ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದ್ವಿತೀಯ ಪಿಯು ಫಲಿತಾಂಶ: ಸ್ಪಂದನಾ ಮೈಸೂರು ಜಿಲ್ಲೆಗೆ ಪ್ರಥಮ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 14: ಮೈಸೂರು ನಗರದ ಮರಿಮಲ್ಲಪ್ಪ ಕಾಲೇಜಿನ ವಿದ್ಯಾರ್ಥಿನಿ ಬಿ.ಎನ್ ಸ್ಪಂದನಾ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ 600 ಕ್ಕೆ 582 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ‌ ಸ್ಥಾನ ಪಡೆದಿದ್ದಾಳೆ.

Recommended Video

ಒಂದು ವಾರದ ಲಾಕ್ ಡೌನ್ , ಎನಿರುತ್ತೆ , ಎನಿರಲ್ಲಾ ? | karnataka Lockdown | Oneindia Knanada

ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಬಿಳಿಕೆರೆ ನಿವಾಸಿ ನವರತ್ನ ಕುಮಾರ್‌, ಶೋಭಾ ದಂಪತಿ ಪುತ್ರಿಯಾಗಿರುವ ಸ್ಪಂದನಾ ತಂದೆ ಬಲ್ಲೇನಹಳ್ಳಿಯ ಸರ್ಕಾರಿ ಶಾಲೆಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ವಿಜಯಪುರಕ್ಕೆ ಕೊನೆ ಸ್ಥಾನದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ವಿಜಯಪುರಕ್ಕೆ ಕೊನೆ ಸ್ಥಾನ

ದ್ವಿತೀಯ ಪಿಯುಸಿ ಕಲಾ ವಿಭಾಗದ ಇತಿಹಾಸ-100, ಅರ್ಥಶಾಸ್ತ್ರ-100, ಭೂಗೋಳ ಶಾಸ್ತ್ರ-98, ರಾಜ್ಯಶಾಸ್ತ್ರ-98, ಕನ್ನಡ-96, ಇಂಗ್ಲೀಷ್-90 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸುವ ಮೂಲಕ ವಿದ್ಯಾರ್ಥಿನಿ ಸ್ಪಂದನಾ ಮೈಸೂರು ಜಿಲ್ಲೆ, ಕಾಲೇಜು ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ.

2nd PUC Result 2020: Spandana Topper In Mysuru District

""ನಮ್ಮ ಕಾಲೇಜು ಸ್ಥಾಪನೆಯಾಗಿ 48 ವರ್ಷಗಳಾಗಿದೆ. ಈ ಅವಧಿಯಲ್ಲಿ ಕಲಾ ವಿಭಾಗದಲ್ಲಿ ಕಾಲೇಜಿಗೆ ಅತಿ ಹೆಚ್ಚು ಅಂಕಗಳನ್ನು ತಂದುಕೊಟ್ಟ ಕೀರ್ತಿ ಈ ವಿದ್ಯಾರ್ಥಿನಿ ಸ್ಪಂದನಾಗೆ ಸಲ್ಲುತ್ತದೆ'' ಎಂದು ಮರಿಮಲ್ಲಪ್ಪ ಕಾಲೇಜಿನ ಪ್ರಾಂಶುಪಾಲ ಬಿ.ಆರ್ ನೀಲಕಂಠ ಶ್ಲಾಘಿಸಿದ್ದಾರೆ.

English summary
BN Spandana topper in the Mysuru district with 582 out of 600 in the secondary PUC result.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X