ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸ್ ಠಾಣೆಯಲ್ಲಿ ಗ್ರಂಥಾಲಯ ತೆರೆದ ಮೈಸೂರಿನ ಇನ್ಸ್‌ಪೆಕ್ಟರ್!

|
Google Oneindia Kannada News

ಮೈಸೂರು, ಅಕ್ಟೋಬರ್ 25; ಪೊಲೀಸರೆಂದರೆ ಶಿಸ್ತಿನ ವ್ಯಕ್ತಿಗಳು. ಸದಾ ಹೊಡಿ ಬಡಿ ಗುಂಗಿನಲ್ಲೇ ಇರುತ್ತಾರೆ. ಕೋಪ ಜಾಸ್ತಿ ಎಂಬ ಭಾವನೆ ಬಹುತೇಕರ ಮನಸ್ಸಿನಲ್ಲಿ ಇದೆ. ಆದರೆ ಇಲ್ಲೊಬ್ಬ ಇನ್ಸ್‌ಪೆಕ್ಟರ್ ತಮ್ಮ ಪೊಲೀಸ್ ಠಾಣೆಯಲ್ಲಿ ಗ್ರಂಥಾಲಯ ತೆರೆದು ಪುಸ್ತಕ ಪ್ರೀತಿಗೆ ನಾಂದಿ ಹಾಡಿದ್ದಾರೆ.

ಹೌದು! ಅಂದಹಾಗೆ ಇವರು ಹೆಸರು ಆರ್. ವೆಂಕಟೇಶ್. ಸದ್ಯ ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸ್ವಭಾವತಃ ಪುಸ್ತಕ ಪ್ರೇಮಿಯಾದ ವೆಂಕಟೇಶ್ ಕುವೆಂಪು, ತೇಜಸ್ವಿ, ಸ್ವಾಮಿ ವಿವೇಕಾನಂದ ಸೇರಿದಂತೆ ಹಲವು ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ.

ರಾಜ್ಯ ಪಠ್ಯ ಪುಸ್ತಕ ಸೊಸೈಟಿಯ ಮಹಾ ಎಡವಟ್ಟಿನಿಂದ ವಿದ್ಯಾರ್ಥಿಗಳ ಓದಿಗೆ ತೊಂದರೆ! ರಾಜ್ಯ ಪಠ್ಯ ಪುಸ್ತಕ ಸೊಸೈಟಿಯ ಮಹಾ ಎಡವಟ್ಟಿನಿಂದ ವಿದ್ಯಾರ್ಥಿಗಳ ಓದಿಗೆ ತೊಂದರೆ!

ಆದರೆ ಮೊಬೈಲ್ ಬಂದ ಮೇಲೆ ಪುಸ್ತಕ ಓದುವ ಅಭಿರುಚಿ ಕಡಿಮೆ ಆಗುತ್ತಿದೆ ಎಂಬುದನ್ನು ಮನಗಂಡ ಅವರು ತಮ್ಮ ಠಾಣೆಯಲ್ಲೇ ಸಣ್ಣ ಗ್ರಂಥಾಲಯ ತೆರೆದು ಜನಮೆಚ್ಚುಗೆ ಪಡೆದಿದ್ದಾರೆ. ಸಂದರ್ಶಕರ ಕೊಠಡಿಯಲ್ಲಿ ಈ ಪುಟ್ಟ ಗ್ರಂಥಾಲಯ ತೆರೆದಿದ್ದಾರೆ.

 ಲಾಕ್‌ಡೌನ್ ಅನುಭವದ ಪುಸ್ತಕ ಬರೆದು ಮೆಚ್ಚುಗೆ ಪಡೆದ ಬೆಂಗಳೂರಿನ ಬಾಲಕಿ ಲಾಕ್‌ಡೌನ್ ಅನುಭವದ ಪುಸ್ತಕ ಬರೆದು ಮೆಚ್ಚುಗೆ ಪಡೆದ ಬೆಂಗಳೂರಿನ ಬಾಲಕಿ

ಈ ಗ್ರಂಥಾಲಯದಲ್ಲಿ 300ಕ್ಕೂ ಹೆಚ್ಚು ಪುಸ್ತಕಗಳಿವೆ. ಠಾಣೆಗೆ ಆಗಮಿಸುವ ಸಂದರ್ಶಕರು ತಮಗಿಷ್ಟ ಬಂದ ಪುಸ್ತಕಗಳನ್ನು ಓದಿ ಇಡಬಹುದು. ನಿವೃತ್ತ ಗ್ರಂಥಪಾಲಕ ಗೋಪಾಲ್ ಕೃಷ್ಣ ಈಗಾಗಲೇ ಗ್ರಂಥಾಲಯಕ್ಕೆ ಕೆಲವು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ವಿಶಿಷ್ಟ ಅನುಭವಗಳ ಮೂಟೆ ಹುಣ್ಸ್ ಮಕ್ಕಿ ಹುಳ ಪುಸ್ತಕ ಲೋಕಾರ್ಪಣೆ ವಿಶಿಷ್ಟ ಅನುಭವಗಳ ಮೂಟೆ ಹುಣ್ಸ್ ಮಕ್ಕಿ ಹುಳ ಪುಸ್ತಕ ಲೋಕಾರ್ಪಣೆ

