ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು-ಚೆನ್ನೈ ನಡುವೆ ಮತ್ತೊಂದು ವಿಮಾನ ಸಂಚಾರ

|
Google Oneindia Kannada News

ಮೈಸೂರು, ಮಾರ್ಚ್ 25; ಮೈಸೂರು-ಚೆನ್ನೈ ನಡುವೆ ಮಾರ್ಚ್ 29ರಿಂದ ಇಂಡಿಗೋ ವಿಮಾನ ಹಾರಾಟ ನಡೆಸಲಿದೆ. ಪ್ರಯಾಣಿಕರ ಬೇಡಿಕೆ ಹೆಚ್ಚಿರುವ ಹಿನ್ನಲೆಯಲ್ಲಿ ಉಭಯ ನಗರಗಳ ನಡುವೆ 2ನೇ ವಿಮಾನ ಹಾರಾಟವನ್ನು ಆರಂಭಿಸಲಾಗುತ್ತಿದೆ.

"ಮಾರ್ಚ್ 29ರಿಂದ ವಾರದಲ್ಲಿ ಮೂರು ದಿನ ಮೈಸೂರು-ಚೆನ್ನೈ ನಡುವೆ ಇಂಡಿಗೋ ಏರ್ ಲೈನ್ಸ್ ಸಂಸ್ಥೆ ವಿಮಾನ ಹಾರಾಟ ನಡೆಸಲಿದೆ" ಎಂದು ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಆರ್. ಮಂಜುನಾಥ್ ಹೇಳಿದ್ದಾರೆ.

ಹಾಸನ ವಿಮಾನ ನಿಲ್ದಾಣ; ತುರ್ತು ಕಾಮಗಾರಿಗೆ ಶೀಘ್ರ ಅನುದಾನ ಹಾಸನ ವಿಮಾನ ನಿಲ್ದಾಣ; ತುರ್ತು ಕಾಮಗಾರಿಗೆ ಶೀಘ್ರ ಅನುದಾನ

ಎಟಿಆರ್ 6ಇ 7269 ವಿಮಾನವು ಸಂಜೆ 4.35ಕ್ಕೆ ಮೈಸೂರಿನಿಂದ ಹೊರಡಲಿದೆ. 5.55ಕ್ಕೆ ಚೆನ್ನೈ ತಲುಪಲಿದೆ. ಚೆನ್ನೈನಿಂದ ಮಧ್ಯಾಹ್ನ 2.50ಕ್ಕೆ ಹೊರಟು 4.15ಕ್ಕೆ ಮೈಸೂರಿಗೆ ತಲುಪಲಿದೆ. ಸೋಮವಾರ, ಬುಧವಾರ ಮತ್ತು ಶುಕ್ರವಾರ ಈ ವಿಮಾಣ ಹಾರಾಟ ನಡೆಸಲಿದೆ.

Infographics: ಖಾಸಗಿ ಪಾಲಾಗಲಿವೆ ನಾಲ್ಕು ವಿಮಾನ ನಿಲ್ದಾಣಗಳುInfographics: ಖಾಸಗಿ ಪಾಲಾಗಲಿವೆ ನಾಲ್ಕು ವಿಮಾನ ನಿಲ್ದಾಣಗಳು

Indigo To Connect Mysuru Chennai From March 29

ಟ್ರೂ ಜೆಟ್ ಸಂಸ್ಥೆಯ ವಿಮಾನ ಈಗಾಗಲೇ ಮೈಸೂರು-ಚೆನ್ನೈ ನಡುವೆ ಪ್ರತಿದಿನ ಹಾರಾಟ ನಡೆಸುತ್ತಿದೆ. ಪ್ರಯಾಣಿಕರ ಬೇಡಿಕೆ ಹೆಚ್ಚಿರುವ ಹಿನ್ನಲೆಯಲ್ಲಿ ಮತ್ತೊಂದು ವಿಮಾನವನ್ನು ಹಾರಾಟ ಆರಂಭಿಸಲಿದೆ.

ಸಂಪೂರ್ಣ ಖಾಸಗೀಕರಣದತ್ತ ಬೆಂಗಳೂರು ವಿಮಾನ ನಿಲ್ದಾಣ: ಷೇರು ಮಾರಾಟಕ್ಕೆ ಮುಂದಾದ ಕೇಂದ್ರಸಂಪೂರ್ಣ ಖಾಸಗೀಕರಣದತ್ತ ಬೆಂಗಳೂರು ವಿಮಾನ ನಿಲ್ದಾಣ: ಷೇರು ಮಾರಾಟಕ್ಕೆ ಮುಂದಾದ ಕೇಂದ್ರ

ಉಡಾನ್ ಯೋಜನೆಯಡಿ ಮೈಸೂರು ವಿಮಾನ ನಿಲ್ದಾಣ ಸೇರಿದೆ. ನಗರದಿಂದ ಚೆನ್ನೈ, ಹೈದರಾಬಾದ್, ಗೋವಾ, ಬೆಂಗಳೂರು, ಕೊಚ್ಚಿ ಮತ್ತು ಮಂಗಳೂರು ನಗರಕ್ಕೆ ವಿಮಾನ ಸಂಪರ್ಕವಿದೆ.

ಶಿರಡಿ, ತಿರುಪತಿ, ಮುಂಬೈ ನಗರಗಳಿಗೂ ಮೈಸೂರಿನಿಂದ ವಿಮಾನ ಹಾರಾಟವನ್ನು ಆರಂಭಿಸಬೇಕು ಎಂಬ ಬೇಡಿಕೆ ಬರುತ್ತಿದೆ. ಶೀಘ್ರವೇ ಈ ನಗರಗಳಿಗೂ ವಿಮಾನ ಹಾರಾಟ ಆರಂಭವಾಗುವ ನಿರೀಕ್ಷೆ ಇದೆ.

30 ಸಾವಿರ ಪ್ರಯಾಣಿಕರ ಸಂಚಾರ; ಮೈಸೂರು ನಗರದಲ್ಲಿ ವಿಮಾನ ಸೇವೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 2021ರಲ್ಲಿ 30 ಸಾವಿರ ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಸಂಚಾರ ನಡೆಸಿದ್ದಾರೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹೇಳಿದೆ.

English summary
IndiGo to connect Mysuru and Chennai city from March 29, 2021. Flight will run on Monday, Wednesday and Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X