ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಇನ್ನು ಮುಂದೆ ಡಿಎಲ್ ಪಡೆಯುವುದಕ್ಕೆ ಅನ್ಯಮಾರ್ಗವಿಲ್ಲ

By Lekhaka
|
Google Oneindia Kannada News

ಮೈಸೂರು, ಫೆಬ್ರವರಿ 05: ಪ್ರತಿಯೊಬ್ಬರಿಗೂ ವಾಹನ ಓಡಿಸಲು ಡ್ರೈವಿಂಗ್ ಲೈಸೆನ್ಸ್ ಬೇಕೇ ಬೇಕು. ಆದರೆ ಮೈಸೂರಿನಲ್ಲಿ ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಸುಲಭವಲ್ಲ. ನಗರದಲ್ಲಿ ಆಧುನಿಕ ತಂತ್ರಜ್ಞಾನದ ಸ್ವಯಂಚಾಲಿತ ವಿದ್ಯುನ್ಮಾನ ಚಾಲನಾ ಪರೀಕ್ಷಾ ಕೇಂದ್ರ ಶ್ರೀಘ್ರವೇ ಕಾರ್ಯಾರಂಭಗೊಳ್ಳಲಿದ್ದು, ಪಾಲಿಸಬೇಕಾದ ನಿಯಮಗಳೂ ಕಠಿಣವಾಗಲಿವೆ.

ಈಗಂತೂ ದಿನದಿಂದ ದಿನಕ್ಕೆ ಸಂಚಾರ ನಿಯಮಗಳು ಕಠಿಣಗೊಳ್ಳುತ್ತಿವೆ. ಅದಕ್ಕೀಗ ಆಧುನಿಕ ತಂತ್ರಜ್ಞಾನದ ವಿದ್ಯುನ್ಮಾನ ಚಾಲನಾ ಪರೀಕ್ಷಾ ಕೇಂದ್ರ ಕೂಡ ಸೇರ್ಪಡೆಯಾಗಿದೆ. ಮೈಸೂರಿನ ದೇವನೂರು ಬಡಾವಣೆ ಸಮೀಪದ ಹೊರವರ್ತುಲ ರಸ್ತೆಯಲ್ಲಿ ನಿರ್ಮಿಸಲಾಗಿರುವ ಆಧುನಿಕ ತಂತ್ರಜ್ಞಾನದ ಸ್ವಯಂ ಚಾಲಿತ ವಿದ್ಯುನ್ಮಾನ ಚಾಲನಾ ಪರೀಕ್ಷಾ ಪಥ ಉದ್ಘಾಟನೆಗೊಂಡಿದ್ದರೂ, ಕಾರ್ಯಾರಂಭ ಶುರುವಾಗಿಲ್ಲ. ಇದಕ್ಕೆ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಬಹುತೇಕ ಈ ತಿಂಗಳ ಅಂತ್ಯಕ್ಕೆ ಇದು ಕಾರ್ಯಾರಂಭ ಮಾಡುವ ಸಾಧ್ಯತೆಗಳು ಹೆಚ್ಚಿದೆ.

 ಪರವಾನಗಿ ಪಡೆಯುವುದು ಅತ್ಯಂತ ಕಠಿಣ

ಪರವಾನಗಿ ಪಡೆಯುವುದು ಅತ್ಯಂತ ಕಠಿಣ

ಡ್ರೈವಿಂಗ್ ಲೈಸನ್ಸ್ ಮಾಡಿಸಲು ಆರ್ ಟಿಒ ಕಚೇರಿಗೆ ತೆರಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಲೈಸನ್ಸ್ ಪಡೆಯಲು ಕಚೇರಿಗೆ ಬಂದರೆ ಉದ್ದದ ಕ್ಯೂ ನಿಲ್ಲಬೇಕು. ಡಿಎಲ್ ಗಾಗಿ ಅರ್ಜಿ ಹಾಕಿದ ನಂತರ ಡ್ರೈವಿಂಗ್ ಟೆಸ್ಟ್ ಸೇರಿದಂತೆ ಹಲವು ಸುತ್ತಿನ ಪರೀಕ್ಷೆಗಳನ್ನು ಎದುರಿಸಬೇಕು. ಇದನ್ನೆಲ್ಲ ಎದುರಿಸಲಾಗದ ಹಲವರು ಮಧ್ಯವರ್ತಿಗಳ ಮೂಲಕ ಸುಲಭವಾಗಿ ಡಿಎಲ್ ಪಡೆಯುತ್ತಿದ್ದರು. ಆದರೆ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆರಂಭಿಸಿರುವ ವಿದ್ಯುನ್ಮಾನ ಚಾಲನಾ ಪರೀಕ್ಷಾ ಪಥದ ಮೂಲಕ ಯಾವುದೇ ಪರೀಕ್ಷೆ ಎದುರಿಸದೇ ಮಧ್ಯವರ್ತಿಗಳು, ಇತರರ ನೆರವು ಪಡೆದು ಚಾಲನಾ ಪರವಾನಗಿ ಪಡೆಯುವುದು ಅತ್ಯಂತ ಕಠಿಣವಾಗಲಿದೆ.

