ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಕಲಚೇತನ ಮಕ್ಕಳೊಂದಿಗೆ ಮೈಸೂರ್ ವಾರಿಯರ್ಸ್!

ಮೈಸೂರಿನಲ್ಲಿ ಸಾರ್ಥಕ ಸ್ವಾತಂತ್ರ್ಯೋತ್ಸವ. ಅಂಗವಿಕಲ ಶಾಲಾ ವಿದ್ಯಾರ್ಥಿಗಳೊಂದಿಗೆ ಆಟವಾಡಿದ ಮೈಸೂರು ವಾರಿಯರ್ಸ್ ತಂಡ.

|
Google Oneindia Kannada News

ಮೈಸೂರು, ಆಗಸ್ಟ್ 15: ನಗರದ ರಂಗರಾವ್ ಸ್ಮಾರಕ ವಿಕಲಚೇತನರ (ಆರ್‍ಎಂಎಸ್‍ಡಿ) ಶಾಲೆಯ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯಕ್ತ ನಡೆದ ಆಸಕ್ತಿದಾಯಕ ಸೌಹಾರ್ಧ ಕ್ರಿಕೆಟ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡದ ಆಟಗಾರರು ವಿಕಲಚೇತನ ಮಕ್ಕಳೊಂದಿಗೆ ಕ್ರಿಕೆಟ್ ಆಡುವ ಮೂಲಕ ಗಮನಸೆಳೆದರು.

ರಾಜ್ಯದಲ್ಲಿನ ದಾಖಲೆ ಮಳೆಗೆ ಒಂದು ಸಾವು; ಹಲವೆಡೆ ತೊಂದರೆರಾಜ್ಯದಲ್ಲಿನ ದಾಖಲೆ ಮಳೆಗೆ ಒಂದು ಸಾವು; ಹಲವೆಡೆ ತೊಂದರೆ

ಅಂಧ ಮಕ್ಕಳೊಂದಿಗೆ ಕ್ರಿಕೆಟ್ ಆಡುವ ವೇಳೆ ಮೈಸೂರು ವಾರಿಯರ್ಸ್ ತಂಡದ ಆಟಗಾರರು ಕಣ್ಣನ್ನು ಮುಚ್ಚಿ ಆಟವಾಡಿದ್ದು ವಿಶೇಷವಾಗಿತ್ತು. ಮಕ್ಕಳು ಆಟಗಾರರೊಂದಿಗೆ ಆಟವಾಡಿ ಸಂಭ್ರಮಿಸಿದರು.

Independence day special: Mysuru Warrior team play cricket with Handicap school players in Mysuru

ಕೆಲವು ವಿದ್ಯಾರ್ಥಿನಿಯರು ಬೌಲಿಂಗ್ ಮಾಡಿದರೆ, ಆಟಗಾರರು ಬ್ಯಾಟಿಂಗ್ ಮಾಡಿದರು. ಆಟಗಾರರು ಬೌಲಿಂಗ್ ಮಾಡಿದರೆ ವಿದ್ಯಾರ್ಥಿನಿಯರು ಬ್ಯಾಟಿಂಗ್ ಮಾಡಿದರು. ಒಂದಷ್ಟು ಸಮಯ ಖುಷಿಯಾಗಿ ಕಾಲ ಕಳೆದ ಆಟಗಾರರು ಮಕ್ಕಳೊಂದಿಗೆ ಫೋಟೋ ತೆಗೆಯಿಸಿಕೊಂಡು ಸಂತಸಪಟ್ಟರು.

Independence day special: Mysuru Warrior team play cricket with Handicap school players in Mysuru

ಇದೇ ವೇಳೆ ಶಾಲಾವರಣದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯದಿನಾಚರಣೆ ಆಚರಿಸಲಾಯಿತು.

ಮೈಸೂರಿನಲ್ಲಿ ವೈಭವದ ಶ್ರೀ ಕೃಷ್ಣ ಜಯಂತಿ ಆಚರಣೆಮೈಸೂರಿನಲ್ಲಿ ವೈಭವದ ಶ್ರೀ ಕೃಷ್ಣ ಜಯಂತಿ ಆಚರಣೆ

ಎನ್‍ಆರ್ ಸಮೂಹದ ಅಧ್ಯಕ್ಷ ಗುರು, ಸಂಸ್ಥೆಯ ಸುಪ್ರೀಮ್ ಸಾಲಿಯಾನ್, ಸಿಇಓ ಪ್ಲಾನ್ಸಿ, ಅರ್ಜುನ್ ರಂಗ ಸೇರಿದಂತೆ ಹಲವರು ಇದ್ದರು.

English summary
Karnataka premier league (KPL) team Mysuru Warriors players, played cricket with Mysuru's Rangarao memorial handicap school students to make this year's Independence day most memorable.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X