ಪುಸ್ತಕ ಪ್ರೇಮ ಬೆಳೆಸುವ ಉದ್ದೇಶ

ಪುಸ್ತಕ ಪ್ರೇಮ ಬೆಳೆಸುವ ಉದ್ದೇಶ

ಸಾಮಾನ್ಯವಾಗಿ ಮೊಬೈಲ್ ಬಂದ ಮೇಲೆ ಜನ ಪುಸ್ತಕ ಓದುವುದನ್ನು ಹಾಗೂ ಬರೆಯುವ ಅಭ್ಯಾಸವನ್ನೇ ಮರೆತಿದ್ದಾರೆ. ಮನರಂಜನೆಯಿಂದ ಹಿಡಿದು ಕ್ಯಾಶ್ ಪೇ ವರೆಗೂ ಮೊಬೈಲ್ ಎಲ್ಲರ ಸಂಗಾತಿಯಾಗಿದೆ. ಇದರಿಂದ ಪುಸ್ತಕ ಓದುವವರ ಸಂಖ್ಯೆಯೇ ಕ್ಷೀಣಿಸಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ಸಿಬ್ಬಂದಿಗಳಲ್ಲಿ ಪುಸ್ತಕ ಪ್ರೇಮ ಬಿತ್ತಬೇಕೆಂಬ ಉದ್ದೇಶದಿಂದ ವೆಂಕಟೇಶ್ ಠಾಣೆಯಲ್ಲೇ ಗ್ರಂಥಾಲಯ ತೆರೆದಿದ್ದಾರೆ. ಕೆಲವು ತಿಂಗಳ ಹಿಂದೆ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲೂ ಇವರು ಕೆಲಸ ಮಾಡಿದ್ದರು. ಆಗಲೂ ಅಲ್ಲಿ ಇದೇ ರೀತಿಯ ಗ್ರಂಥಾಲಯವನ್ನು ಆರಂಭಿಸಿದ್ದರು.

ಗ್ರಂಥಾಲಯದಲ್ಲಿ ಏನಿದೆ?

ಗ್ರಂಥಾಲಯದಲ್ಲಿ ಏನಿದೆ?

ಪೊಲೀಸ್ ಠಾಣೆಯ ಸಂದರ್ಶಕರ ಕೊಠಡಿಯಲ್ಲಿರುವ ಇದೊಂದು ಪುಟ್ಟ ಗ್ರಂಥಾಲಯ. 300ಕ್ಕೂ ಹೆಚ್ಚು ಪುಸ್ತಕಗಳನ್ನು ಕಪಾಟಿನಲ್ಲಿ ಇಡಲಾಗಿದೆ. ಸಂದರ್ಶಕರು ತಮಗಿಷ್ಟ ಬಂದ ಪುಸ್ತಕ ಓದಿ ಇಡಬಹುದು. ಯೋಗ, ಆರೋಗ್ಯ, ಧ್ಯಾನ, ಪ್ರಾಣಾಯಾಮ, ಜೀವನಶೈಲಿ, ಸ್ವಾತಂತ್ರ್ಯ ಹೋರಾಟಗಾರರ ಜೀವನ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪುಸ್ತಕಗಳನ್ನು ಇಡಲಾಗಿದೆ.

ಠಾಣೆಗೆ ಸಂದರ್ಶಕರು ಬಂದಾಗ ಇನ್ಸಪೆಕ್ಟರ್ ಮತ್ತೊಬ್ಬರೊಂದಿಗೆ ಮಾತನಾಡುತ್ತಿದ್ದರೆ ಇವರು ಸೀದಾ ಗ್ರಂಥಾಲಯಕ್ಕೆ ಹೋಗಿ ಪುಸ್ತಕ ಓದುತ್ತಾರೆ. ಠಾಣೆಯ ಸಿಬ್ಬಂದಿ ಕೂಡ ಮನೆಗೆ ಪುಸ್ತಕ ತೆಗೆದುಕೊಂಡು ಹೋಗಿ ಪುಸ್ತಕ ಅಧ್ಯಯನ ಮಾಡುತ್ತಾರೆ. ಅಲ್ಲದೆ, ಕಾನ್ಸ್‌ಟೇಬಲ್ ಹಾಗೂ ಹೆಡ್ ಕಾನ್ಸ್‌ಟೇಬಲ್‌ಗಳು ಶಿಫ್ಟ್ ನಲ್ಲಿ ಕೆಲಸ ಮಾಡುವುದರಿಂದ ಶಿಫ್ಟ್ ಇಲ್ಲದೆ ಬಿಡುವಿದ್ದಾಗ ಕೆಲವರು ಪುಸ್ತಕ ಅಧ್ಯಯನ ಮಾಡುವುದೂ ಉಂಟು.
ಕಾಲಹರಣ ಮಾಡುವ ಬದಲು ಓದು

ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ

ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ

ಮೊಬೈಲ್‌ನಲ್ಲಿ ಕಾಲಹರಣ ಮಾಡುವ ಬದಲು ಪುಸ್ತಕ ಓದಲಿ ಎಂಬ ಉದ್ದೇಶದಿಂದ ಇನ್ಸ್‌ಪೆಕ್ಟರ್ ವೆಂಕಟೇಶ್ ಗ್ರಂಥಾಲಯ ತೆರೆದಿದ್ದಾರೆ. ನಿವೃತ್ತ ಗ್ರಂಥಪಾಲಕ ಗೋಪಾಲ್ ಕೃಷ್ಣ ಈಗಾಗಲೇ ಗ್ರಂಥಾಲಯಕ್ಕೆ ಕೆಲವು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

"ನಿತ್ಯ ನಾವು ಎಲ್ಲಿ ಹೆಚ್ಚು ಸಮಯ ಕಳೆಯುತ್ತೇವೋ ಅಲ್ಲೇ ಸುಂದರ ವಾತಾವರಣ ನಿರ್ಮಾಣ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಸಣ್ಣ ಗ್ರಂಥಾಲಯ ಆರಂಭಿಸಿರುವುದು ಸಂತೋಷದ ಸಂಗತಿ. ಇದರಿಂದ ಠಾಣೆಯ ಸಿಬ್ಬಂದಿಗೂ ಹಾಗೂ ಸಂದರ್ಶಕರಿಗೂ ಒಳ್ಳೆಯ ಸಂದೇಶ ಸಿಗುತ್ತದೆ" ಎಂದು ನಗರ ಪೊಲೀಸ್ ಆಯುಕ್ತ. ಡಾ. ಚಂದ್ರಗುಪ್ತ ಸಂತಸ ವ್ಯಕ್ತಪಡಿಸಿದ್ದಾರೆ.

ಸಂದರ್ಶಕರು ಪುಸ್ತಕ ಓದಲಿ

ಸಂದರ್ಶಕರು ಪುಸ್ತಕ ಓದಲಿ

"ಪೊಲೀಸರಿಗೂ ನೂರಾರು ಒತ್ತಡಗಳಿರುತ್ತವೆ. ಹೀಗಿದ್ದಾಗ ಎಲ್ಲರೂ ಮೊಬೈಲ್ ಮೊರೆ ಹೋಗುತ್ತಾರೆ. ಆದರೆ ಇದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಹೆಚ್ಚಿನ ಮೊಬೈಲ್ ಬಳಕೆ ಕಣ್ಣಿನಿಂದ ಹಿಡಿದು ಆರೋಗ್ಯಕ್ಕೂ ಹಾನಿಕಾರಕ. ಅಲ್ಲದೆ, ಠಾಣೆಗೆ ಯಾರಾದರೂ ಬಂದರೆ ಎಲ್ಲರನ್ನೂ ಒಟ್ಟಿಗೆ ಮಾತನಾಡಿಸಲು ಆಗುವುದಿಲ್ಲ. ಈ ಸಮಯದಲ್ಲಿ ಸಂದರ್ಶಕರು ಪುಸ್ತಕ ಓದಲಿ ಎಂಬ ಆಶಯದೊಂದಿಗೆ ಒಂದು ಕಪಾಟಿನಲ್ಲಿ ಒಂದಷ್ಟು ಪುಸ್ತಕಗಳನ್ನು ಇಡಲಾಗಿದೆ. ಮಹನೀಯರ ಸಂದೇಶ ಇರುವ ಸೂಕ್ತಿಗಳನ್ನೂ ಅಂಟಿಸಲಾಗಿದೆ" ಎಂದು ಇನ್ಸ್‌ಪೆಕ್ಟರ್ ವೆಂಕಟೇಶ್ ಹೇಳಿದ್ದಾರೆ.

English summary
Mysuru VV Puram police station inspector R. Venkatesh set up library in police station. Around 300 books available in small library.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X