ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ಮುಂದಾದ ಮೈಸೂರು ಪಾಲಿಕೆ

|
Google Oneindia Kannada News

ಮೈಸೂರು, ಅಕ್ಟೋಬರ್ 19; ಕನ್ನಡ ರಾಜ್ಯೋತ್ಸವ ಆಚರಣೆಗೆ ದಿನಗಣನೆ ಆರಂಭವಾಗಿದೆ. ನವೆಂಬರ್ 1ರಂದು ಸಂಭ್ರಮದಿಂದ ರಾಜ್ಯೋತ್ಸವ ನಡೆಸಲು ಮೈಸೂರು ಜಿಲ್ಲಾಡಳಿತ ಸಕಲ ಸಿದ್ಧತೆಯನ್ನೂ ಕೈಗೊಂಡಿದೆ. ಈ ನಡುವೆ ಮೈಸೂರು ಮಹಾನಗರ ಪಾಲಿಕೆ ಕನ್ನಡ ನಾಮಫಲಕಗಳಿಗೆ ಆದ್ಯತೆ ನೀಡಬೇಕೆಂಬ ಉದ್ದೇಶದಿಂದ ನಿರ್ಣಯವೊಂದನ್ನು ಕೈಗೊಳ್ಳಲು ಚಿಂತನೆ ನಡೆಸಿದೆ.

ಹೌದು! ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇತ್ತೀಚೆಗೆ ಪರಭಾಷೆ ನಾಮಫಲಕಗಳ ಹಾವಳಿ ಹೆಚ್ಚಾಗಿದೆ. ಉದ್ದಿಮೆದಾರರು ತಮಗಿಷ್ಟ ಬಂದ ಭಾಷೆಗಳಲ್ಲಿ ನಾಮಫಲಕ ಹಾಕುವ ಮೂಲಕ ಕನ್ನಡವನ್ನು ಕಡೆಗಣಿಸುತ್ತಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಗೆ ದಿನಾಂಕ ನಿಗದಿ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಗೆ ದಿನಾಂಕ ನಿಗದಿ

ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಕಡ್ಡಾಯವಾಗಿ ಉಪಯೋಗಿಸಬೇಕೆಂದು ಸರಕಾರ ಈಗಾಗಲೇ ಆದೇಶ ಹೊರಡಿಸಿದೆ. ಆದರೆ ಈ ಆದೇಶವು ಸರಿಯಾಗಿ ಪಾಲನೆ ಆಗುತ್ತಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಮಹಾನಗರ ಪಾಲಿಕೆ, ಕನ್ನಡದಲ್ಲಿ ನಾಮಫಲಕ ಅಳವಡಿಕೆಗೆ ಆದ್ಯತೆ ನೀಡಬೇಕು ಎಂದು ನಿರ್ಣಯ ಕೈಗೊಳ್ಳಲು ಮುಂದಾಗಿದೆ.

 ಕನ್ನಡ ಮಾಧ್ಯಮದಲ್ಲಿ ಇಂಜಿಯರಿಂಗ್ ಶಿಕ್ಷಣಕ್ಕೆ ಅನುಮತಿ; ಸಿಎಂ ಬೊಮ್ಮಾಯಿ ಕನ್ನಡ ಮಾಧ್ಯಮದಲ್ಲಿ ಇಂಜಿಯರಿಂಗ್ ಶಿಕ್ಷಣಕ್ಕೆ ಅನುಮತಿ; ಸಿಎಂ ಬೊಮ್ಮಾಯಿ

Kannada In Sign Board Mysuru City Corporation Resolution Soon

ರಾಜಾಧಾನಿ ಬೆಂಗಳೂರಿನ ನಂತರ ಮೈಸೂರು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಕೈಗಾರಿಕೆ, ಹೋಟೆಲ್, ಶೋ ರೂಂ ಎಲ್ಲವೂ ಸಾಂಸ್ಕೃತಿಕ ನಗರಿಯಲ್ಲಿ ತಲೆ ಎತ್ತುತ್ತಿದೆ. ನಗರದಲ್ಲಿರುವ ಬಹುತೇಕ ಹೊಟೇಲ್, ಶೋ ರೂಂ ಸೇರಿದಂತೆ ಉದ್ದಿಮೆಗಳಲ್ಲಿ ನಾಮಫಲಕವನ್ನು ಆಂಗ್ಲ ಭಾಷೆಯಲ್ಲಿ ಮಾತ್ರ ಅಳವಡಿಸುವ ಮೂಲಕ ಕನ್ನಡವನ್ನು ಕಡೆಗಣಿಸಲಾಗಿದೆ. ಇನ್ನೂ ಕೆಲವೆಡೆ ಮೊದಲನೇ ಆದ್ಯತೆಯಾಗಿ ಕನ್ನಡ ಭಾಷೆಯನ್ನು ಬಳಸದೇ ಎರಡನೇ ಮತ್ತು ಮೂರನೇ ಸ್ಥಾನದಲ್ಲಿ ಬಳಕೆ ಮಾಡಲಾಗುತ್ತಿದೆ.

ಅಯ್ಯೋ ಕನ್ನಡ ಕಟುಕರ ಕೈಯಲ್ಲಿ ಸಿಕ್ಕಿಕೊಂಡಿದೆ! ಅಯ್ಯೋ ಕನ್ನಡ ಕಟುಕರ ಕೈಯಲ್ಲಿ ಸಿಕ್ಕಿಕೊಂಡಿದೆ!

