ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಮೂಲ್ ನಿಂದ ಹಾಲು ಉತ್ಪಾದಕರಿಗೆ 1 ರೂಪಾಯಿ ಹೆಚ್ಚಳ

|
Google Oneindia Kannada News

ಮೈಸೂರು, ಆಗಸ್ಟ್ 2: ಮಳೆಯ ಪ್ರಮಾಣ ತಗ್ಗಿದ ಪರಿಣಾಮ ರೈತರಿಗೆ ನೆರವು ನೀಡುವ ಉದ್ದೇಶದಿಂದ ಮೈಸೂರು ಜಿಲ್ಲಾ ಹಾಲು ಒಕ್ಕೂಟ ಮೈಮುಲ್ ಜಿಲ್ಲೆಯಲ್ಲಿ ರೈತರು ನೀಡುವ ಪ್ರತಿ ಲೀಟರ್ ಹಾಲಿನ ಮೇಲೆ 1 ರೂಪಾಯಿ ದರ ಹೆಚ್ಚಳ ಮಾಡಿದೆ.

ಬೇಸಿಗೆಯಲ್ಲಿ ರೈತರಿಂದ ಹಾಲು ಖರೀದಿಸುವ ದರವನ್ನು ಕಡಿಮೆ ಮಾಡಿ ಮಳೆಗಾಲದಲ್ಲಿ ಏರಿಸಲಾಗುತ್ತಿದೆ. ಆದರೆ ರೈತರು ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಬೆಳೆಗಾರರಿಗೆ ನೆರವಿನ ದರವನ್ನು ಹೆಚ್ಚಿಸುವ ನಿರ್ಧಾರವನ್ನು ