ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಸೋಲಿಸಿದ್ದಕ್ಕೆ ಜಲಪ್ರಳಯ: ಕನಕಪೀಠದ ಸ್ವಾಮೀಜಿ ವಿವಾದ

|
Google Oneindia Kannada News

Recommended Video

ಸಿದ್ದರಾಮಯ್ಯ ಬಗ್ಗೆ ಈ ಪಾಟಿ ಕನಕಪೀಠದ ಸ್ವಾಮೀಜಿ ಮಾತನಾಡಿದ್ದೇಕೆ? | Oneindia Kannada

ಮೈಸೂರು, ಫೆಬ್ರವರಿ 9: ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದ ಕಾರಣದಿಂದಲೇ ಕೊಡಗಿನಲ್ಲಿ ಜಲಪ್ರಳಯ ಸಂಭವಿಸಿದ್ದು ಎಂದು ಕನಕಪೀಠದ ನಿರಂಜನಾನಂದಪುರಿ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಜ್ಯದ ಜನರಿಗೆ ಅನುಕೂಲವಾಗುವಂತಹ ಅನೇಕ ಯೋಜನೆಗಳನ್ನು ಜಾರಿಗೆ ತಂದ ಸಿದ್ದರಾಮಯ್ಯ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದಕ್ಕೇ ಕೊಡಗಿನಲ್ಲಿ ಭೂಮಿ ನಡುಗಿತು ಎಂಬ ಅರ್ಥದಲ್ಲಿ ಭಾಷಣ ಮಾಡಿದ್ದಾರೆ.

ಕೊಡಗಿನಲ್ಲಿ ಮಳೆಯಿಂದ ಬಹಳಷ್ಟು ಅನಾಹುತಗಳು ನಡೆದಿವೆ. ಇದರ ಬಗ್ಗೆ ಹೇಳಲು ಅವಕಾಶ ಸಿಕ್ಕಿರಲಿಲ್ಲ. ಈ ಸಂದರ್ಭದಲ್ಲಿ ಅದರ ಬಗ್ಗೆ ಹೇಳುತ್ತೇನೆ ಎಂದು ನಿರಂಜನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಸ್ವಾಮೀಜಿ ಮಾತುಗಳಿಗೆ ಚಪ್ಪಾಳೆ ಮತ್ತು ಶಿಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಯಿತು.

ಸೆಲ್ಫಿ ತೆಗೆಯಲು ಬಂದವನಿಗೆ ಬಿತ್ತು ಸಿದ್ದರಾಮಯ್ಯರಿಂದ ಏಟು ಸೆಲ್ಫಿ ತೆಗೆಯಲು ಬಂದವನಿಗೆ ಬಿತ್ತು ಸಿದ್ದರಾಮಯ್ಯರಿಂದ ಏಟು

ಕನಕದಾಸರು ಉಡುಪಿಗೆ ಹೋದ ಸಂದರ್ಭದಲ್ಲಿ ಕೃಷ್ಣನ ದರ್ಶನ ಆಗುವುದಿಲ್ಲ. ಅವತ್ತು ರಾತ್ರಿ ಒಂದು ಮೂಲೆಯಲ್ಲಿ ಕೃಷ್ಣ ನೋಡಬೇಕು ಅಂದ್ಹೇಳಿ ಕೂರುತ್ತಾರೆ. ಆಗ ಒಮ್ಮೆ ಭೂಮಿ ಕಂಪನ ಆಗುತ್ತದೆ. ಆ ಸಮಯದಲ್ಲಿ ಅವರು ಎದ್ದು ಹೇಳುತ್ತಾರೆ 'ಏಕೆ ನಡುಗಿದೆ ತಾಯಿ ಈ ನಡುರಾತ್ರಿಯಲ್ಲಿ ಏಕೆ ನಡುಗಿದೆ ತಾಯಿ?' ಎಂದು. ಬಹುಶಃ ಈ ರಾಜ್ಯದಲ್ಲಿ ಹಾಲುಮತ ಸಮುದಾಯದ ವ್ಯಕ್ತಿಗಳು ಯಾವಾಗ ನೊಂದುಕೊಳ್ಳುತ್ತಾರೋ ಆಗ ಪ್ರಕೃತಿ ಕೂಡ ಸ್ಪಂದಿಸುವುದಿಲ್ಲ ಅನ್ನೋದಕ್ಕೆ ಸಾಕಷ್ಟು ಉದಾಹರಣೆಗಳಿವೆ ಎಂಬುದಾಗಿ ಸ್ವಾಮೀಜಿ ಹೇಳಿದ್ದಾರೆ.

ಕನಿಷ್ಠವಾಗಿ ಕಂಡಿದ್ದಕ್ಕೆ ನಡುಗಿದೆಯಾ?

ಕನಿಷ್ಠವಾಗಿ ಕಂಡಿದ್ದಕ್ಕೆ ನಡುಗಿದೆಯಾ?

