ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಂತ ಪಕ್ಷದ ವಿರುದ್ಧವೇ ತಿರುಗಿ ಬಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್‌

|
Google Oneindia Kannada News

Recommended Video

ಸ್ವಂತ ಪಕ್ಷದ ವಿರುದ್ಧವೇ ಮುಗಿಬಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ | Oneindia Kannada

ಮೈಸೂರು, ಜೂನ್ 01: ಕಾಂಗ್ರೆಸ್‌ ಪಕ್ಷದಲ್ಲಿ ಭುಗಿಲೆದ್ದಿರುವ ಅಸಮಾಧಾನ ಮಿತ್ರ ಪಕ್ಷ ಜೆಡಿಎಸ್‌ಗೂ ವ್ಯಾಪಿಸಿದೆ. ಪಕ್ಷವನ್ನು ಕಾಯಬೇಕಾದ ರಾಜ್ಯಾಧ್ಯಕ್ಷರ ಕಟು ಮಾತಿನಿಂದ ಜೆಡಿಎಸ್‌ ಅನ್ನು ಟೀಕಿಸಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಸ್ವಂತ ಪಕ್ಷದ ಮೇಲೆಯೇ ಮುಗಿಬಿದ್ದಿದ್ದು, ಜೆಡಿಎಸ್ ಪಕ್ಷದ ದುರಹಂಕಾರದಿಂದಲೇ ಅದಕ್ಕೆ ಸೋಲಾಗಿದೆ ಎಂದು ಹೇಳಿದ್ದಾರೆ.

ಮೋದಿಯನ್ನು ಬಲಭೀಮನಿಗೆ ಹೋಲಿಸಿದ ವಿಶ್ವನಾಥ್ ಮೋದಿಯನ್ನು ಬಲಭೀಮನಿಗೆ ಹೋಲಿಸಿದ ವಿಶ್ವನಾಥ್

ಕೆ.ಆರ್. ನಗರದಲ್ಲಿ ವಿಶ್ವನಾಥ್ ಅವರು ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ನಾನು ಹೇಳಿದವರಿಗೆ ಪಕ್ಷ ಟಿಕೆಟ್ ನೀಡಲಿಲ್ಲ ಎಂದಿರುವ ವಿಶ್ವನಾಥ್, ಜೆಡಿಎಸ್ ಪಕ್ಷದಲ್ಲಿ ಕರುಬರಿಗೆ ಆದ್ಯತೆಯೇ ಇಲ್ಲ ಎಂದು ಹೇಳಿದ್ದಾರೆ.

JDS state president H Vishwanath lambasted on his own party

ನಮ್ಮದೇ ದುರಹಂಕಾರದಿಂದ ಸೋಲಾಗಿದೆ ಎಂದಿರುವ ವಿಶ್ವನಾಥ್, ಜೆಡಿಎಸ್‌ನಲ್ಲಿ ಹಣವೇ ಮುಖ್ಯ, ಕಾರ್ಯಕರ್ತರಿಗೂ ಅಷ್ಟೆ, ನಾಯಕರಿಗೂ ಅಷ್ಟೆ ಎಂದು ಎಲ್ಲರ ಮೇಲೂ ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ ವಿಶ್ವನಾಥ್?ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ ವಿಶ್ವನಾಥ್?

ಸಿದ್ದರಾಮಯ್ಯ ವಿರುದ್ಧ ಬೇಗ್ ಹೇಳಿಕೆ: ವಿಶ್ವನಾಥ್ ಸಮರ್ಥನೆಸಿದ್ದರಾಮಯ್ಯ ವಿರುದ್ಧ ಬೇಗ್ ಹೇಳಿಕೆ: ವಿಶ್ವನಾಥ್ ಸಮರ್ಥನೆ

ಕೆ.ಆರ್.ನಗರ ಸಭೆಯಲ್ಲಿ ಜೆಡಿಎಸ್ ಸೋಲು

ಕೆ.ಆರ್.ನಗರ ಸಭೆಯಲ್ಲಿ ಜೆಡಿಎಸ್ ಸೋಲು

ಕೆ.ಆರ್.ನಗರ ನಗರಸಭೆಯಲ್ಲಿ ಜೆಡಿಎಸ್ ಸೋಲು ಕಂಡಿದ್ದರ ಬಗ್ಗೆ ಕರೆಯಲಾಗಿದ್ದ ಆತ್ಮಾವಲೋಕನ ಸಭೆಯಲ್ಲಿ ವಿಶ್ವನಾಥ್ ಅವರು ಸ್ವಂತ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ತಾವು ಹೇಳಿದವರಿಗೆ ಟಿಕೆಟ್ ನೀಡಲಿಲ್ಲ ಎಂಬುದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು.

