• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಸಿದಾಗ ಹಲಸು: ಬಡವರ ಹಣ್ಣು ಹಲಸಿಗೆ ಮೈಸೂರಲ್ಲಿ ಎಲ್ಲಿಲ್ಲದ ಬೇಡಿಕೆ

|

ಮೈಸೂರು, ಏಪ್ರಿಲ್ 20: ಮಲೆನಾಡಿನಲ್ಲಿ ಹಲಿಸನ ಸೀಸನ್ ಆರಂಭೌಆಗಿದ್ದು ಪ್ರತಿಯೊಬ್ಬರ ಮನೆಯಲ್ಲೂ ಹಲಸಿನ ಕಡುಬು ಘಮ ಘಮಿಸುತ್ತಿದ್ದರೆ, ನಗರದಲ್ಲೂ ಏನೂ ಕಡಿಮೆ ಇಲ್ಲ ಹಲಸಿಗೆ ಭಾರಿ ಬೇಡಿಕೆಯೇ ಇದೆ.

ಬಡವರ ಹಣ್ಣು ಎಂದೇ ಖ್ಯಾತಿಹೊಂದಿರುವ ಹಲಸಿನ ಹಣ್ಣು ಉತ್ಪಾದನೆಯಲ್ಲಿ ಭಾರತವು ಜಗತ್ತಿನಲ್ಲಿ 2ನೇ ಸ್ಥಾನ ಪಡೆದಿದೆ. ದೇಶದಲ್ಲಿ ಕರ್ನಾಟಕ ಮೊದಲನೇ ಸ್ಥಾನ ಪಡೆದಿದೆ. ಸಮೀಕ್ಷೆಯ ಪ್ರಕಾರ ದೇಶದಲ್ಲಿ 1.20 ಲಕ್ಷ ಹೆಕ್ಟೇರ್ ಮತ್ತು ಕರ್ನಾಟಕದಲ್ಲಿ 11,500 ಹೆಕ್ಟೇರ್ ವ್ಯಾಪ್ತಿಯಲ್ಲಿ ಹಲಸನ್ನು ಬೆಳೆಸಲಾಗುತ್ತದೆ.

ಉಡುಪಿಯಲ್ಲಿ ಹಲಸು ಮೇಳ: ರುಚಿ ನೋಡಿ ಬಾಯಿ ಚಪ್ಪರಿಸಿದ ಜನರು

ಹಲಸಿನ ಹಣ್ಣಿನ ಉಪಯೋಗದ ವಿಚಾರಕ್ಕೆ ಬಂದರೆ ಹಲವಾರು ಖಾದ್ಯಗಳನ್ನು ತಯಾರು ಮಾಡಲಾಗುತ್ತದೆ. ಹವ್ಯಕರು ಮಾಡುವ ಹೋಮ ಹವನಾದಿಗಳಿಗೆ ಹಲಸಿನ ಮರದ ಕಟ್ಟಿಗೆಗಳು ಪ್ರಮುಖ ಸ್ಥಾನ ಪಡೆದಿರುತ್ತದೆ. ಉತ್ತಮವಾಗಿ ಬಲಿತಿರುವ ಹಲಸಿನ ಮರದ ದಿಮ್ಮಿಗಳಿಂದ ಕಿಟಕಿ-ಬಾಗಿಲುಗಳು, ಮನೆಗೆ ಬೇಕಾದ ಪೀಠೋಪಕರಣಗಳನ್ನು ತಯಾರಿಸಲಾಗುತ್ತದೆ.

ವಿಟಮಿನ್ 'ಸಿ' ಜೀವಸತ್ವವನ್ನು ಹೇರಳವಾಗಿ ಹೊಂದಿರುವ ಹಲಸಿನ ಹಣ್ಣು 'ಲಿಗಾನ್ಸ್, ಐಸೋಫ್ಲೇವನ್ಸ್ ಮತ್ತು ಸಫೋನಿನ್ಸ್' ನಂಥ ವಿಶೇಷ ಪೋಷಕಾಂಶಗಳನ್ನು ದೇಹಕ್ಕೆ ಒದಗಿಸುತ್ತದೆ. ಇದು ಕ್ಯಾನ್ಸರ್ ನಂಥ ಮಾರಣಾಂತಿಕ ಕಾಯಿಲೆಗಳ ವಿರುದ್ಧ ಪ್ರತಿರೋಧಕವಾಗಿ ಕೆಲಸ ಮಾಡುವುದಲ್ಲದೆ, ಬೇಗನೆ ಮುಪ್ಪು ಬರುವುದನ್ನು ತಡೆಯುವಲ್ಲಿ ಸಹಕಾರಿಯಾಗಿದೆ.

