ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

11ನೇ ಆವೃತ್ತಿ ಟೂರ್ ಆಫ್ ನೀಲಗಿರೀಸ್ (ಟಿಎಫ್‍ಎನ್) ಜರ್ಸಿ ಅನಾವರಣ

|
Google Oneindia Kannada News

ಮೈಸೂರು, ಡಿಸೆಂಬರ್ 1: ರೈಡ್ ಎ ಸೈಕಲ್ ಫೌಂಡೇಷನ್‍ನ ವಾರ್ಷಿಕ ಕಾರ್ಯಕ್ರಮ ಟೂರ್ ಆಫ್ ನೀಲಗಿರೀಸ್ (ಟಿಎಫ್‍ಎನ್) 11ನೇ ಆವೃತ್ತಿ ದಾಖಲೆಯ ಮಟ್ಟದಲ್ಲಿ ಅಂತಾರಾಷ್ಟ್ರೀಯ ಮತ್ತು ಮಹಿಳಾ ಸೈಕ್ಲಿಸ್ಟ್ ಗಳಷ್ಟು ಆಕರ್ಷಿಸಿದ್ದು, ಮೈಸೂರಿನ ನ್ಯೂ ಸಯ್ಯಾಜಿ ರಾವ್ ರಸ್ತೆಯಲ್ಲಿರುವ ಹೋಟೆಲ್ ರಿಯೋ ಮೆರಿಡಿಯನ್‍ನಲ್ಲಿ ಇದೇ ಡಿಸೆಂಬರ್ 9ರಂದು ಭಾನುವಾರ ಬೆಳಗ್ಗೆ 7ಗಂಟೆಗೆ ಚಾಲನೆ ನೀಡಲಾಗುತ್ತದೆ.

29 ವಿದೇಶಿಯರು ಮತ್ತು 18 ಮಂದಿ ಮಹಿಳೆಯರು ಸೇರಿ 110 ಸೈಕ್ಲಿಸ್ಟ್ ಗಳು ಈ ಅತಿದೊಡ್ಡ ಸೈಕ್ಲಿಂಗ್ ಟೂರ್ ಗೆ ಸಾಕ್ಷಿಯಾಗಲಿದ್ದಾರೆ.

ಡಿಸೆಂಬರ್ 9ರಿಂದ 16ರ ನಡುವೆ ಕರ್ನಾಟಕ, ಕೇರಳ ಹಾಗೂ ತಮಿಳುನಾಡುಗಳಲ್ಲಿ ವ್ಯಾಪಿಸಿರುವ ಪಶ್ಚಿಮಘಟ್ಟದ, ನೀಲಗಿರೀಸ್ ಬಯೋಸ್ಪೇರ್ ರಿಸರ್ವ್‍ನಲ್ಲಿ ಸೈಕ್ಲಿಸ್ಟ್ ಗಳು ಸುಮಾರು 950ಕಿಲೋ ಮೀಟರ್ ನಷ್ಟು ಪೆಡಲ್ ಮಾಡಲಿದ್ದಾರೆ.

ಟೂರ್ ಆಫ್ ನೀಲಗಿರೀಸ್‍ : ಡಿ.9ರಿಂದ ಆರಂಭ, 110 ಸೈಕ್ಲಿಸ್ಟ್ ಸ್ಪರ್ಧೆಟೂರ್ ಆಫ್ ನೀಲಗಿರೀಸ್‍ : ಡಿ.9ರಿಂದ ಆರಂಭ, 110 ಸೈಕ್ಲಿಸ್ಟ್ ಸ್ಪರ್ಧೆ

ಮೈಸೂರಿನಿಂದ ಸೈಕ್ಲಿಂಗ್ ಆರಂಭಿಸುವ ಸೈಕ್ಲಿಸ್ಟ್ ಗಳು ಹಾಸನ, ಕುಶಾಲನಗರ, ಸುಲ್ತಾನ್ ಬಥೇರಿ, ಉದಕ ಮಂಡಲ(ಊಟಿ) ಮತ್ತು ಕಲ್ಪೆಟ್ಟದವರೆಗೂ ಪೆಡಲ್ ಮಾಡಿ ನಂತರ ಮೈಸೂರಿಗೆ ಹಿಂತಿರುಗಲಿದ್ದಾರೆ.

ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಟೂರ್ ನಿರ್ದೇಶಕ ಸತೀಶ್ ಬೆಳವಾಡಿ ಮತ್ತು ಸಹಾಯಕ ಟೂರ್ ನಿರ್ದೇಶಕ ಬದ್ರಿನಾಥ್ ವಿ. ಶಾಸ್ತ್ರಿ ಯವರು ಟೂರ್ ಆಫ್ ನೀಲಗಿರೀಸ್ 2018ರ ಜರ್ಸಿಯನ್ನು ಅನಾವರಣಗೊಳಿದರು.