ಸ್ವತಃ ತಾವೂ ಟಿಕೆಟ್ ಆಕಾಂಕ್ಷಿ ಆಗಿದ್ದರು ವಿಶ್ವನಾಥ್‌

ಸ್ವತಃ ತಾವೂ ಟಿಕೆಟ್ ಆಕಾಂಕ್ಷಿ ಆಗಿದ್ದರು ವಿಶ್ವನಾಥ್‌

ಚುನಾವಣೆ ಸಮಯದಿಂದಲೂ ವಿಶ್ವನಾಥ್ ಅವರು ಅಸಮಧಾನವಾಗಿಯೇ ಇದ್ದರು, ಮೈಸೂರಿನಲ್ಲಿ ಜೆಡಿಎಸ್‌ಗೆ ಟಿಕೆಟ್ ಕೇಳಿದ್ದರು. ಅಲ್ಲದೇ ತಮಗೆ ಲೋಕಸಭೆ ಟಿಕೆಟ್ ನೀಡಬೇಕೆಂಬ ಬೇಡಿಕೆಯನ್ನೂ ಅವರು ಇಟ್ಟಿದ್ದರು, ಆದರೆ ಇದಾವುದಕ್ಕೂ ಜೆಡಿಎಸ್‌ನ ಮುಖಂಡರು ಸೊಪ್ಪು ಹಾಕಿರಲಿಲ್ಲ.

ಮೋದಿಯನ್ನು ಹೊಗಳಿದ್ದ ವಿಶ್ವನಾಥ್‌

ಮೋದಿಯನ್ನು ಹೊಗಳಿದ್ದ ವಿಶ್ವನಾಥ್‌

ಈಗ ಜೆಡಿಎಸ್ ಪಕ್ಷವು ಚುನಾವಣೆಯಲ್ಲಿ ಹೀನಾಯವಾಗಿ ಸೋತ ನಂತರ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಅವರು ನರೇಂದ್ರ ಮೋದಿ ಅವರನ್ನು ಹೊಗಳಿ ಸುದ್ದಿಯಾಗಿದ್ದರು.

ಪ್ರಚಾರದಿಂದ ದೂರವೇ ಉಳಿದಿದ್ದ ವಿಶ್ವನಾಥ್‌

ಪ್ರಚಾರದಿಂದ ದೂರವೇ ಉಳಿದಿದ್ದ ವಿಶ್ವನಾಥ್‌

ಲೋಕಸಭೆ ಚುನಾವಣೆಯ ಸಮಯದಲ್ಲಿಯೂ ಸಹ ವಿಶ್ವನಾಥ್ ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಅವರು ಚುನಾವಣೆ ಪ್ರಚಾರದಿಂದಲೂ ದೂರವೇ ಉಳಿದಿದ್ದರು. ಮೈಸೂರು ಕಾಂಗ್ರೆಸ್ ಅಭ್ಯರ್ಥಿ ವಿಜಯಶಂಕರ್ ಅವರು ಸೋಲುವಲ್ಲಿ ವಿಶ್ವನಾಥ್ ಅವರ ಪಾತ್ರವೂ ಇದೆ ಎನ್ನಲಾಗುತ್ತಿದೆ.

ಜೆಡಿಎಸ್‌ಗೆ ತೀವ್ರ ಮುಖಭಂಗ

ಜೆಡಿಎಸ್‌ಗೆ ತೀವ್ರ ಮುಖಭಂಗ

ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಅತೃಪ್ತ ಶಾಸಕರು ಬಹಿರಂಗವಾಗಿ ಪಕ್ಷದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಏಕಾ-ಏಕಿ ಈಗ ಜೆಡಿಎಸ್‌ನ ರಾಜ್ಯಾಧ್ಯಕ್ಷರೇ ತಮ್ಮದೇ ಪಕ್ಷದ ಮೇಲೆ ತೀವ್ರತರವಾಗಿ ತಿರುಗಿಬಿದ್ದಿರುವುದು ಪಕ್ಷಕ್ಕೆ ತೀವ್ರ ಮುಖಭಂಗ ಉಂಟುಮಾಡಿದೆ.

English summary
JDS state president H Vishwanath lambasted on his own party. he says in JDS party only money will matter no other things will matter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X