ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತ ಮೋದಿ ಕೈಯ್ಯಲ್ಲಿ ಸುರಕ್ಷಿತವಾಗಿದೆ: ನಿರ್ಮಲಾ ಸೀತಾರಾಮನ್

By ಮೈಸೂರು ಪ್ರತಿನಿಧಿ
|
Google Oneindia Kannada News

Recommended Video

ನರೇಂದ್ರ ಮೋದಿಯನ್ನ ಹಾಡಿ ಹೊಗಳಿದ ನಿರ್ಮಲ ಸೀತಾರಾಮನ್

ಮೈಸೂರು, ಮಾರ್ಚ್ 06: ಲೋಕಸಭಾ ಚುನಾವಣೆಗೆ ಕೇವಲ ಕೆಲ ತಿಂಗಳುಗಳಿವೆ.1947 ರಿಂದ ಇಷ್ಟು ಶ್ರಮವಹಿಸಿ ಕೆಲಸ ಮಾಡಿದ ಉದಾಹರಣೆಯೇ ಇಲ್ಲ. ಪ್ರಧಾನಿ ನರೇಂದ್ರ ಮೋದಿಯವರ ವೇಗವನ್ನು ನಾವು ಹಿಂಬಾಲಿಸುತ್ತಿದ್ದೇವೆ. ಇತಿಹಾಸದಲ್ಲಿ ಬೇರೆ ಯಾವುದೇ ಸರ್ಕಾರವೂ ಇಷ್ಟೊಂದು ಶಕ್ತಿಯುತವಾಗಿ ಕೆಲಸ ಮಾಡಿಲ್ಲ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಸೇರಿದಂತೆ ಎಲ್ಲಾ ವರ್ಗದವರನ್ನು ನಾವು ತಲುಪಿದ್ದೇವೆ.ಯುಪಿಎ ಸಮಯದಲ್ಲಿ ಬೆಲೆ ಏರಿಕೆಯಾಗಿತ್ತು.ಬೇಳೆ 200 ಕೆಜಿ, ತರಕಾರಿ 80 ರಿಂದ 150 ಎಲ್ಲದರ ಕೊರತೆ ಉಂಟಾಗಿತ್ತು.ಸಾರ್ವಜನಿಕ ವಲಯದ ಅನೇಕ ಉದ್ಯಮಗಳು ಬಂದ್ ಆಗಿದ್ದವು.ಜನರು ಅಸಹಾಯಕರಾಗಿದ್ದರು, ಈ ದೇಶದ ಬದಲಾಯಿಸಲಾಗುವುದಿಲ್ಲ ಅನ್ನೋ ಹಂತ ತಲುಪಿದ್ದರು. ಯಾವ ರೀತಿ ಸುಧಾರಣೆಯಾಗುತ್ತೆ ಅನ್ನೋ ಪರಿಸ್ಥಿತಿ ಇತ್ತು ಎಂದು ಅವರು ಟೀಕಿಸಿದರು.

ರಿಮೋಟ್ ಕಂಟ್ರೋಲ್ ಸಿಎಂ : ಮೋದಿ ಹೇಳಿಕೆಗೆ ಕಾಂಗ್ರೆಸ್‌ ತಿರುಗೇಟುರಿಮೋಟ್ ಕಂಟ್ರೋಲ್ ಸಿಎಂ : ಮೋದಿ ಹೇಳಿಕೆಗೆ ಕಾಂಗ್ರೆಸ್‌ ತಿರುಗೇಟು

ಕೇಳುವ ಕೆಲಸ ಮಾಡುವ ಸರ್ಕಾರ ಬೇಕಾಗಿತ್ತು. ಅದೇ ಮೋದಿ ಸರ್ಕಾರ ಮಾಡಿದೆ.ಮತದಾರರಿಗೆ ಅರಿವು ಮೂಡಿಸಬೇಕಾಗಿದೆ. ಮೋದಿ ಸರ್ಕಾರದಿಂದ ಭ್ರಷ್ಟಾಚಾರದ ಒಂದು ಆರೋಪ ಕೇಳಿ ಬಂದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ರಫೇಲ್ ಬಗ್ಗೆ ಅರ್ಥವೇ ಆಗಿಲ್ಲ ಎಂದ ನಿರ್ಮಲಾ, ರಾಷ್ಟ್ರೀಯ ಹಿತಾಸಕ್ತಿಗೆ ಕೆಲಸ ಮಾಡೋದು ಅವರಿಗೆ ಗೊತ್ತಿಲ್ಲ. ಡಿಫೆನ್ಸ್ ಕಾರ್ಯವೈಖರಿ ಗೊತ್ತಿಲ್ಲ, ಎಲ್ಲವನ್ನೂ ಒಂದು ಪೈಸೆ ಕಿಕ್ ಬ್ಯಾಕ್ ನೀಡದೆ ಖರಿದೀಸಿದ್ದೇವೆ ಎಂದರು.

