ ಮೆಟ್ಟಿಲೇರಿದ ಮೈಸೂರಿನ ಹಿಂದಿನ ಡಿಸಿ ಬಿ. ಶರತ್

 Karnataka Govt Affidavit To CAT Against IAS Officer B Sharath

ರಾಜ್ಯ ಸರ್ಕಾರದಿಂದ ಶರತ್ ಬಿ. ವಿರುದ್ದ 10 ಪುಟಗಳ ಅಫಿಡೇವಿಟ್‌ ಅನ್ನು ಸಿಎಟಿಗೆ ಸಲ್ಲಿಕೆ ಮಾಡಿದ್ದು, ಹಲವು ಆರೋಪಗಳನ್ನು ಮಾಡಿದೆ. ಶರತ್ ಬಿ. ಅವರನ್ನು ರೇಷ್ಮೆ ಮಾರುಕಟ್ಟೆ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾಗಿ ನಿಯೋಜಿಸಲಾಗಿದೆ. ಆದರೆ, ಮೂರು ತಿಂಗಳಿನಿಂದಲೂ ಅವರು ಅಧಿಕಾರ ಸ್ವೀಕರಿಸಿಲ್ಲ ಎಂದು ಉಲ್ಲೇಖಿಸಲಾಗಿದೆ.

 ಶರತ್ ವರ್ಗಾವಣೆ ವಿಚಾರ; ಮತ್ತೆ ವಿಚಾರಣೆ ಮುಂದೂಡಿದ ಸಿಎಟಿ ಶರತ್ ವರ್ಗಾವಣೆ ವಿಚಾರ; ಮತ್ತೆ ವಿಚಾರಣೆ ಮುಂದೂಡಿದ ಸಿಎಟಿ

ಭಾರತೀಯ ಚುನಾವಣಾ ಆಯೋಗ ಶರತ್ ಬಿ. ಅವರನ್ನು ಬಿಹಾರ ಚುನಾವಣೆ ವೀಕ್ಷಕರಾಗಿ ನಿಯೋಜನೆ ಮಾಡಿತ್ತು. ಆ ಕರ್ತವ್ಯಕ್ಕೆ ಸಹ ಅವರು ಹಾಜರಾಗಿಲ್ಲ. ಸಾರ್ವಜನಿಕ ಅಧಿಕಾರಿಯಾಗಿ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಆರೋಪಿಸಲಾಗಿದೆ. ಅನಾರೋಗ್ಯದ ಕಾರಣವನ್ನು ಶರತ್ ಅವರು ಹೇಳಿದ್ದಾರೆ.

ಆದರೆ, ಸರಿಯಾದ ದಾಖಲೆಗಳನ್ನು ಕೊಡದೆ ರಜೆ ಮೇಲೆ ಇರುತ್ತಾರೆ. ಇದು ಕಾನೂನಿಗೆ ವಿರುದ್ದವಾದ ಸರ್ಕಾರಿ ಅಧಿಕಾರಿಯ ನಡೆಯಾಗಿದೆ. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ನವೆಂಬರ್ 25ರಂದು ಶರತ್‌ಗೆ ಶೋಕಾಸ್ ನೋಟಿಸ್ ಸಹ ನೀಡಿದೆ. 7 ದಿನದಲ್ಲಿ ಉತ್ತರವನ್ನು ನೀಡಬೇಕಿತ್ತು. ಆದರೆ, ಇದುವರೆಗೂ ಉತ್ತರಿಸಿಲ್ಲ ಎಂದು ಸರ್ಕಾರ ಹೇಳಿದೆ.

ನಿಯೋಜಿತ ಕರ್ತವ್ಯಕ್ಕೆ ಹಾಜರಾಗಲು ಅನಾರೋಗ್ಯದ ಕಾರಣ ಹೇಳಿರುವ ಶರತ್ ಬಿ. ಅವರು ಮೈಸೂರಿನಂತಹ ಸೂಕ್ಷ್ಮ ಪ್ರದೇಶಕ್ಕೆ ಜಿಲ್ಲಾಧಿಕಾರಿಯಾಗಲು ಹೇಗೆ ಸಾಧ್ಯ?. ಈ ಕಾರಣದಿಂದಾಗಿ ಸರ್ಕಾರದ ಆದೇಶ ಪ್ರಶ್ನಿಸಿ ಶರತ್ ಸಲ್ಲಿಸಿರುವ ಅರ್ಜಿ ವಜಾ ಮಾಡಬೇಕು ಎಂದು ಸರ್ಕಾರ ಸಿಎಟಿಗೆ ಮನವಿ ಮಾಡಿದೆ.

English summary
Karnataka Government filed affidavit in Central Administrative Tribunal against IAS officer B. Sharath who challenged Rohini Sindhuri appointment as Mysusu DC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X