ಆಲ್ಸರ್ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳನ್ನು ದೂರಮಾಡುವ ಗುಣ ಹೊಂದಿರುವ ಇದು, ಅತ್ಯಧಿಕ ಫೈಬರ್ ಅಂಶವನ್ನು ಹೊಂದಿರುವುದರಿಂದ ಕರುಳಿನ ಕೆಲಸ ಸರಾಗವಾಗಿ ನಡೆಯಲು ಬೆಂಬಲ ನೀಡುತ್ತದೆ. ವಿಟಮಿನ್ 'ಸಿ' ಪೋಷಕಾಂಶವನ್ನು ಒಳಗೊಂಡಿರುವುದರಿಂದ 'ವೈರಲ್ ಫಿವರ್ ಹಾಗೂ ಬ್ಯಾಕ್ಟೀರಿಯಾ ಸೋಂಕಿ'ನಿಂದ ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಕ್ತದಲ್ಲಿನ ಬಿಳಿರಕ್ತ ಕೋಶಗಳ ರಚನೆಯನ್ನು ಬೆಂಬಲಿಸುವ ಹಲಸಿನ ಹಣ್ಣು ಶಕ್ತಿಯುತ ಉತ್ಕರ್ಷಣ ನಿರೋಧಕವನ್ನು ದೇಹಕ್ಕೆ ಒದಗಿಸುತ್ತದೆ.

'ಹಲಸಿನ ಹಣ್ಣು ಸೇವನೆಯಿಂದ ಏಡ್ಸ್ ಕಾಯಿಲೆ ದೂರವಿಡಬಹುದು'

ಸದಾ ಮಳೆಯಿಂದ ಕೂಡಿದ ಕರಾವಳಿ ಮತ್ತು ಮಲೆನಾಡಿನಲ್ಲಿ ಹಲಸು ಮನೆ ಮನೆಯಲ್ಲಿ ಪ್ರಮುಖ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಯಾವುದೇ ಖರ್ಚು ಇಲ್ಲದೆ ಸುಲಭವಾಗಿ ಮನೆಯ ಬಳಿಯಲ್ಲಿಯೇ ಸಿಗುವ ಹಲಸು, ಹಣ್ಣು ಮಾತ್ರವಲ್ಲದೆ ಕಾಯಿ ಕೂಡ ತರಕಾರಿಯಾಗಿ ಬಳಕೆಯಲ್ಲಿದೆ. ಎಳೆಯ ಚಿಕ್ಕ ಚಿಕ್ಕ ಹಲಸಿನ ಕಾಯಿಗಳನ್ನು ತಂದು ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಕತ್ತರಿಸಿ ಅಡುಗೆ ತಯಾರಿಯಲ್ಲಿ ಬಳಸಲಾಗುತ್ತದೆ.

ಕೊಂಚ ಹೆಚ್ಚಿನ ತೊಗರಿ ಬೇಳೆಯೊಂದಿಗೆ ಹದವಾಗಿ ಬೇಯಿಸಿ ಮಸಾಲೆ ಸೇರಿಸಿ ಒಗ್ಗರಣೆ ಕೊಟ್ಟರೆ ಸಾಂಬಾರು ಸಿದ್ಧ. ಕೃಷಿ ಕಾರ್ಮಿಕರಿಂದ ಹಿಡಿದು ಶ್ರೀಮಂತರ ಮನೆಗಳ ಜೊತೆಗೆ ವಿಶೇಷ ಕಾರ್ಯಕ್ರಮಗಳ ಅಡುಗೆಯಲ್ಲಿ ಬಳಕೆಯಾಗುವ ಹಲಸು ತನ್ನ ರುಚಿಯಿಂದ ಎಲ್ಲಾ ಕಡೆಯಲ್ಲೂ ತನ್ನ ಪಾರುಪತ್ಯ ನಡೆಸಿಯೇ ತೀರುವುದು ವಿಶೇಷ. ಕೇವಲ ಸಾಂಬಾರ್ ಮಾತ್ರವಲ್ಲದೆ ಪಲ್ಯ, ಗೊಜ್ಜು, ಕಬಾಬ್, ಕರಿಕಡುಬು, ಆಧುನಿಕ ಶೈಲಿಯ ಫ್ರೈಡ್ ರೈಸ್, ಮಸಾಲೆ ವಡೆ, ಸೂಪ್ ತಯಾರಿಕೆಯಲ್ಲಿ ಕೂಡ ಬಳಕೆಯಲ್ಲಿದೆ.

