ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿಗೆ 'ಓದಿನ ಮನೆ'ಗೆ ನೀವೂ ಒಮ್ಮೆ ಹೋಗಿಬನ್ನಿ...

ತನು ಕನ್ನಡ, ಮನ ಕನ್ನಡ, ಧನ ಕನ್ನಡ...ಕವಿತೆಯೊಂದರ ಸಾಲುಗಳಿವು. ಅವನ್ನು ಜೀವನದಲ್ಲಿ ಅಕ್ಷರಶಃ ಪಾಲಿಸಿಕೊಂಡು ಬರುತ್ತಿರುವ ಹಿರಿಯ ನಾಗರೀಕರೊಬ್ಬರು ಮೈಸೂರು ನಗರದಲ್ಲಿದ್ದಾರೆ. ಆನಂದಮಯ ಈ ಜಗ ಹೃದಯ ಎಂಬ ಕುವೆಂಪು ವಾಣಿಯನ್ನು ಅವರು ಓದುಗರಲ್ಲಿ ಕ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ನವೆಂಬರ್ 2 : ತನು ಕನ್ನಡ, ಮನ ಕನ್ನಡ, ಧನ ಕನ್ನಡ... ಕವಿತೆಯೊಂದರ ಸಾಲುಗಳಿವು. ಅವನ್ನು ಜೀವನದಲ್ಲಿ ಅಕ್ಷರಶಃ ಪಾಲಿಸಿಕೊಂಡು ಬರುತ್ತಿರುವ ಹಿರಿಯ ನಾಗರಿಕರೊಬ್ಬರು ಮೈಸೂರು ನಗರದಲ್ಲಿದ್ದಾರೆ. 'ಆನಂದಮಯ ಈ ಜಗ ಹೃದಯ' ಎಂಬ ಕುವೆಂಪು ವಾಣಿಯನ್ನು ಅವರು ಓದುಗರಲ್ಲಿ ಕನ್ನಡ ವಾಚನಾಭಿರುಚಿ ಬೆಳೆಸುವ ಮೂಲಕ ಕಂಡುಕೊಂಡಿದ್ದಾರೆ.

'ಕರ್ನಾಟಕದ ಎಲ್ಲಾ ಶಾಲೆಗಳು ಕಡ್ಡಾಯವಾಗಿ ಕನ್ನಡ ಕಲಿಸಬೇಕು' 'ಕರ್ನಾಟಕದ ಎಲ್ಲಾ ಶಾಲೆಗಳು ಕಡ್ಡಾಯವಾಗಿ ಕನ್ನಡ ಕಲಿಸಬೇಕು'

ಮೈಸೂರು ನಿವಾಸಿ ಬಿ.ಪ್ರಭಾಕರ ಅವರೇ ಸುಮಾರು ಮೂವತ್ತು ವರ್ಷಗಳಿಂದ ಈ ಕನ್ನಡ ಸೇವೆಯಲ್ಲಿ ನಿರತವಾಗಿರುವವರು. ಅವರಿಗಿದ್ದ ಪುಸ್ತಕ ಓದುವ ಗೀಳು ಅವರ ಈ ಸೇವೆಗೆ ನಾಂದಿಯಾಯಿತು. ನಗರದ ತ್ಯಾಗರಾಜ ರಸ್ತೆಯ 6ನೇ ತಿರುವಿನಲ್ಲಿ ಬಾಡಿಗೆ ಮಳಿಗೆಯೊಂದರಲ್ಲಿ 'ಓದಿನ ಮನೆ' ಹೆಸರಿನಲ್ಲಿ ವಾಚನಾಲಯವೊಂದನ್ನು ಸ್ಥಾಪಿಸಿದ್ದಾರೆ. ಈಗ ಅವರಿಗೆ 75 ವರ್ಷ ವಯಸ್ಸು. ಈ ಇಳಿವಯಸ್ಸಿನಲ್ಲಿ ಕೂಡ ಅವರ ಉತ್ಸಾಹಕ್ಕೆ ಕನ್ನಡದ ಶಕ್ತಿಯೇ ಕಾರಣ ಎನ್ನಬಹುದು.

Kannada's one and only Odina Mane is in Mysore

ಹೌದು, ಪ್ರಸ್ತುತ ಮಳಿಗೆಯ ಬಾಡಿಗೆ ಮಾಸಿಕ 3000 ರೂ. ಇದ್ದು, 10 ಮಂದಿ ಕನ್ನಡ ಸಾಹಿತ್ಯ ಪ್ರಿಯರು ಒಂದೊಂದು ತಿಂಗಳ ಬಾಡಿಗೆ ನೀಡುತ್ತಿದ್ದಾರೆ. ಅದರಲ್ಲಿಯೂ ಇಬ್ಬರು ಹೆಚ್ಚುವರಿಯಾಗಿ ಒಂದೊಂದು ತಿಂಗಳ ಬಾಡಿಗೆ ಕೊಡುತ್ತಿದ್ದಾರೆ. ಶಿವಕುಮಾರ್, ಬಾಲಸುಬ್ರಹ್ಮಣ್ಯ, ಡಾ.ಚಂದ್ರಶೇಖರ್, ಎಸ್.ರಾಮಪ್ರಸಾದ್, ಶ್ರೀಧರಚಂದ್ರ, ಗಣೇಶ್ ಅಧಿಕಾರಿ, ಮುರಳೀಧರರಾವ್, ಎಂ.ಎಲ್. ಲೋಹಿತ್, ಲಕ್ಷ್ಮಿ ಕೌಶಿಕ್ ಮತ್ತು ಮಂಜುನಾಥ(ಶೆಟ್ರು) ಬಾಡಿಗೆ ಹಣ ತುಂಬುತ್ತಿರುವವರು. ಅವರಲ್ಲಿ ಮುರಳೀಧರರಾವ್ ಮತ್ತು ಲಕ್ಷ್ಮಿ ಕೌಶಿಕ್ ಅವರು ಹೆಚ್ಚುವರಿ ಒಂದೊಂದು ತಿಂಗಳ ಬಾಡಿಗೆ ನೀಡುತ್ತಿರುವವರು. ಎಂ.ಎಲ್.ಲೋಹಿತ್ ಅಮೆರಿಕ ನಿವಾಸಿಯಾಗಿದ್ದು, ಅಲ್ಲಿಂದ ಹಣ ಕಳುಹಿಸಿಕೊಡುತ್ತಿರುವುದು ವಿಶೇಷ.