'ಏಕೆ ನಡುಗಿದೆ ತಾಯಿ ಕೊಡಗಿನೊಳ್ ಏಕೆ ನಡುಗಿದೆ ತಾಯಿ?
ಈ ರಾಜ್ಯದಲ್ಲಿ ಹಲವಾರು ಭಾಗ್ಯಗಳನ್ನು ನೀಡಿದವರ ಹೀನಾಯವಾಗಿ ಸೋಲಿಸಿದರೆಂದು ನಡುಗಿದೆಯಾ?
ಏಕೆ ನಡುಗಿದೆ ತಾಯಿ ಏಕೆ ನಡುಗಿದೆ ತಾಯಿ?' ಎಂದು ಪದ್ಯದ ದಾಟಿಯಲ್ಲಿ ಹೇಳಿದ್ದಾರೆ.

'ಈ ಎಲ್ಲ ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಾ ಹಾಕಿಕೊಳ್ಳುತ್ತಾ ಹೋಗ್ತಿದ್ದೆ ನಾನು. ಒಬ್ಬ ಸಾಮಾನ್ಯ ವ್ಯಕ್ತಿ ಯಾವುದೇ ಭ್ರಷ್ಟಾಚಾರವಿಲ್ಲದೆ, ಅನಾಚಾರವಿಲ್ಲದೆ, ಒಂದು ಕಪ್ಪು ಚುಕ್ಕೆ ಇಲ್ಲದೆ ಐದು ವರ್ಷಗಳ ಕಾಲ ರಾಜ್ಯವನ್ನು ದಿಟ್ಟತನದಿಂದ ನಡೆಸಿದ ವ್ಯಕ್ತಿಯನ್ನು ಕನಿಷ್ಠವಾಗಿ ಕಂಡಂತಹ ಜನತೆಯ ವರ್ತನೆಯನ್ನು ನೋಡಿ ನಡುಗಿದೆಯಾ? ಏಕೆ ನಡುಗಿದೆ ತಾಯಿ ಕೊಡಗಿನೊಳ್ ಏಕೆ ನಡುಗಿದೆ ತಾಯಿ?' ಎಂದು ಅವರು ಪುನರುಚ್ಚರಿಸಿದ್ದಾರೆ.

'ಇಂತಹ ಮಾತುಗಳನ್ನು ಹೇಳಬೇಕು ನೀವೆಲ್ಲ ಅರ್ಥ ಮಾಡಿಕೊಳ್ಳಬೇಕು. ಮುಂದಿನ ಭವಿಷ್ಯ ರೂಪಿಸಿಕೊಳ್ಳಬೇಕು. ಬಹುಶಃ ಈ ರಾಜ್ಯದಲ್ಲಿ ಸಮುದಾಯದಲ್ಲಿ ಮರೆಯಲಾಗದಂತಹ ಸಾಕಷ್ಟು ವ್ಯಕ್ತಿಗಳು ಸೃಷ್ಟಿಯಾಗುತ್ತಾರೆ. ಆದರೆ ಸಿದ್ದರಾಮಯ್ಯ ಅವರಂತಹ ವ್ಯಕ್ತಿ ಇನ್ನೊಬ್ಬ ಸೃಷ್ಟಿಯಾಗಲು ಸಾಧ್ಯವಿಲ್ಲ' ಎಂದು ಸಿದ್ದರಾಮಯ್ಯ ಅವರನ್ನು ಕೊಂಡಾಡಿದ್ದಾರೆ.

ಕುಮಾರಸ್ವಾಮಿ ಬಜೆಟ್ ಬಗ್ಗೆ ಸಿದ್ದರಾಮಯ್ಯ ಹೇಳಿದ್ದು ಹೀಗೆ ಕುಮಾರಸ್ವಾಮಿ ಬಜೆಟ್ ಬಗ್ಗೆ ಸಿದ್ದರಾಮಯ್ಯ ಹೇಳಿದ್ದು ಹೀಗೆ