ಕೌನ್ಸಿಲ್ ಸಭೆಯಲ್ಲಿ ಚರ್ಚೆ; ಮೈಸೂರು ಕಲೆಗಳ ತವರೂರು. ಕನ್ನಡ ಸಾಹಿತ್ಯ, ಸಿನಿಮಾ, ವಿಜ್ಞಾನ ಕ್ಷೇತ್ರಕ್ಕೆ ತನ್ನದೆ ಕೊಡುಗೆ ನೀಡಿದೆ. ಹೀಗಿದ್ದರೂ ಇತ್ತೀಚಿನ ದಿನಗಳಲ್ಲಿ ಆಂಗ್ಲ ಹಾಗೂ ಹಿಂದಿ ಭಾಷೆ ಹೇರಿಕೆ ಹೆಚ್ಚಾಗಿದೆ. ಹಾಗಾಗಿ ಖುದ್ದು ಮೇಯರ್ ಸುನಂದ ಪಾಲನೇತ್ರ ಕನ್ನಡದ ಕಹಲೆ ಮೊಳಗಿಸಲು ಮುಂದಾಗಿದ್ದಾರೆ.

ಕೌನ್ಸಿಲ್ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲು ನಿರ್ಧರಿಸಿದ್ದಾರೆ. ಈ ಸಂಬಂಧ ನಗರದೆಲ್ಲೆಡೆ ಮೇಯರ್ ಸುನಂದ ಪಾಲನೇತ್ರ ಸಂಚರಿಸಿ ಎಲ್ಲೆಲ್ಲಿ ಕನ್ನಡ ನಾಮಫಲಕಗಳಿಲ್ಲ? ಇತರೆ ಭಾಷೆಗಳ ನಾಮಫಲಕ ಎಲ್ಲಿದೆ ಎಂಬುದುನ್ನು ಪಟ್ಟಿ ಮಾಡಿದ್ದಾರೆ.

ಅಲ್ಲದೆ, ಕನ್ನಡವನ್ನು ಮೂರನೇ ಭಾಷೆಯಲ್ಲಿ ಆದ್ಯತೆ ನೀಡಿರುವುದನ್ನು ಗಮನಿಸಿದ್ದಾರೆ. ಇದೆಲ್ಲವೂ ತೆರವುಗೊಳಿಸಿ ಕನ್ನಡಕ್ಕೆ ಮೊದಲನೇ ಪ್ರಾಮುಖ್ಯತೆ ಕೊಟ್ಟು, ನಾಮಫಲಕದ ಮೊದಲ ಸಾಲನ್ನು ಕನ್ನಡದಲ್ಲಿ ಮತ್ತು ನಂತರದ ಸಾಲುಗಳನ್ನು ಇತರೆ ಭಾಷೆಗಳಲ್ಲಿ ಬರೆಸಿರುವಂತಹ ನಾಮಫಲಕ ಅಳವಡಿಸಲು ಆದೇಶ ಹೊರಡಿಸಬೇಕು ಎಂದು ಮೇಯರ್ ಸುನಂದ ಪಾಲನೇತ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರಿಗೆ ಪತ್ರ ಕೂಡ ಬರೆದಿದ್ದಾರೆ.

2 ವರ್ಷದ ಹಿಂದೆ ಹೋರಾಟ; :ಎರಡು ವರ್ಷಗಳ ಹಿಂದೆಯೇ ನಗರದಲ್ಲಿ ಕನ್ನಡ ನಾಮಫಲಕ ಅಳವಡಿಕೆಗೆ ಆದ್ಯತೆ ನೀಡಬೇಕು ಎಂದು ಹೋರಾಟ ನಡೆಸಿದ್ದೆವು. ಈ ಬಾರಿ ನಗರ ಪಾಲಿಕೆಯೇ ಈ ಬಗ್ಗೆ ನಿರ್ಣಯ ಕೈಗೊಳ್ಳಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ರಾಜ್ಯದ ಇತರೇ ಸ್ಥಳೀಯ ಸಂಸ್ಥೆಗಳು ಈ ಮಾದರಿ ಅನುಸರಿಸಬೇಕಿದೆ" ಎಂದು ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಹೇಳಿದ್ದಾರೆ.

ನಾಮಫಲಕ ಅಳವಡಿಕೆ ಅಜೆಂಡಾ; "ನಗರದಲ್ಲಿ ಕನ್ನಡ ಹೊರತುಪಡಿಸಿ ಇತರೆ ಭಾಷೆಗಳಲ್ಲಿ ಉದ್ದಿಮೆ ನಾಮಫಲಕ ಅಳವಡಿಸಲಾಗುತ್ತಿದೆ. ಹಿನ್ನೆಲೆಯಲ್ಲಿ ನಾಮಫಲಕ ಅಳವಡಿಕೆಯಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಂಡು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗುವುದು. ಇಲ್ಲದಿದ್ದರೆ ಸಂಬಂಧಪಟ್ಟ ಉದ್ದಿಮೆಗಳ ಮಾಲೀಕರಿಗೆ ನೋಟಿಸ್ ನೀಡಲಾಗುವುದು" ಎಂದು ಮೇಯರ್ ಸುನಂದ ಪಾಲನೇತ್ರ ತಿಳಿಸಿದ್ದಾರೆ.

English summary
Soon Mysuru city corporation will come up with resolution to use Kannada in sign board in the stall in Mysuru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X