ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪತ್ರಕರ್ತ ನಿಷ್ಠಾವಂತನಾಗಿದ್ದರೆ ಮೊದಲು ತನ್ನ ಆಸ್ತಿ ಘೋಷಿಸಲಿ : ಪಬ್ಲಿಕ್ ವಾಹಿನಿ ಮುಖ್ಯಸ್ಥ ರಂಗನಾಥ್

By Yashaswini
|
Google Oneindia Kannada News

ಮೈಸೂರು, ನವೆಂಬರ್ 25 : ಮಾಧ್ಯಮಗಳಲ್ಲಿ ಕನ್ನಡ ಪರ ಆಕ್ರೋಶಗಳು ಕ್ಷೀಣವಾಗುತ್ತಿವೆ ಎಂದು ಪಬ್ಲಿಕ್ ಟಿ.ವಿ.ಮುಖ್ಯಸ್ಥ ಎಚ್.ಆರ್. ರಂಗನಾಥ್ ಅಭಿಪ್ರಾಯಪಟ್ಟರು.

ಚಿತ್ರಗಳು : ಮೈಸೂರಲ್ಲಿ 83ನೇ ಸಾಹಿತ್ಯ ಸಮ್ಮೇಳನ ಸಂಭ್ರಮ

ಮೈಸೂರಿನಲ್ಲಿ ಆಯೋಜಿಸಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಧ್ಯಮ: ಮುಂದಿರುವ ಸವಾಲುಗಳು' ಎಂಬ ವಿಚಾರ ಕುರಿತ 3ನೇ ಗೋಷ್ಠಿಯಲ್ಲಿ ದಿಕ್ಸೂಚಿ ನುಡಿಗಳನ್ನಾಡುತ್ತಾ, ಮಾಧ್ಯಮಗಳು ಕನ್ನಡದ ಕೆಲಸ ಮಾಡಿದರೆ ಪತ್ರಕರ್ತರನ್ನು ಗೂಂಡಾಗಳು ಎಂದು ಗುರುತಿಸುತ್ತಾರೆ. ನ್ಯಾಯಾಲಯದಲ್ಲಿ ನಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಪತ್ರಕರ್ತ ಸಿಲುಕಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಸಾಹಿತ್ಯ ಜಾತ್ರೆ, ಮೊದಲ ದಿನದ ಮುಖ್ಯಾಂಶಗಳುಮೈಸೂರಿನಲ್ಲಿ ಸಾಹಿತ್ಯ ಜಾತ್ರೆ, ಮೊದಲ ದಿನದ ಮುಖ್ಯಾಂಶಗಳು

ಪತ್ರಕರ್ತ ಹಾಗೂ ಪತ್ರಿಕೋದ್ಯಮ ಶಾಸಕಾಂಗದ ಹಿಡಿತಕ್ಕೆ ಸಿಲುಕಿದರೆ ಪ್ರಜಾಪ್ರಭುತ್ವ ಹಾಗೂ ತಳ ಸಮೂಹದ ಜನತೆಗೆ ಅಪಾಯ ಕಟ್ಟಿಟ್ಟ ಬುತ್ತಿ. ಇದನ್ನು ಹೇಗೆ ಎದುರಿಸುವುದು ಎನ್ನುವುದನ್ನು ನೆನಪಿಸಿಕೊಂಡರೆ ಭಯ ಆಗುತ್ತದೆ ಎಂದು ಹೇಳಿದರು.

Journalist should first declare his property if he is loyal: Public Channel Head Ranganath