ಸಂಚಾರ ನಿಯಮ ಉಲ್ಲಂಘನೆ; ಮೈಸೂರಿನಲ್ಲಿ 6 ವರ್ಷದಲ್ಲಿ 18 ಕೋಟಿ ದಂಡಸಂಚಾರ ನಿಯಮ ಉಲ್ಲಂಘನೆ; ಮೈಸೂರಿನಲ್ಲಿ 6 ವರ್ಷದಲ್ಲಿ 18 ಕೋಟಿ ದಂಡ

 ಎಲ್ಲವೂ ತಂತ್ರಜ್ಞಾನಮಯ

ಎಲ್ಲವೂ ತಂತ್ರಜ್ಞಾನಮಯ

ಹೊಸದಾಗಿ ಆರಂಭಿಸಲಾಗಿರುವ ವಿದ್ಯುನ್ಮಾನ ಚಾಲನಾ ಪರೀಕ್ಷಾ ಕೇಂದ್ರದಲ್ಲಿ ಎಲ್ಲವೂ ಆಧುನಿಕ ತಂತ್ರಜ್ಞಾನದ ಮೂಲಕವೇ ನಡೆಯಲಿದೆ. ಹೀಗಾಗಿ ಇನ್ನು ಮುಂದೆ ಡಿಎಲ್ ಪಡೆಯುವವರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ, ನಿಗದಿತ ಶುಲ್ಕ ಪಾವತಿಸಬೇಕಿದೆ. ನಂತರ ಅರ್ಜಿದಾರರಿಗೆ ಪರೀಕ್ಷೆಗೆ ಹಾಜರಾಗಬೇಕಾದ ದಿನ ಮತ್ತು ಸಮಯವನ್ನು ನೀಡಲಾಗುತ್ತದೆ. ಅದರಂತೆ ಡಿಎಲ್ ಪರೀಕ್ಷೆಗೆ ಹಾಜರಾಗುವ ಅರ್ಜಿದಾರರು ಹೊಸದಾಗಿ ನಿರ್ಮಿಸಿರುವ ಪರೀಕ್ಷಾ ಪಥದಲ್ಲೇ ವಾಹನ ಚಾಲನೆ ಮಾಡಬೇಕಿದ್ದು, ಈ ಸಂದರ್ಭದಲ್ಲಿ ಯಾವುದೇ ಲೋಪವಿಲ್ಲದೆ ವಾಹನ ಚಾಲನೆ ಮಾಡಿದರಷ್ಟೇ ಡಿಎಲ್ ದೊರೆಯಲಿದೆ.

 ದ್ವಿಚಕ್ರ ವಾಹನ ಸವಾರರಿಗೆ 108 ಸೆಕೆಂಡ್ ಪರೀಕ್ಷೆ

ದ್ವಿಚಕ್ರ ವಾಹನ ಸವಾರರಿಗೆ 108 ಸೆಕೆಂಡ್ ಪರೀಕ್ಷೆ

ಡಿಎಲ್ ಪರೀಕ್ಷಾ ಪಥದಲ್ಲಿ ವಾಹನ ಚಾಲನೆ ಮಾಡುವ ದ್ವಿಚಕ್ರ ವಾಹನ ಸವಾರರು 180 ಸೆಕೆಂಡ್ ಗಳ ಪರೀಕ್ಷೆ ಎದುರಿಸಬೇಕಿದ್ದು, ಕಾರು ಅಥವಾ ಇನ್ನಿತರ ಲಘು ವಾಹನ ಚಾಲನೆ ಮಾಡುವವರು 1ರಿಂದ 5 ಹಂತದವರೆಗೆ ಪರೀಕ್ಷೆ ಎದುರಿಸಲೇಬೇಕು.

ವಾಹನಗಳಿಗೆ ವಿಮೆ ಮಾಡಿಸುತ್ತೇನೆಂದ ಈತ ಮಾಡಿದ್ದೇ ಬೇರೆ ಕೆಲಸವಾಹನಗಳಿಗೆ ವಿಮೆ ಮಾಡಿಸುತ್ತೇನೆಂದ ಈತ ಮಾಡಿದ್ದೇ ಬೇರೆ ಕೆಲಸ

 ಪ್ರತಿನಿತ್ಯ ನೂರಾರು ಅರ್ಜಿ

ಪ್ರತಿನಿತ್ಯ ನೂರಾರು ಅರ್ಜಿ

ಮೈಸೂರು ನಗರದಲ್ಲಿ ಡಿಎಲ್ ಗಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚುತ್ತಿದೆ. ಮೈಸೂರು ನಗರ ವ್ಯಾಪ್ತಿಯಲ್ಲಿರುವ ಎರಡು ಆರ್ ಟಿಒ ಕೇಂದ್ರಗಳ ಪೈಕಿ ಪೂರ್ವ ವಿಭಾಗದ ಆರ್ ಟಿಒ ಕೇಂದ್ರದಲ್ಲಿ ಡಿಎಲ್ ಗಾಗಿ ಪ್ರತಿನಿತ್ಯ 60-80 ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಪ್ರಧಾನ ಆರ್ ಟಿಒ ಕಚೇರಿಯಲ್ಲಿ ಅಂದಾಜು 120-150 ಅರ್ಜಿಗಳು ಸಲ್ಲಿಕೆಯಾಗಲಿವೆ ಎಂದು ಮಾಹಿತಿ ನೀಡುತ್ತಾರೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು. ಡಿಎಲ್ ಪಡೆಯಬಯಸುವವರು ವಿದ್ಯುನ್ಮಾನ ಚಾಲನಾ ಪರೀಕ್ಷಾ ಪಥದಲ್ಲಿ ಕಠಿಣ ಪರೀಕ್ಷೆಯನ್ನು ಎದುರಿಸಿ ಅದರಲ್ಲಿ ಪಾಸ್ ಆದರೆ ಮಾತ್ರ ಡಿಎಲ್ ದೊರೆಯಲಿದೆ ಎನ್ನುತ್ತಾರೆ ಪೂರ್ವ ವಿಭಾಗದ ಆರ್ ಟಿಒ ಅಧಿಕಾರಿ ಸೈಫುದ್ದಿನ್.

English summary
Getting a driving license in Mysuru is no longer easy now. The automated electronic driving test center in the city will start its function soon,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X