ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಸಹಿಷ್ಣುತೆ ಎಲ್ಲಾ ಧರ್ಮದಲ್ಲೂ ಇದೆ: ಪೇಜಾವರ ಶ್ರೀ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್, 15: ಮೊದಲು ದೇಶದಲ್ಲಿ ನಡೆಯುತ್ತಿರುವ ಮತಾಂತರಗಳು ನಿಲ್ಲಬೇಕು. ಈ ದಿಕ್ಕಿನಲ್ಲಿ ಯುವ ಸಮುದಾಯ ಕಾರ್ಯೋನ್ಮುಖ ಆಗಬೇಕು ಎಂದು ಉಡುಪಿ ಕೃಷ್ಣ ಮಠದ ಶ್ರೀ ಪೇಜಾವರ ವಿಶ್ವೇಶ್ವರತೀರ್ಥ ಸ್ವಾಮೀಜಿಗಳು ಅಭಿಪ್ರಾಯಪಟ್ಟರು.

ಉಡುಪಿಯ ಪರ್ಯಾಯ ಪೀಠ ಅಲಂಕರಿಸುವ ಮುನ್ನ ನಂಜನಗೂಡು ಪಟ್ಟಣದ ಶ್ರೀ ಕೃಷ್ಣಧಾಮ, ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳವರ ಮೂಲ ಮಠಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಪೇಜಾವರ ಶ್ರೀಗಳು, 'ಅಸಹಿಷ್ಣುತೆ ಎಂಬುದು ಕೇವಲ ಹಿಂದೂ ಧರ್ಮದಲ್ಲಿ ಮಾತ್ರವಲ್ಲ ಮುಸ್ಲಿಂ ಧರ್ಮ ಸೇರಿದಂತೆ ಇತರ ಎಲ್ಲಾ ಧರ್ಮಗಳಲ್ಲಿಯೂ ಇದೆ' ಎಂದು ಹೇಳಿದರು.[ಪೇಜಾವರ ಶ್ರೀಗಳಿಗೆ 'ನಿನ್ನ ತಿಥಿ ದಿನವೇ ಬಾಬ್ರಿ ಮಸೀದಿ ಕಟ್ತೇವೆ' ಅಂದವರ್ಯಾರು?]

Intolerance have in all religions told by Udupi Pejawar seer in Mysuru

ಇತ್ತೀಚಿನ ದಿನಗಳಲ್ಲಿ ನಹು ಚರ್ಚೆಗೆ ಬಂದಿರುವ ಅಸಹಿಷ್ಣತೆಯು ಹಿಂದಿನಿಂದಲೂ ನಡೆದು ಬಂದಿದೆ. ಆದರೆ ಅದಕ್ಕೆ ಇತ್ತೀಚಿಗೆ ಹೆಚ್ಚಾಗಿ ಪ್ರಚಾರ ನೀಡಲಾಗುತ್ತಿದೆ. ಇಂದು ಧರ್ಮವನ್ನು ಉಳಿಸಿ ಬೆಳೆಸುವ ಸಂಕಲ್ಪವನ್ನು ಪ್ರತಿಯೊಬ್ಬ ಭಾರತೀಯರು ಮಾಡಬೇಕು. ಸಹಬಾಳ್ವೆಯಿಂದ ದೇಶದ ಅಭಿವೃದ್ದಿ ಸಾಧ್ಯ ಎಂದರು.['ಅಸಹಿಷ್ಣುತೆ'ಗೆ ಭಾರತೀಯ ಮುಸ್ಲಿಂ ಮಹಿಳೆ ಹಿಡಿದ ಕನ್ನಡಿ]

ಈ ಸಂದರ್ಭದಲ್ಲಿ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಮಠದ ವ್ಯವಸ್ಥಾಪಕ ರಾಜ ಸುಧೀಂದ್ರಚಾರ್. ಪಂಡಿತ ಸುಧಾಕರ್, ಧರ್ಮಾಧಿಕಾರಿ ರಾಜ ವ್ಯಾಸರಾಜಚಾರ್, ಶಂಕರ ಮಠದ ಆಡಳಿತ ಮಠದ ಧರ್ಮಾಧಿಕಾರಿ ಶ್ರೀಕಂಠ ಜೋಯಿಸ್ಸು, ಜಯರಾಮಚಾರ್, ಭಾರಧ್ವಾಜ್ ಚಾರ್, ಸುಬ್ಬಲಕ್ಮೀ ಹಾಗೂ ಶ್ರೀ ಕೃಷ್ಣಧಾಮದ ಗುರುರಾಜಧರ್ಮ, ಶಿಲ್ಪಗುರುಪ್ರಸಾದ್. ಸಿಬ್ಬಂದಿವರ್ಗ ಶ್ರೀ ಮಠದ ಅಂತರಂಗ ಭಕ್ತರು ಹಾಜರಿದ್ದರು.

English summary
Intolerance have in all religions told by Udupi Pejawar seer in Mysuru, on Tuesday, December 15th
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X