ಬೇರೆಯವರಿಗೆ ಬುದ್ಧಿ ಹೇಳುವ ನಾವು ಹೇಗಿದ್ದೇವೆ? ನಮ್ಮ ಸಿದ್ಧಾಂತಗಳೇನು ಎನ್ನುವುದರ ಬಗ್ಗೆ ನಮ್ಮನ್ನು ನಾವು ಅವಲೋಕನ ಮಾಡಿಕೊಳ್ಳಬೇಕಿದೆ. ಶಾಸಕಾಂಗದಲ್ಲಿರುವವರಿಗೆ 5 ವರ್ಷಗಳಿಗೊಮ್ಮೆ ಚುನಾವಣೆ ಎಂಬ ಪರೀಕ್ಷೆ ಬರುತ್ತದೆ. ಕಾರ್ಯಾಂಗದಲ್ಲಿ ಕೆಲಸ ಮಾಡುವವರಿಗೆ ವರ್ಗಾವಣೆ, ಅಮಾನತು ಎಂಬ ಭಯ ಎಂಎಲ್‍ಎ, ಎಂಎಲ್‍ಸಿ, ಸಂಘನೆಗಳು, ಐಎಎಸ್ ಅಧಿಕಾರಿಗಳ ಸಂಪರ್ಕವನ್ನು ಇಟ್ಟುಕೊಂಡೇ ಬರುತ್ತಾರೆ. ಇದು ಇಂದಿನ ಪತ್ರಿಕೋದ್ಯಮದ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡದ ಸಂಕಟಗಳಿಗೆಲ್ಲ ಕುಲಕಂಟಕರೇ ಕಾರಣ : ಚಂಪಾಕನ್ನಡದ ಸಂಕಟಗಳಿಗೆಲ್ಲ ಕುಲಕಂಟಕರೇ ಕಾರಣ : ಚಂಪಾ

ಪತ್ರಕರ್ತ ತನ್ನ ಆಸ್ತಿ ಘೋಷಿಸಬೇಕು : ಪತ್ರಕರ್ತನೆಂದರೆ ಅವನೂ ಕೂಡ ಸಾಮಾಜಿಕ ಜವಾಬ್ದಾರಿ ಇರುವ ವ್ಯಕ್ತಿ. ಆತ ಸಾರ್ವಜನಿಕ ಸೇವೆ ಮಾಡುವವನಾದ್ದರಿಂದ ತನ್ನ ಆಸ್ತಿಯನ್ನು ಘೋಷಣೆ ಮಾಡಿಕೊಳ್ಳಬೇಕಿದೆ. ಆದರೆ ನ್ಯಾಯಾಂಗ ಹಾಗೂ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಯಿಸಿ ಕೊಂಡಿರುವ ಮಾಧ್ಯಮಗಳಿಗೆ ಯಾವುದೇ ಪರೀಕ್ಷೆ ಇಲ್ಲ. ಯಾರ ಹಂಗೂ ಇಲ್ಲದಿರುವುದರಿಂದ ಮುಂದೆ ಇದು ಯಾವ ದಿಕ್ಕಿಗೆ ಹೋಗುತ್ತದೆ ಎನ್ನುವ ಭಯ ಕಾಡುತ್ತದೆ ಎಂದರು. ಇಲ್ಲಿಯೂ ಎಲ್ಲರೂ ಶುದ್ಧವಾಗಿದ್ದಾರೆ ಎಂದು ಹೇಳುವ ಪರಿಸ್ಥಿತಿ ಈಗ ಇಲ್ಲ. ಕನಿಷ್ಠ ದೊಡ್ಡ ದೊಡ್ಡ ಮಾಧ್ಯಮಗಳು ತಮ್ಮ ಆಸ್ತಿಯನ್ನು ಘೋಷಣೆ ಮಾಡಿಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ಬರುವ ಕೆಟ್ಟ ಹೆಸರಿನಿಂದ ತಪ್ಪಿಸಿಕೊಳ್ಳಬಹುದು ಎಂದು ಹೇಳಿದರು.

ಗೋಷ್ಠಿಯ ಅಧ್ಯಕ್ಷತೆಯನ್ನುಪತ್ರಕರ್ತ ತಿಮ್ಮಪ್ಪ ಭಟ್ ವಹಿಸಿದ್ದರು. ಎನ್. ರವಿಶಂಕರ್, ಎನ್.ಉದಯಕುಮಾರ್ ವಿಚಾರ ಮಂಡನೆ ಮಾಡಿದರು.

English summary
Kannada proportions in the media are declining, said Public tv Ranganth in 83rd Kannada sahithya sammelana in Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X