• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನ ಬೀಚನಹಳ್ಳಿಯಲ್ಲಿ ದಾನ ಶಿಲಾ ಶಾಸನ ಪತ್ತೆ

|

ಮೈಸೂರು, ಜುಲೈ 23: ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜಮೀನು, ಕಾಡು, ದೇವಸ್ಥಾನ ಮೊದಲಾದ ಕಡೆಗಳಲ್ಲಿ ಅಲ್ಲಲ್ಲಿ ಬೃಹದಾಕಾರದ ಕಲ್ಲುಗಳು ಕಾಣಸಿಗುತ್ತವೆ. ಈ ಪೈಕಿ ಕೆಲವು ಕಲ್ಲುಗಳು ಹಲವು ಶತಮಾನಗಳ ಹಿಂದಿನ ಶಿಲಾ ಶಾಸನಗಳು ಎಂಬುದು ಬಹಳಷ್ಟು ಜನಕ್ಕೆ ಗೊತ್ತಾಗುವುದೇ ಇಲ್ಲ. ಹೀಗಾಗಿ ಅವುಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ.

   Oneplus Nord , ಕೈಗೆಟಕುವ ಬೆಲೆಯಲ್ಲಿ ಬೆಸ್ಟ್ ಫೋನ್ | Oneindia Kannada

   ಇಂತಹ ಬೃಹತ್ ಕಲ್ಲುಗಳನ್ನು ಹುಡುಕಿ ಅವು ಸಾಮಾನ್ಯ ಕಲ್ಲುಗಳಲ್ಲ, ಇತಿಹಾಸವನ್ನು ಸಾರುವ ಶಿಲಾ ಶಾಸನಗಳು ಎಂಬುದನ್ನು ಈಗಾಗಲೇ ಇತಿಹಾಸ ಸಹಪ್ರಾಧ್ಯಾಪಕರಾದ ಡಾ.ಎಸ್.ಜಿ.ರಾಮದಾಸ ರೆಡ್ಡಿ ಅವರು ಸಂಶೋಧಿಸಿ ಜನಕ್ಕೆ ತೋರಿಸಿಕೊಡುವ ಮೂಲಕ ಸಂರಕ್ಷಣೆ ಮಾಡಿದ್ದಾರೆ. ಈ ನಡುವೆ ಜಿಲ್ಲೆಯ ಕೆ.ಆರ್.ನಗರ ತಾಲೂಕು, ಮಿರ್ಲೆ ಹೋಬಳಿ, ಬೀಚನಹಳ್ಳಿ ಗ್ರಾಮದ ಮಲ್ಲೇಶ್ವರ ದೇವಾಲಯದ ಹಿಂಭಾಗದಲ್ಲಿ ಭೂಮಿಯಲ್ಲಿ ಹೂತು ಹೋಗಿ ಸ್ವಲ್ಪ ಭಾಗವಷ್ಟೆ ಕಾಣುತ್ತಿದ್ದ ಶಿಲಾಶಾಸನವನ್ನು ಪತ್ತೆ ಹಚ್ಚಲಾಗಿದೆ. ಶಿಲಾ ಶಾಸನದ ಬಳಿಯೇ ದೇವಾಲಯವಿದ್ದು, ಈ ದೇವಾಲಯವನ್ನು ಗ್ರಾಮಸ್ಥರು ಕೊಳ್ಳಿಮಲ್ಲೇಶ್ಪರ ಎಂದು ಕರೆಯುತ್ತಾರೆ.

    ಡಾ.ಎಸ್.ಜಿ.ರಾಮದಾಸರೆಡ್ಡಿ ಸಂಶೋಧನೆ

   ಡಾ.ಎಸ್.ಜಿ.ರಾಮದಾಸರೆಡ್ಡಿ ಸಂಶೋಧನೆ

   ದೇವಾಲಯದ ಬಳಿ ಇದೀಗ ದೊರೆತಿರುವ ಶಿಲಾ ಶಾಸನದ ಶೋಧನೆಯನ್ನು ಮೈಸೂರಿನ ಕುವೆಂಪು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರು ಹಾಗೂ ಸಹಪ್ರಾಧ್ಯಾಪಕರಾದ ಡಾ.ಎಸ್.ಜಿ.ರಾಮದಾಸರೆಡ್ಡಿ ಅವರು ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಎಂ.ಕೆ.ಮೃತ್ಯುಂಜಯ, ಉಪನ್ಯಾಸಕರಾದ ಚರಣ್ ಕುಮಾರ್ ಹಾಗೂ ಗ್ರಾಮದ ನಿವೃತ್ತ ಶಿಕ್ಷಕರಾದ ಬಿ.ಟಿ.ರಾಜಪ್ಪ, ಶಿವಣ್ಣ, ನಾಗೇಂದ್ರ ಹಾಗೂ ಕುಮಾರ್ ಅವರ ಸಹಕಾರದೊಂದಿಗೆ ನಡೆಸಿದ್ದಾರೆ. ಶಾಸನದ ಪಡಿಯಚ್ಚು ತೆಗೆದು ತರುವಲ್ಲಿಯೂ ಯಶಸ್ವಿಯಾಗಿದ್ದಾರೆ.

