ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ರಸ್ತೆ ಅಗೆದ ಜಿಯೋಗೆ ಬಿತ್ತು ಭಾರೀ ದಂಡ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 18: ಎಲ್ಲೆಂದರಲ್ಲಿ ರಸ್ತೆ ಅಗೆದು ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆ ಕೊಡುವ ಟೆಲಿಕಾಂ ಕಂಪೆನಿಗಳು ಇನ್ನು ಮುಂದೆ ಕೇಬಲ್‌ ಹಾಕಲು ರಸ್ತೆ ಅಗೆಯುವಾಗ ಎರಡೆರಡು ಬಾರಿ ಯೋಚಿಸಿ ಅಗೆಯಬೇಕಿದೆ.

ಆಪ್ಟಿಕಲ್​ ಫೈಬರ್ ಕೇಬಲ್ ಅಳವಡಿಸುವ ವೇಳೆ ಷರತ್ತು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ರಿಲಯನ್ಸ್ ಜಿಯೋ ಇನ್‌ಫೋಕಾಂ ಲಿಮಿಟೆಡ್‌ ಕಂಪೆನಿಗೆ ಮೈಸೂರು ಮಹಾನಗರ ಪಾಲಿಕೆ ದಂಡ ವಿಧಿಸಿ ಚುರುಕು ಮುಟ್ಟಿಸಿದೆ.

ಸೋಲಿಗರ ಈ ಸ್ಥಿತಿ ನೋಡಿದರೆ ನಿಮ್ಮ ಮನಸ್ಸೂ ಕರಗಬಹುದು, ಆದರೆ...ಸೋಲಿಗರ ಈ ಸ್ಥಿತಿ ನೋಡಿದರೆ ನಿಮ್ಮ ಮನಸ್ಸೂ ಕರಗಬಹುದು, ಆದರೆ...

ಮೈಸೂರು ನಗರ ಪಾಲಿಕೆ ವ್ಯಾಪ್ತಿಯ ಬಸವನಗುಡಿ ಸರ್ಕಲ್, ಕುಂಬಾರ ಕೊಪ್ಪಲು ಮುಖ್ಯರಸ್ತೆ, ಹೆಬ್ಬಾಳು ಮುಖ್ಯ ರಸ್ತೆ, ಬಲ್ಲಾಳ್ ಸರ್ಕಲ್, ಅಂಬೇಡ್ಕರ್ ರಸ್ತೆ, ಮಾನಂದವಾಡಿ ರಸ್ತೆ, ಜೆಎಲ್ ‌ಬಿ ರಸ್ತೆ, ಆದಿಚುಂಚನಗಿರಿ ರಸ್ತೆ, ಉದಯರವಿ ರಸ್ತೆ, ಜಯಲಕ್ಷ್ಮಿಪುರಂ ಗೋಕುಲಂ ಮುಖ್ಯ ರಸ್ತೆ, ಗೋಕುಲಂ ಕಾಂಟೂರ್ ರಸ್ತೆ, ಕಾಂತರಾಜ್ ಅರಸ್ ಪಾರ್ಕ್ ಹತ್ತಿರದ ರಸ್ತೆ, ಗಾಂಧಿನಗರ ಬಡಾವಣೆ ವ್ಯಾಪ್ತಿಯಲ್ಲಿ ಕೇಬಲ್​ ಅಳವಡಿಸುವಾಗ ರಸ್ತೆಗಳನ್ನು ಹಾಳು ಮಾಡಿರುವುದರ ಜೊತೆಗೆ ನಗರ ಪಾಲಿಕೆಗೆ ಆರ್ಥಿಕ ನಷ್ಟ ಉಂಟು ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಟ್ಟಿರುವುದರಿಂದ ಪ್ರತಿ ರಸ್ತೆಗೆ 10 ಸಾವಿರದಂತೆ ದಂಡ ವಿಧಿಸಿ ಆದೇಶಿಸಿದೆ.

Jio Fined For Digging Road in Mysuru

ಈಗ ವಿಧಿಸಿರುವ ದಂಡದ ಮೊತ್ತ 1.1 ಲಕ್ಷ ರೂಪಾಯಿಗಳಾಗಲಿವೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ದಂಡದ ಮೊತ್ತದೊಂದಿಗೆ ಹಾಳಾಗಿರುವ ರಸ್ತೆಗಳನ್ನು ತುರ್ತಾಗಿ ದುರಸ್ತಿ ಮಾಡಲು ಸೂಚಿಸಿದೆ. ಇನ್ನು ಮುಂದೆ ವಲಯ ಕಚೇರಿಗೆ ಮನವಿ ಸಲ್ಲಿಸಿ ಅನುಮತಿ ಪಡೆದ ನಂತರ ವಲಯ ಅಭಿವೃದ್ಧಿ ಅಧಿಕಾರಿಗಳ ಸಮ್ಮುಖದಲ್ಲಿ ಕಾಮಗಾರಿ ನಿರ್ವಹಿಸಬೇಕು, ಈ ಸೂಚನೆಯನ್ನು ಉಲ್ಲಂಘಿಸಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
Reliance Jio Infocomm Ltd has been fined by Mysuru Metropolitan corporation for violating the rules and digging road for the installation of an optical fiber cable,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X