ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿನ್-ಕಾರ್; 24 ಗಂಟೆ ಮೊದಲೇ ಲಸಿಕೆ ಮಾಹಿತಿ ಮೊಬೈಲ್‌ಗೆ

|
Google Oneindia Kannada News

ಮೈಸೂರು, ಜುಲೈ 30; ಕರ್ನಾಟಕ ಸರ್ಕಾರ ಹೊಸದಾಗಿ ಲಸಿಕೆ ಪಡೆಯುವವರು ಮತ್ತು 2ನೇ ಡೋಸ್ ಲಸಿಕೆ ಪಡೆಯಬೇಕಾಗಿರುವವರ ಅನುಕೂಲಾಕ್ಕಾಗಿ ಕೋವಿನ್-ಕಾರ್ ಎಂಬ ತಂತ್ರಾಶವನ್ನು ಅಭಿವೃದ್ಧಿಗೊಳಿಸಿದೆ. ಮೈಸೂರು ನಗರದಲ್ಲಿ ಇದನ್ನು ಪ್ರಾಯೋಗಿಕವಾಗಿ ಜುಲೈ 26ರಿಂದ ಜಾರಿಗೊಳಿಸಲಾಗಿದೆ.

ಲಸಿಕೆ ಪಡೆಯಬೇಕಾದ ವ್ಯಕ್ತಿಗಳು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಕರ್ನಾಟಕ ಸರ್ಕಾರ ;ಕೋವಿನ್-ಕಾರ್' ಎಂಬ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದೆ.

ಭಾರತದಲ್ಲಿ 45.52 ಕೋಟಿ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಭಾರತದಲ್ಲಿ 45.52 ಕೋಟಿ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ

ಮೈಸೂರು ನಗರದಲ್ಲಿ ಪ್ರಾಯೋಗಿಕವಾಗಿಕವಾಗಿ ಈ ಯೋಜನೆ ಆರಂಬಿಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಬೇರೆ ಜಿಲ್ಲೆಗಳಿಗೂ ಈ ಯೋಜನೆ ವಿಸ್ತರಣೆಯಾಗಲಿದೆ.

 ವಿದೇಶಗಳಿಗೆ ಇದುವರೆಗೂ 6.4 ಕೋಟಿ ಲಸಿಕೆ ರವಾನೆ: ಕೇಂದ್ರ ವಿದೇಶಗಳಿಗೆ ಇದುವರೆಗೂ 6.4 ಕೋಟಿ ಲಸಿಕೆ ರವಾನೆ: ಕೇಂದ್ರ

Instead Of Waiting In Long Queues Register In Cowin Kar For Covid Vaccine

24 ಗಂಟೆ ಮೊದಲೇ ಮಾಹಿತಿ; ಲಸಿಕೆ ಬಗ್ಗೆ ಮಾಹಿತಿ ಪಡೆಯಲು ಜನರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕೋವಿನ್ ತಂತ್ರಾಶ ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವ cowin.karnataka.gov.in ಹಾಗೂ ಮೈಸೂರು ಜಿಲ್ಲಾಡಳಿತ ವೆಬ್‌ಸೈಟ್ ಮೂಲಕವೂ ಸ್ವಯಂ ಪ್ರೇರಿತವಾಗಿ ಹೆಸರು ದಾಖಲಿಸಿಕೊಳ್ಳಬಹುದು.

 ರಾಜ್ಯದ ಎಲ್ಲರಿಗೂ ಯಾವ ಕಾಲಮಿತಿಯಲ್ಲಿ ಕೊರೊನಾ ಲಸಿಕೆ ನೀಡುತ್ತೀರಿ: ಹೈಕೋರ್ಟ್ ಪ್ರಶ್ನೆ ರಾಜ್ಯದ ಎಲ್ಲರಿಗೂ ಯಾವ ಕಾಲಮಿತಿಯಲ್ಲಿ ಕೊರೊನಾ ಲಸಿಕೆ ನೀಡುತ್ತೀರಿ: ಹೈಕೋರ್ಟ್ ಪ್ರಶ್ನೆ

ನೋಂದಣಿ ಮಾಡಿಕೊಂಡ ವ್ಯಕ್ತಿಗೆ ಲಸಿಕೆಯ ಲಭ್ಯತೆ ಆಧರಿಸಿ ಲಸಿಕಾ ದಿನ, ಸರ್ಕಾರಿ ಆರೋಗ್ಯ ಕೇಂದ್ರದ ಹೆಸರು ಮತ್ತು ಸಮಯದ ಬಗ್ಗೆ 24 ಗಂಟೆಗಳ ಮೊದಲು ನೋಂದಣಿ ವೇಳೆ ನೀಡಿರುವ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಬರಲಿದೆ.

ಬದಲಾವಣೆಗೆ ಅವಕಾಶವಿದೆ; ಲಸಿಕೆ ಪಡೆಯಬೇಕಾದ ಫಲಾನುಭವಿಗಳು ಆದ್ಯತೆ ಮೇರೆಗೆ ಲಸಿಕೆ ಮತ್ತು ನಿಗದಿತ ದಿನಾಂಕವನ್ನು ಆಯ್ಕೆ ಮಾಡುವ ಸ್ವಾತಂತ್ರ‍್ಯ ಹೊಂದಿರುತ್ತಾರೆ. ತಮ್ಮ ಲಸಿಕೆ ದಿನವನ್ನು ಒಂದು ಬಾರಿ ಬದಲಾವಣೆ ಮಾಡಿಕೊಳ್ಳಲು ಸಹ ಅವಕಾಶವನ್ನು ಈ ತಂತ್ರಾಂಶದ ಮೂಲಕ ನೀಡಲಾಗಿದೆ.

ಜನರು ಮೊದಲ ಡೋಸ್ ಲಸಿಕೆಗೆ ಹಾಗೂ ಮೊದಲನೇ ಡೋಸ್ ಪಡೆದವರು ಎರಡನೇ ಡೋಸ್ ಲಸಿಕೆಗೆ 'ಕೋವಿನ್-ಕಾರ್' ತಂತ್ರಾಂಶದಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.

English summary
Instead of waiting in long queues at the vaccination centers people can register on Cowin-Kar application. You will get SMS about allocated slot at a nearby center on priority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X