ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್ ಮಗುವಿನಂತೆ ಮಿಠಾಯಿ ತೋರಿಸಿದ ಕಡೆ ಹೋಗುತ್ತದೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 16; "ಜಾತ್ಯಾತೀತ ಜನತಾ ದಳ ಒಂದು ಮಗು ಇದ್ದಂತೆ. ಕಾಂಗ್ರೆಸ್‌, ಬಿಜೆಪಿ ಇಬ್ಬರಲ್ಲಿ ಯಾರು ಮಿಠಾಯಿ ತೋರಿಸುತ್ತಾರೋ ಆ ಕಡೆಗೆ ಕಡೆ ಹೋಗುತ್ತದೆ" ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ವ್ಯಂಗವಾಡಿದರು.

ಬುಧವಾರ ಮೈಸೂರು ನಗರದ ರಾಜೇಂದ್ರ ಕಲಾಮಂದಿರದಲ್ಲಿ ಆಯೋಜಿಸಿದ್ದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಹೆಚ್. ವಿಶ್ವನಾಥ್ ಪಾಲ್ಗೊಂಡಿದ್ದರು. ಮಾಧ್ಯಮಗಳ ಜೊತೆ ಮಾತನಾಡಿದರು.

ವಿಶ್ವನಾಥ್ ಬಹಿರಂಗ ಹೇಳಿಕೆಗೆ ಜಗದೀಶ್ ಶೆಟ್ಟರ್ ಕಿವಿಮಾತುವಿಶ್ವನಾಥ್ ಬಹಿರಂಗ ಹೇಳಿಕೆಗೆ ಜಗದೀಶ್ ಶೆಟ್ಟರ್ ಕಿವಿಮಾತು

"ಜೆಡಿಎಸ್ ಪಕ್ಷವೆಂಬುದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಒಂದು ಮಗು. ಆ ಮಗುವಿಗೆ ಯಾರು ಮಿಠಾಯಿ ತೋರಿಸುತ್ತಾರೋ ಅವರ ಕಡೆ ಮಗು ಹೋಗುತ್ತದೆ. ಹೀಗಾಗಿ ಅವರ ಬಗ್ಗೆ ಹೆಚ್ಚು ಮಾತನಾಡುವುದು ಬೇಡ" ಎಂದು ವಿಶ್ವನಾಥ್ ಹೇಳಿದರು.

ಹೈಕೋರ್ಟ್‌ ತೀರ್ಪು: ಮುಂದಿನ ನಡೆಯ ಗುಟ್ಟು ಬಿಟ್ಟುಕೊಟ್ಟ ಎಚ್. ವಿಶ್ವನಾಥ್! ಹೈಕೋರ್ಟ್‌ ತೀರ್ಪು: ಮುಂದಿನ ನಡೆಯ ಗುಟ್ಟು ಬಿಟ್ಟುಕೊಟ್ಟ ಎಚ್. ವಿಶ್ವನಾಥ್!

JDS Party Is Like Child Says H Vishwanath

ಪರಿಷತ್ ಗಲಾಟೆ; ವಿಧಾನ ಪರಿಷತ್‌ನಲ್ಲಿ ಮಂಗಳವಾರ ನಡೆದ ಗಲಾಟೆ ಬಗ್ಗೆ ಮಾತನಾಡಿದ ಹೆಚ್. ವಿಶ್ವನಾಥ್, "ಸಾರ್ವಭೌಮ ಸದಸನದ ಬಾಗಿಲನ್ನು ಕಾಂಗ್ರೆಸ್‌ನವರು ಬೂಟು ಕಾಲಿನಿಂದ ಒದ್ದರು. ಇವರಿಗೆ ಸದನದ ಬಗ್ಗೆ ಅದ್ಯಾವ ಗೌರವವಿದೆ?" ಎಂದು ಪ್ರಶ್ನಿಸಿದರು.

