ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುತೂಹಲ ಕೆರಳಿಸಿದ ಅಮಿತ್ ಶಾ ಆದಿಚುಂಚನಗಿರಿ ಭೇಟಿ !

ಕುತೂಹಲ ಕೆರಳಿಸಿರುವ ಆದಿಚುಂಚನಗಿರಿ ಮಠಕ್ಕೆ ಅಮಿತ್ ಶಾ ಭೇಟಿ. ಒಕ್ಕಲಿಕ ಸಮುದಾಯದ ಸೌಹರ್ದತೆ ಗಿಟ್ಟಿಸಿಕೊಳ್ಳಲು ಬಿಜೆಪಿ ಪ್ರಯತ್ನ ಎಂದು ಹೇಳಲಾಗುತ್ತಿದೆ.

|
Google Oneindia Kannada News

ಮೈಸೂರು, ಆಗಸ್ಟ್ 12: ಬಿಜೆಪಿಯ ಮಾಸ್ಟರ್ ಮೈಂಡ್, ರಾಜಕೀಯ ಚಾಣಾಕ್ಷ ಎಂದೆಲ್ಲ ಕರೆಯಿಸಿಕೊಳ್ಳುತ್ತಿರುವ ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಬಿಜೆಪಿಯಲ್ಲಿ ಸಂಚಲನ ಮೂಡಿಸಿದ್ದರೆ, ಸಾರ್ವಜನಿಕ ವಲಯದಲ್ಲಿರುವ ಬಿಜೆಪಿ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.

ಚಿತ್ರಗಳು : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರ್ನಾಟಕ ಪ್ರವಾಸ

ಭಾನುವಾರ ಬೆಳಗ್ಗೆ 11.30ಕ್ಕೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿರುವ ಶ್ರೀ ಕ್ಷೇತ್ರ ಆದಿಚುಂಚನಗಿರಿ ಪೀಠದ ಕಾಲಭೈರವೇಶ್ವರನ ಸನ್ನಿಧಾನಕ್ಕೆ ಭೇಟಿ ನೀಡುವ ಅಮಿತ್ ಶಾ ನಿರ್ಮಲಾನಂದನಾಥ ಶ್ರೀಗಳಿಂದ ಆಶೀರ್ವಾದ ಪಡೆಯಲಿದ್ದಾರೆ.

Interest crated regarding the Amit Shah visit to adichunchanagiri math

ಈಗಾಗಲೇ ಪ್ರತಿ ಅಮಾವಾಸ್ಯೆಯಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ ಅವರು ಆದಿಚುಂಚನಗಿರಿಗೆ ಭೇಟಿ ನೀಡುವುದನ್ನು ಒಂದು ಸಂಪ್ರದಾಯವನ್ನಾಗಿಸಿಕೊಂಡಿದ್ದಾರೆ. ಪ್ರಮುಖ ಒಕ್ಕಲಿಗ ಮಠವಾಗಿರುವ ಆದಿಚುಂಚನಗಿರಿ ಮಠದ ಶ್ರೀಗಳು ತಮ್ಮ ಮಠಕ್ಕೆ ಬಂದ ಯಾವುದೇ ಪಕ್ಷದ ನಾಯಕನಾಗಿದ್ದರೂ ಅವರಿಗೆ ಆಶೀರ್ವಾದ ಮಾಡಿ ಕಳುಹಿಸುತ್ತಿದ್ದಾರೆ. ಅದರಲ್ಲೇನೂ ವಿಶೇಷತೆಯಿಲ್ಲ. ಆದರೆ ಮಠದ ಭೇಟಿ ಹೊರ ಪ್ರಪಂಚದಲ್ಲಿ ಅದು ಸಾರ್ವಜನಿಕ ವಲಯದಲ್ಲಿ ಮತ್ತು ರಾಜಕೀಯ ವಲಯದಲ್ಲಿ ಒಂದಷ್ಟು ಕುತೂಹಲ, ಊಹಾಪೋಹ, ವದಂತಿ ಎಲ್ಲವನ್ನೂ ಹರಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇಲ್ಲಿ ಅಮಿತ್ ಶಾ, ಅಲ್ಲಿ ರಾಹುಲ್ : ಚುನಾವಣೆ ಬಂತಪ್ಪೋ ಚುನಾವಣೆಇಲ್ಲಿ ಅಮಿತ್ ಶಾ, ಅಲ್ಲಿ ರಾಹುಲ್ : ಚುನಾವಣೆ ಬಂತಪ್ಪೋ ಚುನಾವಣೆ

ಹಾಗೆನೋಡಿದರೆ ಹಳೇ ಮೈಸೂರು ವ್ಯಾಪ್ತಿಯಲ್ಲಿ ಒಕ್ಕಲಿಗ ಸಮುದಾಯ ತನ್ನದೇ ಪ್ರಾಬಲ್ಯ ಹೊಂದಿದ ದೊಡ್ಡ ಸಮುದಾಯವಾಗಿದೆ. ಈಗಾಗಲೇ ಈ ಭಾಗದಲ್ಲಿ ಬಿಜೆಪಿಯ ಇದುವರೆಗಿನ ಸಾಧನೆಯೂ ಅಷ್ಟೊಂದಾಗಿಲ್ಲ. ಈ ವ್ಯಾಪ್ತಿಯಲ್ಲಿ ಬಿಜೆಪಿ ಗೆಲುವು ಸಾಧಿಸಬೇಕಾದರೆ ಬಹಳಷ್ಟು ಶ್ರಮವನ್ನು ವಹಿಸಲೇ ಬೇಕಾಗಿದೆ.

