ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಲ್ಲಿ ಜೆಡಿಎಸ್‌ ನವರು ಬಿಜೆಪಿಗೆ ಮತ ಹಾಕಿರುವುದು ಸತ್ಯ: ಸಿದ್ದರಾಮಯ್ಯ

|
Google Oneindia Kannada News

Recommended Video

ಜಿ.ಟಿ.ದೇವೇಗೌಡ ಮಾತನ್ನು ಅನುಮೋದಿಸಿದ ಸಿದ್ದು | Oneindia Kannada

ಮೈಸೂರು, ಮೇ 05: ಮೈಸೂರಿನಲ್ಲಿ ಜೆಡಿಎಸ್‌ ನವರು ಬಿಜೆಪಿಗೆ ಮತ ಹಾಕಿದ್ದಾರೆಂದು ಹೇಳಿದ್ದ ಸಚಿವ ಜಿ.ಟಿ.ದೇವೇಗೌಡ ಅವರ ಹೇಳಿಕೆಯನ್ನು ಸಿದ್ದರಾಮಯ್ಯ ಅನುಮೋದಿಸಿದ್ದು, ಜಿ.ಟಿ.ದೇವೇಗೌಡ ಹೇಳಿರುವುದು ಸತ್ಯ ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಮೈಸೂರಿನ ಉದ್ಬೂರು ಸೇರಿದಂತೆ ಕೆಲವೆಡೆ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಬಿಜೆಪಿಗೆ ಮತಚಲಾಯಿಸಿದ್ದಾರೆ ಎಂದು ಹೇಳಿದ್ದಾರೆ.

ಮೈಸೂರು ಲೋಕಸಭಾ ಚುನಾವಣೆ ಬಗ್ಗೆ ಜಿ.ಟಿ.ದೇವೇಗೌಡ ಶಾಕಿಂಗ್ ಹೇಳಿಕೆ ಮೈಸೂರು ಲೋಕಸಭಾ ಚುನಾವಣೆ ಬಗ್ಗೆ ಜಿ.ಟಿ.ದೇವೇಗೌಡ ಶಾಕಿಂಗ್ ಹೇಳಿಕೆ

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ.ಟಿ.ದೇವೇಗೌಡ ಅವರ ಹೇಳಿಕೆಯನ್ನು ಅನುಮೋದಿಸುವ ಜೊತೆಗೆ, 'ಉದ್ಬೂರಿನಲ್ಲಿ ಜೆಡಿಎಸ್ ಮತದಾರರು ಮಾತ್ರವಿಲ್ಲ, ಕಾಂಗ್ರೆಸ್‌ನವರೂ ಇದ್ದಾರೆ, ಅವರು ಕಾಂಗ್ರೆಸ್ ಪಕ್ಷಕ್ಕೇ ಮತ ಚಲಾಯಿಸಿದ್ದಾರೆ' ಎಂದು ಹೇಳಿದರು.

JDS party workers voted to BJP in Mysuru: Siddaramaiah

ಮೈಸೂರು ಕ್ಷೇತ್ರದಲ್ಲಿ 18 ಲಕ್ಷ ಮತದಾರರಿದ್ದಾರೆ ಎಲ್ಲರೂ ಬುದ್ಧಿವಂತರಿದ್ದಾರೆ, ಈ ಬಾರಿ ಮೈಸೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲುವುದು ಗ್ಯಾರೆಂಟಿ ಎಂದು ಸಿದ್ದರಾಮಯ್ಯ ವಿಶ್ವಾಸವ್ಯಕ್ತಪಡಿಸಿದರು.

ಜಿ.ಟಿ.ದೇವೇಗೌಡ, ರಾಜಕೀಯ, ಸ್ನೇಹ, ಸಿದ್ಧಾಂತ ಕುರಿತು ಸಿದ್ದರಾಮಯ್ಯ ಟ್ವೀಟ್ ಜಿ.ಟಿ.ದೇವೇಗೌಡ, ರಾಜಕೀಯ, ಸ್ನೇಹ, ಸಿದ್ಧಾಂತ ಕುರಿತು ಸಿದ್ದರಾಮಯ್ಯ ಟ್ವೀಟ್

ಸುಮಲತಾ ಅವರ ಜೊತೆ ಮಂಡ್ಯ ಕಾಂಗ್ರೆಸ್ ಸದಸ್ಯರು ರಹಸ್ಯ ಸಭೆ ನಡೆಸಿದ್ದರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಊಟಕ್ಕೆ ಹೋದದಕ್ಕೆಲ್ಲಾ ಪ್ರಶ್ನೆ ಮಾಡಲು ಆಗುತ್ತದೆಯಾ? ಎಂದ ಅವರು, ನೀವು ಎಲ್ಲೋ ಊಟಕ್ಕೆ ಹೋಗ್ತೀರಾ ನಿಮ್ಮ ಮಾಲೀಕರು ನಿಮ್ಮನ್ನ ಪ್ರಶ್ನೆ ಮಾಡೋಕೆ ಆಗುತ್ತಾ? ಎಂದು ಮರಳಿ ಸುದ್ದಿಗಾರರಿಗೇ ಪ್ರಶ್ನೆ ಮಾಡಿದರು.

ಜಿ ಟಿ ದೇವೇಗೌಡರ ಹೇಳಿಕೆಯನ್ನು ಅಲ್ಲಗಳೆದ ಸಚಿವ ಸಾ ರಾ ಮಹೇಶ್ಜಿ ಟಿ ದೇವೇಗೌಡರ ಹೇಳಿಕೆಯನ್ನು ಅಲ್ಲಗಳೆದ ಸಚಿವ ಸಾ ರಾ ಮಹೇಶ್

ಮೋದಿ ಸುಳ್ಳನ್ನು ಮಾರ್ಕೆಟಿಂಗ್ ಮಾಡಿ ಕಳೆದ ಬಾರಿ ಪ್ರಧಾನಿಯಾದರು. ಆದರೆ ಈ ಬಾರಿ ಅದು ಸಾಧ್ಯವಿಲ್ಲ. ಸರ್ಜಿಕಲ್ ಸ್ಟ್ರೈಕ್ ಸತ್ಯ ಎನ್ನುತ್ತಾರೆ. ಹಾಗಾದ್ರೆ ಮೋದಿ ಗನ್ ಹಿಡಿದುಕೊಂಡು ಯುದ್ಧ ಮಾಡಲು ಹೋಗಿದ್ರಾ? ನಮ್ಮ ಸೈನಿಕರು ಯುದ್ಧ ಮಾಡಿರೋದು ಅವರಿಗೆ ಗೌರವ ಕೊಡಬೇಕು ಎಂದರು.

English summary
Former CM Siddaramaiah said JDS party workers in Ubduru area voted for BJP, but congress voters voted for congress so we are definitely winning in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X