 ಮೋದಿಯನ್ನು ತಬ್ಬಿಕೊಂಡಿದ್ದು ಡ್ರಾಮಾ

ಮೋದಿಯನ್ನು ತಬ್ಬಿಕೊಂಡಿದ್ದು ಡ್ರಾಮಾ

ರಾಷ್ಟ್ರೀಯ ಪಕ್ಷವನ್ನು ನಡೆಸುತ್ತಿರುವವರು ಪ್ರಧಾನ ಮಂತ್ರಿ ಬಗ್ಗೆ ಇಷ್ಟು ಕೀಳು ಮಟ್ಟದಲ್ಲಿ ಮಾತನಾಡುತ್ತಿರುವುದು ದುರಂತ. ಇದು ಕಾಂಗ್ರೆಸ್ ಪಕ್ಷಕ್ಕೆ ಅವಮಾನ ಎಂದ ನಿರ್ಮಲಾ ಸೀತಾರಾಮನ್, ಮೋದಿಯನ್ನು ರಾಹುಲ್ ರಾಹುಲ್ ಗಾಂಧಿ ತಬ್ಬಿಕೊಂಡಿದ್ದನ್ನು ಪ್ರಸ್ತಾಪಿಸಿ, ರಾಹುಲ್ ಗಾಂಧಿ ತಬ್ಬಿಕೊಂಡಿದ್ದು ಡ್ರಾಮಾ. ಅಲ್ಲಿ ತಬ್ಬಿಕೊಂಡು, ಈಗ ಈ ರೀತಿ ಭಾಷೆ ಬಳಸುತ್ತಿರುವುದು ಡ್ರಾಮಾನೇ ಎಂದು ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದರು.

 ಆರೋಪ ಮಾಡಲು ಬರುತ್ತಿಲ್ಲ

ಆರೋಪ ಮಾಡಲು ಬರುತ್ತಿಲ್ಲ

ಕಾಂಗ್ರೆಸ್ ನವರು ನೀರಿನಿಂದ ಹೊರತೆಗೆದ ಮೀನಿನಂತೆ ಆಗಿದ್ದಾರೆ. ಅವರಿಗೆ ಆರೋಪ ಮಾಡಲು ಬರುತ್ತಿಲ್ಲ. ಈಗ ಏನೂ ಸಿಗದ ಕಾರಣ ಉದ್ಯೋಗ ಹಾಗೂ ರೈತರ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿ ಕೃಷಿಕರಿಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ರೈತರನ್ನು ಸಮರ್ಥರನ್ನಾಗಿ ಮಾಡುವ ಉದ್ದೇಶ ಹೊಂದಿದ್ದಾರೆ.

ರೈತರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಉದ್ದೇಶ ಹೊಂದಿದ್ದಾರೆ. ಈ ಯೋಜನೆ ಹಿಂಪಡೆಯಲು ಯಾರಿಗೆ ಧೈರ್ಯವಿದೆ? ಆದರೆ ಈ ಬಗ್ಗೆ ಅಸಂಘಟಿತ ವಲಯದವರಿಂದ ಅಪಪ್ರಚಾರ ನಡೆಯುತ್ತಿದೆ.ಆದರೆ ಅದು ಅತ್ಯುತ್ತಮ ಯೋಜನೆ, ಎಲ್ಲರೂ ಆ ಯೋಜನೆ ಬಳಸಿಕೊಳ್ಳಿ. ನೀವು ನಿವೃತ್ತರಾದಾಗ ಅದು ನಿಮಗೆ ಅನುಕೂಲವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಕಿವಿ ಮಾತು ಹೇಳಿದರು.

 ತಮ್ಮ ಉಳಿತಾಯದ ಹಣದಿಂದ ಪೌರ ಕಾರ್ಮಿಕರ ನಿಧಿಗೆ 21 ಲಕ್ಷ ನೀಡಿದ ಮೋದಿ ತಮ್ಮ ಉಳಿತಾಯದ ಹಣದಿಂದ ಪೌರ ಕಾರ್ಮಿಕರ ನಿಧಿಗೆ 21 ಲಕ್ಷ ನೀಡಿದ ಮೋದಿ

