ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಮೇಯರ್ ಚುನಾವಣೆ; ಜೆಡಿಎಸ್, ಕಾಂಗ್ರೆಸ್ ಮೈತ್ರಿ?

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 27; "ಮೈತ್ರಿ ಬಗ್ಗೆ ಇನ್ನೂ ಯಾವುದೇ ಚರ್ಚೆಯಾಗಿಲ್ಲ. ಮೀಸಲಾತಿ ಪ್ರಕಟವಾಗುವ ತನಕ ನಾವು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ" ಎಂದು ಜೆಡಿಎಸ್ ಶಾಸಕ ಸಾ. ರಾ. ಮಹೇಶ್ ಹೇಳಿದರು.

ಮೈಸೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಅವಧಿ ಪೂರ್ಣಗೊಂಡಿದೆ. ಸರ್ಕಾರ ಮೀಸಲಾತಿ ಪ್ರಕಟಿಸಿದರೆ ನೂತನ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ದಿನಾಂಕ ನಿಗದಿಯಾಗಲಿದೆ.

ಮೈಸೂರು ಹೈಕಮಾಂಡ್; ಜಿಟಿಡಿಗೆ ಸಾ. ರಾ. ಮಹೇಶ್ ಪ್ರತಿಕ್ರಿಯೆ! ಮೈಸೂರು ಹೈಕಮಾಂಡ್; ಜಿಟಿಡಿಗೆ ಸಾ. ರಾ. ಮಹೇಶ್ ಪ್ರತಿಕ್ರಿಯೆ!

ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆಯೇ? ಎಂಬ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿವೆ. ಇದಕ್ಕೆ ಕಾರಣವಾಗಿರುವುದು ಜೆಡಿಎಸ್ ನಾಯಕರು ಹೇಳಿಕೆಗಳು.

ಮೈಸೂರು ಮೇಯರ್ ಚುನಾವಣೆ; ಕುತೂಹಲ ಮೂಡಿಸಿದ ಜೆಡಿಎಸ್! ಮೈಸೂರು ಮೇಯರ್ ಚುನಾವಣೆ; ಕುತೂಹಲ ಮೂಡಿಸಿದ ಜೆಡಿಎಸ್!

JDS May Go With Congress In Mysuru City Corporation

ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ ಸಾ. ರಾ. ಮಹೇಶ್, "ನಗರ ಪಾಲಿಕೆ ಸದಸ್ಯರು, ಮಾಜಿ ಮೇಯರುಗಳು ಕೆಲವು ಕಾಂಗ್ರೆಸ್‌ನವರು ನಡೆದುಕೊಂಡ ರೀತಿಗಳನ್ನ ನಮ್ಮ ಗಮನಕ್ಕೆ ತಂದಿದ್ದಾರೆ. ನಗರದ ಇತರ ಕಾಂಗ್ರೆಸ್ ನಾಯಕರ ಜೊತೆ ನಮ್ಮ ಸಂಬಂಧ ಚೆನ್ನಾಗಿದೆ" ಎಂದರು.

ಮೈಸೂರು ರಸ್ತೆಗಿಳಿದ 'ಅಂಬಾರಿ' ಡಬ್ಬಲ್ ಡೆಕ್ಕರ್ ಬಸ್ ಮೈಸೂರು ರಸ್ತೆಗಿಳಿದ 'ಅಂಬಾರಿ' ಡಬ್ಬಲ್ ಡೆಕ್ಕರ್ ಬಸ್

"ಯಾರೋ ಇಬ್ಬರು ಮೂವರ ನಡೆವಳಿಕೆಯಿಂದ ಪಕ್ಷವನ್ನ ದೂರುವುದಕ್ಕೆ ಸಾಧ್ಯವಿಲ್ಲ. ಆದರೆ, ಮೀಸಲಾತಿ ಪ್ರಕಟವಾದ ನಂತರ ನಮ್ಮ ಸದಸ್ಯರ ತೀರ್ಮಾನದಂತೆ ನಡೆದುಕೊಳ್ಳುತ್ತೇವೆ. ಎರಡು ಪಕ್ಷಗಳು ರಾಜಕೀಯವಾಗಿ ನಮ್ಮ ವಿರೋಧಿಗಳೇ, ಹಾಗಾಗಿ ಸದ್ಯ ತಟಸ್ಥವಾಗಿ ಇರುತ್ತೇವೆ" ಎಂದು ಸಾ. ರಾ. ಮಹೇಶ್ ಹೇಳಿದರು.

ಶಾಸಕ ರಾಮದಾಸ್ ಹೇಳಿಕೆ; ಬಿಜೆಪಿ ನಾಯಕ, ಶಾಸಕ ಎಸ್. ಎ. ರಾಮದಾಸ್ ಸಹ ಪಾಲಿಕೆ ಚುನಾವಣೆ ಬಗ್ಗೆ ಮಾತನಾಡಿದ್ದಾರೆ. "ಪಾಲಿಕೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ವಿಚಾರ ಇಲ್ಲಾ, ನನಗೆ ಏನೂ ಗೊತ್ತಿಲ್ಲ" ಎಂದರು.

"ರಾಜಕಾರಣದಲ್ಲಿ ಏನೂ ಹೇಳುವುದಕ್ಕೆ ಆಗಲ್ಲ. ಜೆಡಿಎಸ್-ಬಿಜೆಪಿ ಮೈತ್ರಿ ಆಗುತ್ತೆ ಅಂತಾನೂ ಹೇಳುವುದಕ್ಕೆ ಆಗಲ್ಲ, ಮೈತ್ರಿ ಆಗಲ್ಲ ಅಂತಾನೂ ಹೇಳುವುದಕ್ಕೆ ಆಗಲ್ಲ. ಪಾಲಿಕೆ ಮೈತ್ರಿ ವಿಚಾರದಲ್ಲಿ ಯಾವುದೇ ಮಾತುಕತೆ ನಡೆದಿಲ್ಲ. ಮೀಸಲಾತಿ ಪ್ರಕಟಣೆ ಬಳಿಕ ತೀರ್ಮಾನ ಮಾಡಲಾಗುತ್ತದೆ" ಎಂದು ಸ್ಪಷ್ಟಪಡಿಸಿದರು.

ಮ್ಯಾಜಿಕ್ ನಂಬರ್

ಮೈಸೂರು ಮಹಾನಗರ ಪಾಲಿಕೆ ಸದಸ್ಯರ ಸಂಖ್ಯಾ ಬಲ

* ಬಿಜೆಪಿ - 22
* ಕಾಂಗ್ರೆಸ್ - 19
* ಜೆಡಿಎಸ್ - 18
* ಬಿಎಸ್ಪಿ - 1
* ಪಕ್ಷೇತರ - 5

ಒಟ್ಟು ವಾರ್ಡ್‌ಗಳು 65.

* ಶಾಸಕರು - 4
* ವಿಧಾನ ಪರಿಷತ್ ಸದಸ್ಯರು - 4
* ಸಂಸದ - 1 (MLA, MLC ಹಾಗೂ MP ಸೇರಿ 73)

* ಬಹುಮತ ಸಾಬೀತುಪಡಿಸಲು 37 ಸದಸ್ಯರ ಬಲ ಬೇಕು

English summary
JD(S) may go with Congress in Mysuru city corporation mayor and deputy mayor elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X