ಟೂರ್ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸತೀಶ್

ಟೂರ್ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸತೀಶ್

ಟೂರ್ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸತೀಶ್, ಟೂರ್ ಆಫ್ ನೀಲಗಿರೀಸ್ ಮೊದಲ ದಶಕದ ತೃಪ್ತಿಯಿಂದ ಪೂರ್ಣಗೊಳಿಸಿದ ನಾವು ಸೈಕ್ಲಿಂಗ್ ಉತ್ಸಾಹಿಗಳಿಗೆ ವಿಶ್ವದರ್ಜೆಯ ಪ್ರವಾಸದ ಅನುಭವವನ್ನು ಒದಗಿಸುವ ವಿವಿಧ ಅಂಶಗಳನ್ನು ಒಳಗೊಳ್ಳುವ ನಿರ್ಣಯದೊಂದಿಗೆ ದ್ವಿತೀಯ ದಶಕದ ಆರಂಭಕ್ಕೆ ಹೆಜ್ಜೆಯಿರಿಸಿದ್ದೇವೆ.

ಪ್ರಮುಖವಾಗಿ ಟೂರ್ ವರ್ಷದಿಂದ ವರ್ಷಕ್ಕೆ ಪ್ರತಿಭಾನ್ವಿತ ಭಾರತೀಯ ಸೈಕ್ಲಿಸ್ಟ್‍ಗಳಿಗೆ ತಮ್ಮ ಸಾಮಥ್ರ್ಯ ಪರೀಕ್ಷಿಸಿಕೊಳ್ಳಲು ವೇದಿಕೆಯಾಗಿದೆ. ಜತೆಗೆ ಅಂತಾರಾಷ್ಟ್ರೀಯ ಸೈಕ್ಲಿಸ್ಟ್ ಗಳೊಂದಿಗೆ ಪೈಪೋಟಿ ನೀಡಲು ಕೌಶಲ್ಯವೃದ್ದಿಗೆ ಇದು ನೆರವಾಗಿದೆ, ಎಂದು ಹೇಳಿದ್ದಾರೆ.

ಪರಿಶ್ರಮದಿಂದ ಟೂರ್ ಆಫ್ ನೀಲಗಿರೀಸ್ ಪ್ರೀಮಿಯರ್ ಟೂರ್ ದಶಕ ಪೂರೈಸಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಎದುರು ನೋಡುತ್ತಿರುವ ಸೈಕ್ಲಿಸ್ಟ್‍ಗಳನ್ನು ಪ್ರತಿ ವರ್ಷದ ಆವೃತ್ತಿಯೂ ಆಕರ್ಷಿಸುತ್ತಿದೆ.

ಭಾರತ ಸಂಜಾತ ಅಮೆರಿಕದ ಅಲೆಕ್ಸಿ ಗ್ರೆವಾಲ್ ಭಾಗಿ

ಭಾರತ ಸಂಜಾತ ಅಮೆರಿಕದ ಅಲೆಕ್ಸಿ ಗ್ರೆವಾಲ್ ಭಾಗಿ

ಇಂಡಿಯಾ ಎಂಟಿಬಿ ಹಾಲಿ ಚಾಂಪಿಯನ್ ಕಿರಣ್ ಕುಮಾರ್ ರಾಜು ಮತ್ತು ಇಂಡಿಯಾ ರೋಡ್ ಮಾಜಿ ಚಾಂಪಿಯನ್ ನವೀನ್ ಜಾನ್ ಟೂರ್ ಆಫ್ ನೀಲಗಿರೀಸ್ 2018ರಲ್ಲ್ಲಿ ಪೆಡಲ್ ಮಾಡಲಿದ್ದಾರೆ. 1984ರ ಒಲಿಂಪಿಕ್‍ನ ರೋಡ್ ಸೈಕ್ಲಿಂಗ್ ವಿಭಾಗದಲ್ಲಿ ಚಿನ್ನದ ಪದಕ ವಿಜೇತ ಭಾರತ ಸಂಜಾತ ಅಮೆರಿಕದ ಅಲೆಕ್ಸಿ ಗ್ರೆವಾಲ್, 2017ರ ಟಿಎಫ್‍ಎನ್ ಟೂರ್ ನಲ್ಲಿ ಪಾಲ್ಗೊಂಡಿದ್ದರು. ಇದೀಗ ಈ ಆವೃತ್ತಿಯಲ್ಲಿ ಸ್ವಯಂ ಸೇವಕರಾಗಿ ಪಾಲ್ಗೊಳ್ಳುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಹಾತೊರೆಯುತ್ತಿರುವ ಯುವ ಪ್ರತಿಭಾನ್ವಿತ ರೈಡರ್ ಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಅನಿಸಿಕೆ ಹಂಚಿಕೊಂಡ ಬದ್ರಿನಾಥ್

ಅನಿಸಿಕೆ ಹಂಚಿಕೊಂಡ ಬದ್ರಿನಾಥ್

ಪ್ರತಿಷ್ಠಿತ ಟೂರ್ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡ ಬದ್ರಿನಾಥ್, ಟೂರ್ ಆಫ್ ನೀಲಗಿರೀಸ್ ಸೈಕ್ಲಿಂಗ್‍ಅನ್ನು ಒಂದು ಸಹಾಸ ಟೂರ್ ಆಗಿ ಆರಂಭಿಸಿದವು. ಸಮಾಜಕ್ಕೆ ತಮ್ಮ ಕೊಡುಗೆ ನೀಡಲು ಹಲವು ಸೈಕ್ಲಿಸ್ಟ್‍ಗಳು ಈ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.