   ಕೊಡಗಿನಲ್ಲಿ ಕೊಂಗಾಳ್ವರ ಕಾಲದ ವೀರಗಲ್ಲು ಶಾಸನಗಳು ಪತ್ತೆ

    15ನೇ ಶತಮಾನದ ಅಪ್ರಕಟಿತ ಶಾಸನ

   15ನೇ ಶತಮಾನದ ಅಪ್ರಕಟಿತ ಶಾಸನ

   ಶಿಲಾ ಶಾಸನದ ಮೇಲೆ ಚಿತ್ರ ಬರಹವಿದ್ದು, ಶಾಸನವನ್ನು ಉಪನ್ಯಾಸಕರಾದ ದೇವರಡ್ಡಿ ಹದ್ಲಿ ಅವರು ಓದಿ ಇದರಲ್ಲಿ ಏನಿದೆ ಎಂಬುದನ್ನು ವಿವರಿಸಿದ್ದಾರೆ. ಅದರಂತೆ ಇದು 15ನೇ ಶತಮಾನದ ಅಪ್ರಕಟಿತ ದಾನ ಶಾಸನವಾಗಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಬೀಚನಹಳ್ಳಿ ಗ್ರಾಮದಲ್ಲಿ ದೊರಕಿರುವ ಮೊದಲ ಶಾಸನವಾಗಿದೆ. ಗ್ರಾಮದ ಮಲ್ಲೇಶ್ವರ ದೇವಾಲಯದ ಹಿಂದೆ ಬೇಲಿ ಗಿಡಗಳ ಮಧ್ಯೆ ಈ ಶಾಸನವು ದೊರಕಿದ್ದು, ಶಾಸನವು ಹತ್ತು ಸಾಲುಗಳಿಂದ ಕೂಡಿದೆ. ಕನ್ನಡ ಭಾಷೆಯಲ್ಲಿದ್ದು, 1 ಶಾಸನ ತ್ರುಟಿತ (ಹಾಳು) ವಾಗಿದೆ. ಶಾಸನದ ಮೇಲ್ಭಾಗದಲ್ಲಿ ಲಿಂಗ ಮತ್ತು ಕರುಸಹಿತ ಹಸುವಿನ ಉಬ್ಬು ಶಿಲ್ಪವಿದೆ.

    ದೇವರಿಗೆ ದಾನ ಬಿಟ್ಟ ಗದ್ದೆ

   ದೇವರಿಗೆ ದಾನ ಬಿಟ್ಟ ಗದ್ದೆ

   ಶಾಸನದಲ್ಲಿ ಲಕ್ಷ್ಮಣಗಾವುಂಡನು ರೌದ್ರಿ ಸಂವತ್ಸರದಂದು ಮಲ್ಲಿಕಾರ್ಜನ ದೇವರಿಗೆ ದಾನ ಬಿಟ್ಟ ಗದ್ದೆ ಎಂದಿದೆ. ಲಕ್ಷ್ಮಣ ಗಾವುಂಡ ಯಾರು ಎನ್ನುವುದರ ಬಗ್ಗೆ ಸ್ಪಷ್ಟತೆಯಿಲ್ಲ. ಇವರು ಬಹುಶಃ ಗ್ರಾಮದ ಮಲ್ಲಿಕಾರ್ಜನ (ಈಗಿನ ಮಲ್ಲೇಶ್ಪರ) ದೇವಾಲಯದ ಪೂಜಾ ಕೈಂಕರ್ಯಕ್ಕೆ ಭೂಮಿಯನ್ನು ದಾನ ನೀಡಿರಬಹುದೇನೋ? ವಿಶೇಷವಾಗಿ ಶಾಸನದಲ್ಲಿ ಈ ದಾನವನ್ನು ಅಪಹರಿಸಿದವರು ಭೂಮಿಯಲ್ಲಿ 60 ವರ್ಷ ಹುಳುವಾಗಿ ಜನ್ಮವನ್ನು ಪಡೆದುಕೊಳ್ಳಲಿ ಎಂಬ ಶಾಪಾಶಯ ಭಾಗವಿರುವ ಬಗ್ಗೆ ಉಲ್ಲೇಖಿಸಲಾಗಿದೆ.

   ಬೆಳಗಾವಿಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ವೇಳೆ ಪುರಾತನ ಶಿಲಾ ಶಾಸನ ಪತ್ತೆ

    ಶಾಸನಗಳಲ್ಲಿ ಹಲವು ವಿಶೇಷತೆಗಳು

   ಶಾಸನಗಳಲ್ಲಿ ಹಲವು ವಿಶೇಷತೆಗಳು

   ಈಗಾಗಲೇ ಮೈಸೂರು ಜಿಲ್ಲೆ ಸೇರಿದಂತೆ ಹಲವು ಕಡೆಗಳಲ್ಲಿದ್ದ ಶಾಸನಗಳು, ವೀರಗಲ್ಲು ಸೇರಿದಂತೆ ಹಲವು ವಿಶೇಷತೆಗಳನ್ನು ಶೋಧನೆ ಮಾಡುವಲ್ಲಿ ಡಾ.ಎಸ್.ಜಿ.ರಾಮದಾಸರೆಡ್ಡಿ ಅವರು ಯಶಸ್ವಿಯಾಗಿದ್ದಾರೆ. ನಮ್ಮ ಸುತ್ತಮುತ್ತ ಹಿಂದಿನ ಕಾಲದ ಹಲವು ಪಳೆಯುಳಿಕೆಗಳಿದ್ದರೂ ಅವುಗಳ ಮಹತ್ವ ತಿಳಿಯುವುದೇ ಇಲ್ಲ. ಅವುಗಳನ್ನು ಸಂಶೋಧಿಸಿದಾಗ ಮಾತ್ರ ಅವುಗಳ ಬಗ್ಗೆ ತಿಳಿಯುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

   English summary
   An Inscription dating back to 15th century found in beechanahalli of mysuru district
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X