ಬಿ.ಎಸ್. ಯಡಿಯೂರಪ್ಪಗೆ ಎಚ್ಚರಿಕೆ

ಬಿ.ಎಸ್. ಯಡಿಯೂರಪ್ಪಗೆ ಎಚ್ಚರಿಕೆ

ಇಂದು ಆಡಿಯೋ ಬಿಡುಗಡೆಯಾಗಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿ, ಒಂದು ಸಮುದಾಯದ ಗಣ್ಯ ವ್ಯಕ್ತಿ. ಸಿದ್ದರಾಮಯ್ಯ ಹೇಗೆ ಜಾತ್ಯತೀತ ನಾಯಕರೋ, ಹಾಗೆ ನೀವು ಒಂದು ಸಮುದಾಯದ ನಾಯಕ. ನಿಮಗೆ ಒಂದು ಗೌರವವಿದೆ. ಆದರೆ, ನನ್ನ ಸಮುದಾಯದ ರಾಜಕೀಯ ವ್ಯಕ್ತಿಗಳ ಬಗ್ಗೆ ಕೀಳಾಗಿ ಮಾತನಾಡುವ ನಿಮ್ಮ ನಾಲಿಗೆಗೆ ಲಗಾಮನ್ನು ಕೊಡಿ ಹೇಳಲು ಇಷ್ಟಪಡುತ್ತೇನೆ. ಏನಾದರೂ ಮಾತನಾಡಿ, ನಮ್ಮ ಸಮುದಾಯದ ನಾಯಕರ ಬಗ್ಗೆ ಕೀಳಾಗಿ ಮಾತನಾಡುವುದನ್ನು ಗನಕಗುರುಪೀಠ ಸಹಿಸುವುದಿಲ್ಲ ಎಂದು ಮಾನ್ಯ ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡುತ್ತೇನೆ.

ಇಂತಹ ವಿಚಾರಗಳನ್ನು ಮನಸಿನಲ್ಲಿ ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎನ್ನುವುದನ್ನು ನಿರ್ಧರಿಸಿ. ಕೈಸುಟ್ಟುಕೊಂಡಿದ್ದೀರಿ, ಕಿಸೆ ಸುಟ್ಟುಕೊಂಡಿದ್ದೀರಿ. ಕೆಟ್ಟಮೇಲೆ ಬುದ್ಧಿಬಂತು ಎಂದ ಹಾಗೆ ಆಗುತ್ತದೆ.

ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್: ರಾಹುಲ್ ಜೊತೆ ಚರ್ಚೆಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್: ರಾಹುಲ್ ಜೊತೆ ಚರ್ಚೆ

ಸಮ್ಮಿಶ್ರ ಸರ್ಕಾರವನ್ನು ಹಿಚುಕಿ ಹಾಕಬಹುದಿತ್ತು

ಸಮ್ಮಿಶ್ರ ಸರ್ಕಾರವನ್ನು ಹಿಚುಕಿ ಹಾಕಬಹುದಿತ್ತು

ಈ ಜಿಲ್ಲೆಯಲ್ಲಿ ಒಂದು ಕೋಮಿನ ಸಮುದಾಯ ಸಿದ್ದರಾಮಯ್ಯ ಅವರಿಗೆ ಮಾಡಿದ ಅನ್ಯಾಯವನ್ನು ನೆನೆಸಿಕೊಂಡರೆ ಸಿದ್ದರಾಮಯ್ಯ ಅವರು ಈ ಸರ್ಕಾರವನ್ನು ಯಾವಾಗ ಬೇಕಾದರೂ ಹಿಚುಕಿ ಹಾಕಬಹುದಾಗಿತ್ತು. ಆದರೆ, ಸಿದ್ದರಾಮಯ್ಯನವರು ಹಾಲುಮತ ಸಮಾಜದಲ್ಲಿ ಹುಟ್ಟಿರುವಂಥದ್ದು. ಅವರ ಮನೆಗೆ ಹೋಗಿ ನೀರು ಕೇಳಿದರೆ ಹಾಲು ಕೊಡುವ ವಂಶ ಹಾಲುಮತ ವಂಶದ್ದು. ಹೀಗಾಗಿ ಅವರ ದೊಡ್ಡ ಗುಣದಿಂದಲೇ ಸಮ್ಮಿಶ್ರ ಸರ್ಕಾರ ಇಂದಿಗೂ ಜೀವಂತವಾಗಿದೆ ಎನ್ನುವುದು ಬಹಳ ಸ್ಪಷ್ಟವಾಗಿದೆ.

ಶೋಷಿತರು ನಿಮ್ಮ ಜೊತೆಗಿದ್ದಾರೆ

ಶೋಷಿತರು ನಿಮ್ಮ ಜೊತೆಗಿದ್ದಾರೆ

ಅವರು ಏನು ಬೇಕಾದರೂ ಮಾಡಬಹುದಾಗಿತ್ತು. ಆದರೂ ಅವರ ಬಗ್ಗೆ ಇಲ್ಲ ಸಲ್ಲದ ಆರೋಪ, ಅಸಮಾಧಾನಗಳನ್ನು ವ್ಯಕ್ತಪಡಿಸುತ್ತಾರೆ. ಆದರೆ ಅದಾವುದಕ್ಕೂ ಹಿಂಜರಿಯಬೇಡಿ. ನಿಮ್ಮ ಹಿಂದೆ ಎಲ್ಲ ಶೋಷಿತ ಸಮುದಾಯಗಳು ನಿಲ್ಲುತ್ತವೆ, ಇದೇ ರೀತಿ ನೀವು ಕೆಲಸ ಮುಂದುವರಿಸಿ ಎಂದು ಸ್ವಾಮೀಜಿ ಹೇಳಿದ್ದಾರೆ.

English summary
Kanakapeetha Niranjanandapuri Swamiji in a controversial statement said, floods in Kodagu happened because of the defeat of Former Chief Minister Siddaramaiah in Chamundeshwari constituency in 2018 assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X