• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗಗನಯಾನಿಗಳಿಗೆ ಮೈಸೂರಲ್ಲಿ ಅಡುಗೆ ತಯಾರಿ: ಏನೇನಿರಲಿದೆ ಮೆನು?

|

ಮೈಸೂರು, ಜನವರಿ 7: ಇಡ್ಲಿ-ಸಾಂಬಾರ್, ಉಪ್ಪಿಟ್ಟು, ತೆಂಗಿನಕಾಯಿ ಚಟ್ನಿ, ಎಗ್ ರೋಲ್ಸ್, ವೆಜ್ ರೋಲ್ಸ್, ವೆಜ್ ಪುಲಾವ್, ಹೆಸರುಬೇಳೆ ಹಲ್ವಾ... ಬಾಯಲ್ಲಿ ನೀರೂರಿಸುವ ಬಗೆಬಗೆಯ ಖಾದ್ಯಗಳ ಮೆನು ಸಿದ್ಧವಾಗಿದೆ. ಅಂದಹಾಗೆ ಈ ಮೆನು ನಮಗೆ, ನಿಮಗಲ್ಲ. ಶೀಘ್ರದಲ್ಲಿಯೇ ಆಕಾಶಕಾಯಗಳ ಮಧ್ಯೆ 'ಹಾರಾಟ' ನಡೆಸಲಿರುವ ನಮ್ಮ ಹೆಮ್ಮೆಯ ಗಗನಯಾನಿಗಳಿಗೆ.

ತನ್ನ ಮೊದಲ ಗಗನಯಾನದ ರೋಮಾಂಚನಕಾರಿ ಗಳಿಗೆಗೆ ಇಸ್ರೋ ಸಿದ್ಧತೆ ನಡೆಸಿದೆ. ಭಾರತದ ಪ್ರಥಮ ಮಾನವ ಸಹಿತ ಗಗನಯಾನ ಇದೇ ವರ್ಷ ನಡೆಯಲಿದೆ. ಅದಕ್ಕಾಗಿ ಆಯ್ದ ನಾಲ್ವರು ಗಗನಯಾನಿಗಳು ರಷ್ಯಾದಲ್ಲಿ ತರಬೇತಿ ಪಡೆದುಕೊಳ್ಳಲಿದ್ದಾರೆ. ಗಗನಯಾನಕ್ಕೆ ಹೋಗುವ ವಿಜ್ಞಾನಿಗಳು ಊಟ ಏನು ಮಾಡುತ್ತಾರೆ? ಅದನ್ನು ತಯಾರಿಸುವವರು ಯಾರು? ಮುಂತಾದ ಸಂದೇಹಗಳಿಗೆ ಉತ್ತರ ಇಲ್ಲಿದೆ.

2020ರಲ್ಲಿ ಮತ್ತಷ್ಟು ಸಾಧನೆ ಮಾಡಲಿದೆ ಇಸ್ರೋ: ಒಂದಲ್ಲಾ ಎರಡಲ್ಲಾ, 25 ಯೋಜನೆಗಳು!

ಗಗನಯಾನಿಗಳಿಗೆ ಅಪ್ಪಟ ದೇಶಿ ಪ್ರಕಾರದ ಅಡುಗೆಯನ್ನೇ ನೀಡಲಾಗುತ್ತದೆ. ಗಗನಯಾನಕ್ಕೆ ತೆರಳುವವರ ಆರೋಗ್ಯವು ಉತ್ತಮವಾಗಿರುವಂತೆ ನೋಡಿಕೊಳ್ಳಲು ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅದರ ಪ್ಯಾಕೇಟ್ ಗುಣಮಟ್ಟಕ್ಕೂ ಗಮನ ಹರಿಸಲಾಗಿದೆ. ಬಾಹ್ಯಾಕಾಶದಲ್ಲಿ ಸೇವನೆಗೆ ಯೋಗ್ಯವಾಗಿರುವ ರೀತಿಯಲ್ಲಿ ಪದಾರ್ಥಗಳನ್ನು ಬಳಸಿ ಆಹಾರ ಸಿದ್ಧಪಡಿಸಲಾಗುತ್ತಿದೆ.

ಗಗನಯಾನಿಗಳಿಗೆ ತರಹೇವಾರಿ ಖಾದ್ಯ

ಗಗನಯಾನಿಗಳಿಗೆ ತರಹೇವಾರಿ ಖಾದ್ಯ

ಮೈಸೂರಿನಲ್ಲಿರುವ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್‌ಆರ್ಎಲ್) ಗಗನಯಾನಿಗಳಿಗಾಗಿ ಆಹಾರ ಪದಾರ್ಥಗಳು ಮತ್ತು ಆಹಾರ ಹೀಟರ್‌ಗಳನ್ನು ಸಿದ್ಧಪಡಿಸುತ್ತಿದೆ.

ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯವು ಎಗ್ ರೋಲ್ಸ್, ವೆಜ್ ರೋಲ್ಸ್, ಇಡ್ಲಿ, ವೆಜ್ ಪುಲಾವ್, ಇಡ್ಲಿ, ಹೆಸರುಬೇಳೆ ಹಲ್ವಾ, ತೆಂಗಿನ ಕಾಯಿ ಚಟ್ನಿ ಸೇರಿದಂತೆ ಬಗೆಬಗೆಯ ತಿನಿಸುಗಳನ್ನು ಸಿದ್ಧಪಡಿಸುತ್ತಿದೆ. ಇದರ ಜತೆಗೆ ಫುಡ್ ಹೀಟರ್‌ಗಳನ್ನು ಕೂಡ ತಯಾರಿಸುತ್ತಿದೆ.

