• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಚ್. ವಿಶ್ವನಾಥ್ ಸಾಹಿತ್ಯ ಪ್ರೀತಿಯ ಬಗ್ಗೆ ನಿಮಗೆಷ್ಟು ಗೊತ್ತು?

By ಯಶಸ್ವಿನಿ ಎಂ.ಕೆ
|

ಮೈಸೂರು, ಆಗಸ್ಟ್ 6: ತೆನೆ ಹೊತ್ತ ಮಹಿಳೆಯ ಕೈ ಹಿಡಿದು ರಾಜ್ಯಾಧ್ಯಕ್ಷರಾಗಿರುವ ಎಚ್. ವಿಶ್ವನಾಥ್ ಕೇವಲ ರಾಜಕಾರಣದಲ್ಲಿ ಮಾತ್ರ ನಿಷ್ಣಾತರಲ್ಲ. ಸಾಹಿತ್ಯ ಕೃಷಿಯಲ್ಲೂ ಕೂಡ ಅವರು ಪರಿಣಿತರು. ತಮ್ಮ ಸ್ವಂತ ಜೀವನದ ಆಟೋ ಬಯೋಗ್ರಫಿಯಿಂದ ಹಿಡಿದು ಸ್ವಂತ ಪ್ರಕಾಶನವನ್ನು ಆರಂಭಿಸಿ ಮುದ್ರಿಸಿದ್ದು ಪ್ರಶಂಸಾನಾರ್ಹವೇ ಸರಿ.

ಬರವಣಿಗೆಯಲ್ಲಿಯೂ ಹೆಚ್ಚು ತೊಡಗಿಸಿಕೊಂಡಿದ್ದ ಅಡಗೂರು ವಿಶ್ವನಾಥ್ ಪುಸ್ತಕ ಬರೆಯುವಲ್ಲಿ ಕರಗತ. 2008ರಲ್ಲಿ ತಮ್ಮ ಆತ್ಮಕಥೆ 'ಹಳ್ಳಿಹಕ್ಕಿಯ' ಹಾಡನ್ನು ಬರೆದು ವಿವಾದಕ್ಕೀಡಾಗಿದ್ದನ್ನು ಎಂದಿಗೂ ಮರೆಯುವಂತಿಲ್ಲ.

'ದಳಪತಿ'ಯಾದ ಎಚ್.ವಿಶ್ವನಾಥ್ ಮುಂದಿರುವ ಸವಾಲುಗಳು!

ಇತರೆ ರಾಜಕಾರಣಿಗಳ ಕುರಿತಾದ ಕೆಲವು ವಿವಾದದ ಮಾತುಗಳನ್ನು ಉಲ್ಲೇಖಿಸಲಾಗಿದೆ ಎಂಬ ಕಾರಣಕ್ಕೆ ಪುಸ್ತಕ ನಿಗದಿಯಾದ ದಿನಕ್ಕಿಂತ ನಂತರದಲ್ಲಿ ಪ್ರಕಟಗೊಂಡಿತು. ತಮ್ಮ ಪಕ್ಷದಲ್ಲಿನ ಹುಳುಕನ್ನು ಎತ್ತಿ ಆಡುವುದರಲ್ಲಿ ನಿಸ್ಸೀಮರಾಗಿದ್ದ ವಿಶ್ವನಾಥ್ ಈ ಪುಸ್ತಕದಲ್ಲಿಯೂ ಹಾಗೇ ಕೆಲವು ಸತ್ಯ ಸಂಗತಿಗಳನ್ನು ಬಿಚ್ಚಿಟ್ಟಿದ್ದರು.

ಇದು ಹಲವರ ಕೆಂಗಣ್ಣಿಗೆ ಗುರಿಯಾಗಿದ್ದೂ ಉಂಟು. ಇದಾದ ಬಳಿಕ ಇದೇ ಹಳ್ಳಿ ಹಕ್ಕಿ ಆತ್ಮಕಥನ ಇಂಗ್ಲಿಷ್ ಗೆ ತರ್ಜುಮೆಯಾಗಿದೆ.

 ವಿಶಿಷ್ಟವಾದ ಪುಸ್ತಕ ಮತಸಂತೆ

ವಿಶಿಷ್ಟವಾದ ಪುಸ್ತಕ ಮತಸಂತೆ

10 ದಿನ ಏಕಾಂಗಿಯಾಗಿ ಸಂಚಾರ ಹೋಗಿದ್ದ ವಿಶ್ವನಾಥ್ ಹಲವು ವರುಷಗಳ ಗ್ಯಾಪ್ ನ ಬಳಿಕ 60 ಪುಟಗಳ ಮತಸಂತೆಯನ್ನು ಬರೆದರು. ಮತದಾನ ಕುರಿತಾದ ಆತ್ಮಾವಲೋಕನ ಮಾಡಿಕೊಳ್ಳುವ ಪ್ರಯತ್ನವೇ ಈ ಮತಸಂತೆಯಾಗಿದೆ.

ವಿಶ್ವನಾಥ್‌ರ ನಿಲುವು ಸಮಾಜ ಮುಖಿಯಾದದ್ದು. ಚುನಾವಣೆಯಲ್ಲಿ ಹಣ, ಹೆಂಡ ಹಂಚಿಕೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಕಲುಷಿತವಾಗಿ ಹೋಗಿದೆ ಎಂಬ ಅಂಶಗಳನ್ನು ತಮ್ಮ ಮತ ಸಂತೆಯಲ್ಲಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಮತಸಂತೆ ವಿಶಿಷ್ಟವಾದ ಪುಸ್ತಕವಾಗಿದೆ.