 ಶತೃಗಳು ನಮ್ಮ ನಿರ್ಧಾರ ಇಷ್ಟಪಟ್ಟಿಲ್ಲ

ಶತೃಗಳು ನಮ್ಮ ನಿರ್ಧಾರ ಇಷ್ಟಪಟ್ಟಿಲ್ಲ

ಮಹಾಘಟ್ ಬಂಧನ ಬಗ್ಗೆ ಮಾಡಿದ ನಿರ್ಮಲಾ ಸೀತಾರಾಮನ್, ಮಹಾಘಟ್ ಬಂಧನ ಅಂದರೆ ಮಹಾಮಿಲಾವಟ್.ಇದು ಕಲಬೆರಕೆ ಅಂತ ಅರ್ಥ. ಇವರ ಉದ್ದೇಶ ಒಂದೇ ಮೋದಿಯನ್ನು ತೆಗೆಯುವುದು.ಅವರು ನಕಾರಾತ್ಮಕ ಉದ್ದೇಶವನ್ನು ಹೊಂದಿದ್ದಾರೆ. ಅದು ಎಂದಿಗೂ ಆಗುವುದಿಲ್ಲ.ಶತೃಗಳು ನಮ್ಮ ನಿರ್ಧಾರವನ್ನು ಇಷ್ಟಪಟ್ಟಿಲ್ಲ, ಅದಕ್ಕಾಗಿ ತಪ್ಪು ಮಾಹಿತಿಗಳನ್ನು ಹರಡುತ್ತಿದ್ದಾರೆ. ಇಂತಹುದನ್ನು ನಂಬಿದರೆ, ಹರಡಿದರೆ ಮತ್ತಷ್ಟು ಅಟ್ಯಾಕ್ ಗಳು ಆಗುತ್ತವೆ. ಆತ್ಮಹತ್ಯಾ ದಾಳಿಗಳಾಗುತ್ತವೆ ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಕೋರಿದರು.

 ಯಾರಿಗಾಗಿ ಮಾಹಿತಿ ಕೇಳುತ್ತಿದ್ದಾರೆ?

ಯಾರಿಗಾಗಿ ಮಾಹಿತಿ ಕೇಳುತ್ತಿದ್ದಾರೆ?

ನಾವು ಭಯೋತ್ಪಾದಕ ಕ್ಯಾಂಪ್ ಮೇಲೆ ಮಾಡಿದ ದಾಳಿ ಗುಪ್ತಚರ ವರದಿ ಆಧಾರಿತ ದಾಳಿ ಎಂದು ತಿಳಿಸಿದ ನಿರ್ಮಲಾ, ದಾಳಿ ನಾವು ಹೋಗಿ ಮಾಡಿದ್ದಲ್ಲ, ಸೇನೆ ಮಾಡಿದ್ದು. ಹಿಂದಿನಿಂದಲೂ ದೇಶದಲ್ಲಿ ಆದ ದಾಳಿ ಬಗ್ಗೆ ಪಾಕಿಸ್ತಾನಕ್ಕೆ ನಿರಂತರವಾಗಿ ಸಾಕ್ಷ್ಯ ನೀಡುತ್ತಿದ್ದೇವೆ. ಅವರು ಏನು ಮಾಡುತ್ತಿಲ್ಲ, ಪುಲ್ವಾಮಾ ಆದ 10 ದಿನದ ನಂತರವೂ ಪಾಕಿಸ್ತಾನ ಏನು ಮಾಡಲಿಲ್ಲ.ಹಿಂದೆ ಏನು ಮಾಡದವರು ಈಗ ಸಾಕ್ಷಿ ಕೇಳುತ್ತಿದ್ದಾರೆ.26/11 ಅಟ್ಯಾಕ್ ಆದಾಗ ಏನು ಮಾಡದವರು ಸಾಕ್ಷಿ ಕೇಳುತ್ತಿದ್ದಾರೆ.ರಫೇಲ್ ಬಗ್ಗೆ ಮಾಹಿತಿ ನೀಡಿದರೆ ಅದು ಪಾಕಿಸ್ತಾನಕ್ಕೆ ಸಹಕಾರಿಯಾಗಲಿದೆ.ಯಾರಿಗಾಗಿ ಮಾಹಿತಿ ಕೇಳುತ್ತಿದ್ದಾರೆ? ಎಂದು ಪ್ರಶ್ನಿಸಿದ ಅವರು, ಭಾರತ ಮೋದಿ ಕೈಯಲ್ಲಿ ಸುರಕ್ಷಿತವಾಗಿದೆ ಎಂದರು.

 ಸಮೀಕ್ಷೆ : ಬಾಲಕೋಟ್ ದಾಳಿ ನಂತರ ಮೋದಿ ಪುನರ್ ಆಯ್ಕೆ? ಸಮೀಕ್ಷೆ : ಬಾಲಕೋಟ್ ದಾಳಿ ನಂತರ ಮೋದಿ ಪುನರ್ ಆಯ್ಕೆ?

English summary
Union Minister Nirmala Sitharaman said that India is safe in Modi's hand.No other government has ever worked so powerful in history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X