ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ; 30 ನಿಮಿಷದಲ್ಲಿ ಮುಗಿಯಲಿದೆ ಜಂಬೂಸವಾರಿ ಮೆರವಣಿಗೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 21: ಕೊರೊನಾ ಸೋಂಕಿನ ಕಾರಣವಾಗಿ ಈ ಬಾರಿ ದಸರಾ ಉತ್ಸವವನ್ನು ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಅರಮನೆಗೆ ಆಚರಣೆಗಳನ್ನು ಸೀಮಿತಗೊಳಿಸಲಾಗಿದೆ. ಹಾಗೆಯೇ ಜಂಬೂಸವಾರಿ ಮೆರವಣಿಗೆಯನ್ನೂ ಕೇವಲ 500 ಮೀಟರ್ ಗೆ ಸೀಮಿತಗೊಳಿಸಿ ಮುಕ್ತಾಯಗೊಳಿಸಲಾಗುತ್ತದೆ.

ಈ ಬಾರಿ ಕೇವಲ 30 ನಿಮಿಷದಲ್ಲಿ ಜಂಬೂಸವಾರಿ ಮೆರವಣಿಗೆಯು ಮುಕ್ತಾಯಗೊಳ್ಳುತ್ತದೆ. ಪ್ರತಿ ಬಾರಿಯೂ ದಸರಾದಲ್ಲಿ ವಿಜೃಂಭಣೆಯಿಂದ ಜಂಬೂಸವಾರಿ ಮೆರವಣಿಗೆ ಹೊರಡುತ್ತಿತ್ತು. ಮೈಸೂರು ಅರಮನೆ ಆವರಣದಿಂದ ಆರಂಭವಾಗಿ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದವರೆಗೂ 5 ಕಿಲೋ ಮೀಟರ್ ವರೆಗೆ ಜಂಬೂಸವಾರಿ ಮೆರವಣಿಗೆ ವೈಭವದಿಂದ ನಡೆಯುತ್ತಿತ್ತು. ಆದರೆ ಈ ಬಾರಿ ಜಂಬೂಸವಾರಿಯೂ ಸರಳವಾಗಿದ್ದು, ಕೇವಲ 500 ಮೀಟರ್​ಗೆ ಮುಗಿಯಲಿದೆ.

ಮೆರವಣಿಗೆಯಲ್ಲಿ ಕೊರೊನಾ ಜಾಗೃತಿ ಮೂಡಿಸುವ ಹಾಗೂ ಸರ್ಕಾರದ ಸಾಧನೆ ವಿವರಿಸುವ 2 ಸ್ತಬ್ಧ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಪಥ ಸಂಚಲನಕ್ಕೆ 4 ಪೋಲಿಸ್ ತುಕಡಿ, ಅಶ್ವಾರೋಹಿ ದಳದ ತುಕಡಿ ಇರಲಿವೆ. ಜಂಬೂಸವಾರಿಯಲ್ಲಿ 300 ಜನರ ವೀಕ್ಷಣೆಗೆ ಅವಕಾಶ ನೀಡಲಾಗಿದೆ.

Mysuru Dasara 2020: Jamboo Savari to end in 30 Minutes

ಅಕ್ಟೋಬರ್ 26 ರಂದು ಜಂಬೂ ಸವಾರಿ ನಡೆಯಲಿದ್ದು, ಮಧ್ಯಾಹ್ನ 2:59 ರಿಂದ 3:20 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಸಿಎಂ ಯಡಿಯೂರಪ್ಪ ನವರು ಅರಮನೆಯ ಉತ್ತರ ದ್ವಾರ ಬಲರಾಮ ದ್ವಾರದ ಬಳಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡುತ್ತಾರೆ. ನಂತರ ಮಧ್ಯಾಹ್ನ 3:40ರಿಂದ 4:15 ರೊಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಅಭಿಮನ್ಯುವಿನ ಬೆನ್ನ ಮೇಲೆ ಚಿನ್ನದ ಅಂಬಾರಿ ಇಟ್ಟು ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುತ್ತಾರೆ. 30 ನಿಮಿಷದಲ್ಲಿ ಜಂಬೂಸವಾರಿ ಅಂತ್ಯಗೊಳ್ಳಲಿದೆ.

English summary
This time, Dasara jamboo savari parade is limited to 500 meters. It will conclue in just 30 minutes,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X