ದಿನನಿತ್ಯದ ಆಹಾರ ತಯಾರಿಕೆಯಲ್ಲಿ ತನ್ನ ಕರಾಮತ್ತು ಪ್ರದರ್ಶಿಸುವ ಹಲಸಿನ ಕಾಯಿಗಳದ್ದು ಒಂದು ವರ್ಗವಾದರೆ, ಹಲಸಿನ ಹಣ್ಣುಗಳ ಕಾರುಬಾರು ಬೇರೆಯದ್ದೇ ರೀತಿಯದ್ದಾಗಿದೆ. ಹಲಸಿನ ಪ್ರಿಯರು ಎಲ್ಲೆಡೆ ಇರುವುದರಿಂದ ಹಲಸಿನ ಹಬ್ಬ, ಜಾತ್ರೆಗಳಿಗೇನು ಕಡಿಮೆಯಿಲ್ಲ. ಹಸಿದಾಗ ಹಲಸು ತಿನ್ನು ಎಂಬ ಹಿರಿಯರ ನಾಣ್ಣುಡಿಯಂತೆ ಹಲಸಿನ ಹಣ್ಣಿಗೆ ಮಾರು ಹೋಗದವರೇ ಇಲ್ಲ.

ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿರುವ ಮಾವು - ಹಲಸು ಮೇಳ

ಇದನ್ನು ಅರಿತುಕೊಂಡೇ ಮಲೆನಾಡಿನಲ್ಲಿ ಹಲಸಿನ ವಿಶೇಷ ಪದಾರ್ಥಗಳನ್ನು ತಯಾರು ಮಾಡಿ ಗುಡಿ ಕೈಗಾರಿಕೆಗಳ ಮೂಲಕ ಜೀವನ ಕಟ್ಟಿಕೊಂಡವರಿದ್ದಾರೆ. ಹಲಸಿನ ಚಕ್ಕುಲಿ, ಹಪ್ಪಳ, ಸಂಡಿಗೆ, ಶ್ಯಾವಿಗೆ, ಹಲಸಿನ ಬನ್, ಉಪ್ಪಿನ ಕಾಯಿ ಹೀಗೆ ತಹರೇವಾರಿ ಶೈಲಿಯ ಪದಾರ್ಥಗಳನ್ನು ತಯಾರು ಮಾಡಿ ಮಾರಾಟ ಮಾಡಲಾಗುತ್ತದೆ.

ನಗರವಾಸಿಗಳು ಇಂಥಹ ಚಟುವಟಿಕೆಗಳನ್ನು ಮಾದರಿಯನ್ನಾಗಿಸಿಕೊಂಡು ಮಲೆನಾಡಿನ ಸಾಂಪ್ರದಾಯಿಕ ಶೈಲಿಯ ಜೊತೆಯಲ್ಲಿ ಹಲಸಿನ ಹಣ್ಣಿನ ದೋಸೆ, ಇಡ್ಲಿ, ಹಲಸಿನ ಪಾಯಸ, ಬಿರಿಯಾನಿ, ಐಸ್ ಕ್ರೀಮ್, ಬೋಂಡಾ, ಹಲಸಿನ ಫ್ರೈಡ್ ರೈಸ್ ನಂಥಹ ವಿಶಿಷ್ಟ ಬಗೆಯ ರುಚಿಕರ ಆಹಾರ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

English summary
Jack fruit is called as poor people fruit. Jack fruit demand is getting hike at day by day in all over india.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X