ಜ್ಯೂಸ್ ಪ್ಯಾಕೆಟ್ ಅಭಿವೃದ್ಧಿ

ಜ್ಯೂಸ್ ಪ್ಯಾಕೆಟ್ ಅಭಿವೃದ್ಧಿ

ಗಗನಯಾನಿಗಳು ಶೂನ್ಯ ಗುರುತ್ವವಿರುವ ಬಾಹ್ಯಾಕಾಶದಲ್ಲಿ ನೀರು ಮತ್ತು ಜ್ಯೂಸ್‌ನಂತಹ ದ್ರವಗಳನ್ನು ಸೇವಿಸಲು ಅನುಕೂಲಕರವಾದ ಪ್ಯಾಕೇಟ್‌ಗಳನ್ನು ತಯಾರಿಸಲಾಗುತ್ತಿದೆ. ಇದಕ್ಕಾಗಿ ವಿಶೇಷ ಕಂಟೇನರ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಆಲ್ಕೋಹಾಲ್‌ಗೆ ಅವಕಾಶವಿಲ್ಲ. ಕಾಫಿ ಟೀ, ಅಥವಾ ಹಣ್ಣಿನ ರಸಗಳನ್ನು ನೀಡಲಾಗುತ್ತದೆ. ಈ ಪಯಣದಲ್ಲಿ ಗಗನಯಾನಿಗಳು ದೂಮಪಾನ ಸಹ ಮಾಡುವಂತಿಲ್ಲ.

ಚಂದ್ರಯಾನದ ಬಳಿಕ ಇಸ್ರೋದ ಮುಂದಿನ ಯೋಜನೆ ಗಗನಯಾನ

ನಾಲ್ವರು ಗಗನಯಾನಿಗಳು

ನಾಲ್ವರು ಗಗನಯಾನಿಗಳು

ಸಸ್ಯಹಾರ ಮಾತ್ರವಲ್ಲದೆ, ಚಿಕನ್ ಕರ್ರಿ ಸಹ ಬಾಹ್ಯಾಕಾಶದಲ್ಲಿ ಲಭ್ಯ. ಚಪಾತಿ, ದಾಲ್, ಸೂಜಿ ಹಲ್ವಾ, ಆಲೂ ಪರಾಟ, ಒಣ ಹಣ್ಣುಗಳು ಹೀಗೆ ಸುಮಾರು 60 ಕೆ.ಜಿ ತೂಕದಷ್ಟು ಆಹಾರ ರವಾನಿಸಲಾಗುತ್ತದೆ.

ಗಗನಯಾನಕ್ಕೆ ತೆರಳುವ ನಾಲ್ವರು ಗಗನಯಾನಿಗಳನ್ನು ಅಂತಿಮಗೊಳಿಸಲಾಗಿದೆ. ಅವರಿಗೆ ಜನವರಿ ಮೂರನೇ ವಾರದಿಂದ ರಷ್ಯಾದಲ್ಲಿ ತರಬೇತಿ ನೀಡಲಾಗುತ್ತದೆ. ಮಾನವಸಹಿತ ಬಾಹ್ಯಾಕಾಶ ನೌಕೆಯು ಕೆಳಗಿನ ಭೂ ಕಕ್ಷೆಯಲ್ಲಿ 5-7 ದಿನ ಓಡಾಡಲಿದ್ದಾರೆ.

2020ರಲ್ಲಿ ಮತ್ತೆ ಚಂದ್ರನತ್ತ ಇಸ್ರೋ ಪಯಣ

ಉಪಗ್ರಹ ಸಂವಹನಕ್ಕೆ ಹೊಸ ವ್ಯವಸ್ಥೆ

ಉಪಗ್ರಹ ಸಂವಹನಕ್ಕೆ ಹೊಸ ವ್ಯವಸ್ಥೆ

ಇದೇ ವರ್ಷ ಇಸ್ರೋ ಬಾಹ್ಯಾಕಾಶದಲ್ಲಿನ ತನ್ನ ಸಾಧನಗಳನ್ನು ಟ್ರ್ಯಾಕ್ ಮಾಡುವ ಮತ್ತು ಅವುಗಳೊಂದಿಗೆ ಸಂವಹನ ನಡೆಸುವ 'ಇಂಡಿಯನ್ ಡೇಟಾ ರಿಲೇ ಸ್ಯಾಟಲೈಟ್ ಸಿಸ್ಟಮ್'ಅನ್ನು ಸ್ಥಾಪಿಸಲಿದೆ. ಐಡಿಆರ್‌ಎಸ್ಎಸ್ ಭಾರತೀಯ ಉಪಗ್ರಹಗಳನ್ನು, ಮುಖ್ಯವಾಗಿ ಭೂಮಿಯ ಸರ್ವೇಕ್ಷಣೆಯ ಮಿತಿ ಹೊಂದಿರುವ ಕೆಳ ಭೂ ಕಕ್ಷೆಯಲ್ಲಿನ ಉಪಗ್ರಹಗಳನ್ನು ಟ್ರ್ಯಾಕ್ ಮಾಡಲು ಮತ್ತು ಅವುಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು ನೆರವಾಗಲಿದೆ. ಈ ತಂತ್ರಜ್ಞಾನದಿಂದ ಗಗನಯಾನಿಗಳು ಭೂಮಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಲು ಸಾಧ್ಯವಾಗಲಿದೆ.

English summary
Defence Food Research Laboratory in Mysuru have been preparing food items for the astronauts of ISRO's Gaganyaan mission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X