ವಿಶೇಷ ಅಂದರೆ ಚಾರಿಟಿಗಾಗಿ ಪ್ರತಿವರ್ಷ ನೋಂದಣಿ ಮಾಡುಕೊಳ್ಳುತ್ತಿರುವ ರೈಡರ್ ಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಬೆಂಗಳೂರಿನ ಸೀತಾ ಭತೆಜಾ ಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರಿನ ಇಕ್ಷಾ ಫೌಂಡೇಷನ್, ಉತ್ತರಾಖಂಡ್‍ನ ಟೋನ್ಸ್ ವಾಲಿ ಕಮುನಿಟಿ ಹೆಲ್ತ್ ಸೆಂಟರ್ ಆಫ್ ಕಲಪ ಟ್ರಸ್ಟ್, ಗುಂಡಲೂರಿನ ವಿದ್ಯೋದಯ ಸ್ಕೂಲ್, ತಮಿಳುನಾಡು ಹೊಸೂರಿನ ಕೆನ್ನೆಥ್ ಆ್ಯಂಡರ್ಸನ್ ನೇಚರ್ ಸೋಸೈಟಿ ಮತ್ತು ಹೈದರಾಬಾದ್‍ನ ಆದಿತ್ಯ ಮೆಹ್ತಾ ಫೌಂಡೇಷನ್ ಸಂಸ್ಥೆಗಳು 2018ರ ಟಿಎಫ್‍ಎನ್‍ನಲ್ಲಿ ಕೆಲವು ರೈಡರ್‍ಗಳಿಂದ ಚಾರಿಟಿ ಪಡೆಯಲಿದ್ದಾರೆ.

ರೈಡ್ ಎ ಸೈಕಲ್ ಪ್ರತಿಷ್ಠಾನ ಕುರಿತು (ಆರ್‍ಎಸಿ-ಎಫ್)

ರೈಡ್ ಎ ಸೈಕಲ್ ಪ್ರತಿಷ್ಠಾನ ಕುರಿತು (ಆರ್‍ಎಸಿ-ಎಫ್)

ಆರ್‍ಎಸಿ-ಎಫ್ ಲಾಭಗಳಿಸುವ ಉದ್ದೇಶ ಹೊಂದಿರುವ ಸಂಸ್ಥೆಯಲ್ಲ. ಸೈಕ್ಲಿಂಗ್ ಜನಪ್ರಿಯಗೊಳಿಸುವ ಆರಾಮವಾಗಿ ಸಾಮಾಜಿಕ ಬದಲಾವಣೆ, ಬಯಸುತ್ತಿರುವ ಸಂಸ್ಥೆ ರಾಷ್ಟ್ರದಲ್ಲಿ ಸೈಕಲ್ ಕ್ರಾಂತಿ ಪರಿಚಯಿಸುವ ಮೂಲಕ ದೈನಂದಿನ ಸಾಗಣೆ, ಸವಾರಿಗೆ, ಅದನ್ನು ಜನಪ್ರಿಯ ಮಾಡುವುದಾಗಿದೆ. ಆರ್‍ಎಸಿ-ಎಫ್ ಸೈಕಲ್ ಪ್ರೇಮಿಗಳು, ಸೈಕಲ್ ತಯಾರಕರು, ಸೈಕ್ಲಿಂಗ್ ಸಮುದಾಯ ಹಾಗೂ ಸರ್ಕಾರದ ಸಂಘಟನೆಗಳ ಜೊತೆಗೆ ಸಂಪರ್ಕ ಹೊಂದಿದೆ. ಅನೇಕ ವರ್ಷಗಳಿಂದ ಪ್ರತಿಷ್ಠಾನ ಟೂರ್ ಆಫ್ ನೀಲಗಿರೀಸ್, ನಮ್ಮ ಸೈಕಲ್, ಸೈಕಲ್ ರೀಸೈಕಲ್, ಸಹಾಯಕ ಚಟುವಟಿಕೆಗಳಲ್ಲಿ ತೊಡಗಿದೆ.

English summary
The 11th edition of Tour of Nilgiris (TfN), the annual epic tour of RideACycle Foundation which has attracted record international and women cyclists to pedal the grand tour, will be flagged off on December 9, 2018 (Sunday) from Hotel Rio Meridian, New Sayyaji Rao Road, Mysuru at 7.00 a.m
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X