ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಬ್ರಾಹ್ಮಣ ಹಿರಿಯರ ಸಮಾವೇಶ ಆರಂಭ

By Kiran B Hegde
|
Google Oneindia Kannada News

ಮೈಸೂರು, ಜ. 23: ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಗೋವಿಂದ ರಾವ್ ಸ್ಮಾರಕ ಹಾಲ್‌ನಲ್ಲಿ ಸಂಧ್ಯಾ ಸುರಕ್ಷಾ ಸಮಿತಿ ಆಯೋಜಿಸಿರುವ ಎರಡು ದಿನಗಳ 'ಕರ್ನಾಟಕ ಬ್ರಾಹ್ಮಣ ಹಿರಿಯ ನಾಗರಿಕರ ಸಮಾವೇಶ -2015' ಶುಕ್ರವಾರ ಆರಂಭವಾಯಿತು.

ಮಹಾನಾಗಪತಿ ಪೂಜೆಯೊಂದಿಗೆ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ತ್ರಿಮತಸ್ಥ ಬ್ರಾಹ್ಮಣರ 60ಕ್ಕಿಂತ ಹೆಚ್ಚು ವಯಸ್ಸಾದ ದಂಪತಿಗಳಿಗೆ ಷಷ್ಠ್ಯಬ್ದಿ ಶಾಂತಿ, 70ಕ್ಕಿಂತ ಹೆಚ್ಚು ವಯಸ್ಸಾದ ದಂಪತಿಗಳಿಗೆ ಭೀಮರಥ ಶಾಂತಿ ಮತ್ತು 80ಕ್ಕಿಂತ ಹೆಚ್ಚು ವಯಸ್ಸಾದ ದಂಪತಿಗಳಿಗೆ ಉಗ್ರರಥ ಶಾಂತಿ ಕಾರ್ಯಕ್ರಮ ನಡೆಯಿತು. ವೇದ ಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮಾ ಪೂಜೆಯ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. [ಗಿಡದಾಗ ಹುಟ್ಟುತಾವ ಕನ್ಯಾ]

pht

ಉದ್ಯಮಿ ಆರ್. ಗುರು, ಕರ್ನಾಟಕ ಬ್ರಾಹ್ಮಣ ಹಿರಿಯ ನಾಗರಿಕರ ವೇದಿಕೆಯ ರಾಜ್ಯಾಧ್ಯಕ್ಷ ಕೆ. ರಘುರಾಮ್, ಕಾರ್ಯಾಧ್ಯಕ್ಷ ಬಿ.ಆರ್. ನಟರಾಜ್ ಜೋಯಿಸ್, ಎಸ್. ವಸಂತ, ಜಿ.ಆರ್. ವಿದ್ಯಾರಣ್ಯ, ಜೆ. ರಮೇಶ, ಎಂ.ಎಸ್. ಅನಂತಪ್ರಸಾದ ಮತ್ತು ಇತರರು ಪಾಲ್ಗೊಂಡಿದ್ದರು. ಸುಮಾರು 500ಕ್ಕಿಂತ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. [ಬ್ರಾಹ್ಮಣರನ್ನು ಕಂಡರೆ ನಗಬೇಕೋ ಅಳಬೇಕೋ]

ಎರಡು ದಿನಗಳ ಸಮಾವೇಶದಲ್ಲಿ ವಿವಿಧ ವಿಷಯಗಳ ಕುರಿತು ತಜ್ಞರಿಂದ ಉಪನ್ಯಾಸ ನಡೆಯಲಿದೆ ಎಂದು ಸಂಧ್ಯಾ ಸುರಕ್ಷಾ ಸಮಿತಿ ತಿಳಿಸಿದೆ. [ಬ್ರಾಹ್ಮಣ, ವೈಶ್ಯರಿಗೂ ಮೀಸಲಾತಿ]

English summary
The two day Karnataka Brahmin Senior Citizens Meet-2015 began at Govinda Rao Memorial Hall on JLB road in mysuru city. Many shanti pujas have been conducted for Trimathastha Brahmin couples.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X