ಪ್ರಭಾಕರ ಅವರು ಹಿಂದೆ ನಗರದ ತ್ಯಾಗರಾಜ ರಸ್ತೆಯಲ್ಲಿ ಮಳಿಗೆಯೊಂದರಲ್ಲಿ ಸಕ್ರ್ಯುಲೇಟಿಂಗ್ ಲೈಬ್ರರಿವನ್ನು ಕೇವಲ 100 ಪುಸ್ತಕಗಳೊಂದಿಗೆ ಆರಂಭಿಸಿದ್ದರು. ತಿಂಗಳ ಶುಲ್ಕ 10 ರೂ., ಪುಸ್ತಕಕ್ಕೆ ದಿನದ ಬಾಡಿಗೆ 10 ಪೈಸೆ ನಿಗದಿಯಾಗಿತ್ತು. ಅದನ್ನು ಕೊಡುವುದಕ್ಕೂ ಓದುಗರು ಕಷ್ಟಪಡುತ್ತಿದ್ದುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ವರ್ಷಕ್ಕೆ 50 ರೂ. ಸದಸ್ಯತ್ವ ಶುಲ್ಕ ನಿಗದಿಪಡಿಸಿ, ಹೊತ್ತಗೆಗಳನ್ನು ಬಾಡಿಗೆ ಇಲ್ಲದೆ ಎರವಲುಕೊಡಲು ಮುಂದಾದರು. ಆಗ ಗ್ರಂಥಾಲಯದ ಹೆಸರನ್ನು 'ನಮ್ಮ ಕನ್ನಡ ವಾಚನ ಭಾರತಿ' ಎಂದು ಪರಿವರ್ತಿಸಿದರು.

Kannada's one and only Odina Mane is in Mysore

ಪುಸ್ತಕಗಳ ಜೊತೆಗೆ ಕನ್ನಡ ದಿನಪತ್ರಿಕೆಗಳನ್ನು ತಂದು ಓದುವ ಅಭಿರುಚಿಯನ್ನು ಪ್ರೋತ್ಸಾಹಿಸಿದರು. ಕಾರಣಾಂತರಗಳಿಂದ ಮಳಿಗೆ ಮುಚ್ಚಿದಾಗ ರಸ್ತೆಬದಿಯಲ್ಲಿ ಕುರ್ಚಿ, ಬೆಂಚುಗಳನ್ನು ಇಟ್ಟು ದಿನಪತ್ರಿಕೆ ಓದುಗರಿಗೆ ಅನುಕೂಲ ಕಲ್ಪಿಸಿದ್ದರು. ನಂತರ 'ಓದಿನ ಮನೆ' ಸ್ಥಾಪಿಸಿದರು. ಸುಮಾರು 2000 ಪುಸ್ತಕಗಳು ವಾಚನಾಲಯದಲ್ಲಿ ಇವೆ. ಕೆಲ ಪ್ರಕಾಶಕರು, ದಾನಿಗಳು ಪುಸ್ತಕಗಳನ್ನು ಒದಗಿಸಿದ್ದಾರೆ.

ಪ್ರಭಾಕರ್ ಅವರು ಕೂಡ ತಮ್ಮಿಂದ ಸಾಧ್ಯವಾದಷ್ಟು ಪುಸ್ತಕಗಳನ್ನು ಖರೀದಿಸುತ್ತಾರೆ. ಬಾಡಿಗೆ ಮಳಿಗೆಯಲ್ಲಿ ವಾಚನಾಲಯ ತೆರೆದಾಗ ಅವರಿಗೆ ಸ್ನೇಹಿತರು, ಬಂಧುಗಳು ಆರ್ಥಿಕ ನೆರವು ನೀಡಿದ್ದಾರೆ. ಇವರ ಕನ್ನಡ ಸೇವೆ ಬಗ್ಗೆ ಕೆಲ ಪತ್ರಿಕೆಗಳು, ಮಾಧ್ಯಮಗಳಲ್ಲಿ ಪ್ರಕಟವಾದ ಲೇಖನಗಳನ್ನು ಗಮನಿಸಿದವರು ಕೂಡ ಸಹಾಯ ಹಸ್ತ ಚಾಚಿದ್ದಾರೆ.
ಹೀಗೆ ಪೋತ್ಸಾಹ ದೊರೆತರೆ ಇನ್ನೂ ಅದೆಷ್ಟೋ ಕನ್ನಡ ಮನಸ್ಸುಗಳು ನಾಡು, ನುಡಿ, ಸಾಹಿತ್ಯ, ಕಲಾಸೇವೆಗೆ ಮುನ್ನುಗ್ಗುವುದಕ್ಕೆ ತವಕಿಸುತ್ತಿರಬಹುದು ಅಲ್ಲವೇ?

English summary
B Prabhakar (75 yeas) whose love towards popularization of Kannada language has made him to set up this exclusive Kannada open library for the general public and has named it ‘Edu Namma Odina Mane’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X