ಸಚಿವರಾಗುವಂತಿಲ್ಲ: ಎಚ್ ವಿಶ್ವನಾಥ್ ಅವರಿಗೆ ಭಾರಿ ಆಘಾತ ನೀಡಿದ ಹೈಕೋರ್ಟ್ಸಚಿವರಾಗುವಂತಿಲ್ಲ: ಎಚ್ ವಿಶ್ವನಾಥ್ ಅವರಿಗೆ ಭಾರಿ ಆಘಾತ ನೀಡಿದ ಹೈಕೋರ್ಟ್

ಪರಿಷತ್ ಗಲಾಟೆ; ವಿಧಾನ ಪರಿಷತ್‌ನಲ್ಲಿ ಮಂಗಳವಾರ ನಡೆದ ಗಲಾಟೆ ಬಗ್ಗೆ ಮಾತನಾಡಿದ ಹೆಚ್. ವಿಶ್ವನಾಥ್, "ಸಾರ್ವಭೌಮ ಸದಸನದ ಬಾಗಿಲನ್ನು ಕಾಂಗ್ರೆಸ್‌ನವರು ಬೂಟು ಕಾಲಿನಿಂದ ಒದ್ದರು. ಇವರಿಗೆ ಸದನದ ಬಗ್ಗೆ ಅದ್ಯಾವ ಗೌರವವಿದೆ?" ಎಂದು ಪ್ರಶ್ನಿಸಿದರು.

"ದೇಶದ ಎಲ್ಲಾ ಸದನಗಳನ್ನು ನಮ್ಮ ವಿಧಾನ ಪರಿಷತ್ ಮೀರಿ ನಿಂತಿದೆ. ತನ್ನದೇ ಆದ ಸಂಸ್ಕೃತಿಯನ್ನು ಇಡೀ ದೇಶದಲ್ಲಿ ಅದು ಬಿಂಬಿಸಿದೆ. ಅಂತಹ ಪರಿಷತ್‌ನ ವಿಶಿಷ್ಟ ಸ್ಥಾನವನ್ನು ನಾವೆಲ್ಲರೂ ಸೇರಿ ಕಳೆದಿದ್ದೇವೆ" ಎಂದು ವಿಷಾದ ವ್ಯಕ್ತಪಡಿಸಿದರು.

"ಯಾರು ಜನತಂತ್ರ ವ್ಯವಸ್ಥೆ ಬಗ್ಗೆ ಭಾಷಣ ಮಾಡಿದರೋ ಅವರೇ ಸದನದಲ್ಲಿ ಅದನ್ನು ಕೊಚ್ಚಿ ಕೊಂದಿದ್ದಾರೆ. ಸದನವನ್ನು ನಾವು ದೇವಾಲಯ ಎಂದಿದ್ದೆವು. ಪ್ರಧಾನಿ ಲೋಕಸಭೆಗೆ ನಮಸ್ಕಾರ ಮಾಡಿದ್ದರು" ಎಂದು ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.

ಹುಣಸೂರು ಶಾಸಕರಾಗಿದ್ದ ಹೆಚ್. ವಿಶ್ವನಾಥ್ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರು. ಕರ್ನಾಟಕದಲ್ಲಿ ಮೈತ್ರಿ ಸರ್ಕಾರವಿದ್ದಾಗ ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದರು. ಶಾಸಕ ಸ್ಥಾನ ತೊರೆದು ಬಿಜೆಪಿ ಸೇರಿದರು. ಬಳಿಕ ನಡೆದ ಉಪ ಚುನಾವಣೆಯಲ್ಲಿ ಹುಣಸೂರಿನಲ್ಲಿ ಸೋತರು.

ಉಪ ಚುನಾವಣೆಯಲ್ಲಿ ಸೋತ ಹೆಚ್. ವಿಶ್ವನಾಥ್ ಅವರನ್ನು ಬಿಜೆಪಿ ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಮಾಡಿದೆ. ಯಡಿಯೂರಪ್ಪ ಸಂಪುಟ ಸೇರಬೇಕು ಎಂದು ಅವರು ಬಹಳ ಪ್ರಯತ್ನ ನಡೆಸಿದರು. ಆದರೆ, ಕರ್ನಾಟಕ ಹೈಕೋರ್ಟ್‌ ಅವರು ಸಚಿವರಾಗಲು ಅನರ್ಹ ಎಂದು ತೀರ್ಪು ನೀಡಿದೆ.

English summary
BJP leader and MLC Adagur H. Vishwanath said that JD(S) party is like child. H. Vishwanath former president of the JD(S) party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X