ಮೂರನೇ ಸ್ಥಾನದಲ್ಲಿರುವ ಬಿಜೆಪಿಯನ್ನು ಮುಂಚೂಣಿಗೆ ತರಬೇಕಾದರೆ ಎಲ್ಲ ಮಠಮಾನ್ಯಗಳಿಗೆ ತೆರಳಿ ಆ ಮೂಲಕ ಜನರಿಗೆ ಬೇರೆಯದ್ದೇ ಆದ ಸಂದೇಶ ನೀಡುವುದು ಸದ್ಯ ಅಗತ್ಯವಾಗಿ ಆಗಬೇಕಾದ ಕಾರ್ಯವಾಗಿದ್ದು ಬಹುಶಃ ಅದನ್ನು ಅಮಿತ್ ಶಾ ಮಾಡುತ್ತಿದ್ದಾರೆ ಎಂದರೂ ತಪ್ಪಾಗಲಾರದು.

'ಅಬ್ ಕೀ ಬಾರ್, ಭಾಜಪಾ ಸರ್ಕಾರ್': ಬೆಂಗಳೂರಿಗೆ ಬಂದ ಅಮಿತ್ ಶಾ ಘೋಷಣೆ'ಅಬ್ ಕೀ ಬಾರ್, ಭಾಜಪಾ ಸರ್ಕಾರ್': ಬೆಂಗಳೂರಿಗೆ ಬಂದ ಅಮಿತ್ ಶಾ ಘೋಷಣೆ

ಡಿ.ಕೆ. ಶಿವಕುಮಾರ್ ಪ್ರಭಾವಿ ಒಕ್ಕಲಿಗ ನಾಯಕರಾಗಿದ್ದು, ಅವರಿಗೂ ಈ ಮಠದೊಂದಿಗೆ ಅವಿಭಾವ ಸಂಬಂಧವಿದೆ. ಅದಲ್ಲದೆ, ಇತ್ತೀಚೆಗೆ, ಅವರ ನಿವಾಸದ ಮೇಲೆ ನಡೆದ ಐಟಿ ದಾಳಿಯಿಂದಾಗಿ, ಒಕ್ಕಲಿಗ ಸಮುದಾಯವು ಕೇಂದ್ರದಲ್ಲಿ ಬಿಜೆಪಿ ಪಕ್ಷದ ವಿರುದ್ಧ ಅಸಮಾಧಾನಗೊಂಡಿತ್ತು. ಹೀಗಾಗಿ, ಆ ಒಳಉರಿಯನ್ನು ತಣ್ಣಗಾಗಿಸುವ ನಿಟ್ಟಿನಲ್ಲಿಯೂ ಮಠಕ್ಕೆ ಅಮಿತ್ ಶಾ ಅವರ ಭೇಟಿ ಕೆಲಸ ಮಾಡಲಿದೆ ಎಂದು ಹೇಳಲಾಗಿದೆ.

ಒಕ್ಕಲಿಗ ನಾಯಕರನ್ನು ಬೆಳೆಸಬೇಕಿದೆ!
ಇನ್ನು ಬಿಜೆಪಿ ಪಕ್ಷದಲ್ಲಿ ಅಂತಹ ಹೇಳಿಕೊಳ್ಳುವ ಪ್ರಭಾವಿ ವಕ್ಕಲಿಗ ನಾಯಕರಿಲ್ಲ. ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣ, ಆರ್. ಅಶೋಕ್ ಇನ್ನು ಕೆಲವರಿದ್ದರೂ ಅವರಿಂದ ಒಕ್ಕಲಿಗರ ಮೇಲೆ ಪ್ರಾಬಲ್ಯ ಸಾಧಿಸುವುದು.

ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ ಸೇರಿದಂತೆ ಮತ್ತಿತರ ಕ್ಷೇತ್ರಗಳತ್ತ ದೃಷ್ಠಿ ನೆಟ್ಟು ನೋಡಿದರೆ ಇಲ್ಲಿ ಬಿಜೆಪಿಯದು ಆರಕ್ಕೇರದ ಮೂರಕ್ಕಿಳಿಯದ ಸಾಧನೆ. ಇದೆಲ್ಲವನ್ನು ಗಮನಿಸಿಯೇ ಅಮಿತ್ ಶಾ ಆದಿಚುಂಚನಗಿರಿ ಮಠಕ್ಕೆ ತೆರಳುತ್ತಿದ್ದು, ಅಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ನಾಳೆ(ಆ.13) ಬೆಳಿಗ್ಗೆ ಮಠಕ್ಕೆ ಭೇಟಿ ನೀಡಲಿರುವ ಅಮಿತ್ ಶಾ ಬೆಳಿಗ್ಗೆ ನಡೆಯುವ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಧರನಾಥ ಶ್ರೀಗಳ ಕುರಿತ ಸ್ಟೋರಿ ಆಫ್ ಗುರು ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ನಂತರ 1.30ರಿಂದ 2.30ರವರೆಗೆ ಶ್ರೀಗಳ ಜೊತೆ ಮಾತುಕತೆ ನಡೆಸಲಿದ್ದಾರೆ. ಈ ಮಾತುಕತೆ ಕುತೂಹಲ ಕೆರಳಿಸಿರುವುದಂತು ಸತ್ಯ.

English summary
On his three days visit BJP National President Amit Shah will pay visit to Vokkaliga's adichunchanagiri math near Mandya. This event has created interest in political sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X