ವಿಶ್ವನಾಥ್ ಆಯ್ಕೆ ಮೂಲಕ ದೇವೇಗೌಡರ ಮತ್ತೊಂದು ರಾಜಕೀಯ ಚತುರ ನಡೆ

 ತುರ್ತು ಪರಿಸ್ಥಿತಿ ಕುರಿತು

ತುರ್ತು ಪರಿಸ್ಥಿತಿ ಕುರಿತು

ಇದಾದ ಬಳಿಕ 1975ರ ತುರ್ತು ಪರಿಸ್ಥಿತಿ ಕುರಿತು, ದೇಶದ ಕರಾಳ ದಿನದಲ್ಲಿ ಇಂದಿರಾಗಾಂಧಿ ಜಾರಿಗೆ ತಂದ 20 ಅಂಶಗಳ ಕುರಿತಾದ ಮಾಹಿತಿ, ಭೂ ಸುಧಾರಣೆ, ಜೀತ ವಿಮುಕ್ತಿಯಂತಹ ಧೋರಣೆಗಳನ್ನು, ಆಲಾಪನೆಗಳನ್ನು 'ಹಳ್ಳಿ ಹಕ್ಕಿ'ಯಲ್ಲಿ ಉಲ್ಲೇಖಿಸಿದ್ದರು.

 ಆಪತ್ ಸ್ಥಿತಿಯ ಆಲಾಪಗಳು

ಆಪತ್ ಸ್ಥಿತಿಯ ಆಲಾಪಗಳು

ಜನವರಿ 25 ಬಂತೆಂದರೆ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್‌ ಸ‌ರ್ಕಾರದ ಬಗ್ಗೆ ವಿರೋಧದ ಮಾತುಗಳು ಕೇಳಿ ಬರುತ್ತದೆ. ಆದರೆ, ಕರ್ನಾಟದಲ್ಲಿ ಆ ಕಾಲ ಬದಲಾವಣೆ ಕಾಲವಾಗಿತ್ತು. ದೇವರಾಜ ಅರಸ್‌ ತಂದ ನಾನಾ ಜನಪರ ಯೋಜನೆಗಳನ್ನು ಹಿಡಿದಿಡುವ ಪ್ರಯತ್ನದ ಫ‌ಲವಾಗಿ 'ಆಪತ್ ಸ್ಥಿತಿಯ ಆಲಾಪಗಳು' ಹೊರ ಬಂದಿದೆ.

 ಹಳ್ಳಿಹಕ್ಕಿ ಆದದ್ದು ಹೇಗೆ?

ಹಳ್ಳಿಹಕ್ಕಿ ಆದದ್ದು ಹೇಗೆ?

ಭೂಸ್ವಾಧೀನ ಕಾಯಿದೆ ತಿದ್ದುಪಡಿ ಹಾಗೂ ಭೂ ಕಾಯ್ದೆ ಕುರಿತಾದ ಸಣ್ಣ ಪುಸ್ತಕ ಬರೆದ ವಿಶ್ವನಾಥ್ ಅದನ್ನು 2015ರಲ್ಲಿ ಹೊರತಂದರು. 'ಮಲ್ಲಿಗೆ ಮಾತು' ಸೇರಿದಂತೆ ತಾವು ರಚಿಸಿದ ನಾಲ್ಕು ಕೃತಿಗಳು ಕಲ್ಪನೆಯ ಕಥನಗಳಲ್ಲ, ಬದಲಾಗಿ ದೇಶದಲ್ಲಿ ನಡೆದ ವಿಚಾರಗಳು. ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡಿದ್ದೇನೆ.

ಮುಂದೆ 650 ವರ್ಷಗಳ ಇತಿಹಾಸವಿರುವ ಇಂಗ್ಲೆಂಡ್‌ ಪಾರ್ಲಿಮೆಂಟ್‌ ಹಾಗೂ 50 ವರ್ಷಗಳ ಇತಿಹಾಸವಿರುವ ಭಾರತದ ಪಾರ್ಲಿಮೆಂಟ್‌ನ ತುಲನಾತ್ಮಕ ಅಧ್ಯಯನ ಮಾಡಿ ಪುಸ್ತಕ ಹೊರತರಲಾಯಿತು.

ಇನ್ನು 2016ರಲ್ಲಿ ಹಳ್ಳಿಹಕ್ಕಿ ಹಾಗೂ ಟಾಕಿಂಗ್ ಸ್ಟ್ರೀಟ್ ಪುಸ್ತಕವನ್ನು ತಮ್ಮ ಜೀವನದಲ್ಲಿನ ಸ್ವಾನುಭವ ಕುರಿತಾಗಿ ಬರೆದರು. ಈ ಪುಸ್ತಕ ಸಹ ಹೆಸರು ಮಾಡಿತು. ತಮ್ಮದೇ ಆದ ಹಳ್ಳಿಹಕ್ಕಿ ಪ್ರಕಾಶನದ ರುವಾರಿಗಳಾದ ಹಿನ್ನಲೆಯಲ್ಲಿ ವಿಶ್ವನಾಥ್ ಗೆ ಹಳ್ಳಿಹಕ್ಕಿ ಎಂದು ಕರೆಯುವುದು ವಾಡಿಕೆ ಕೂಡ.

English summary
JDS president H. Vishwanath is not only expert in politics, expert in literature also. He has written many books Halli Hakki, Apath Sthithiya Alapagalu, Matha Santhe etc..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more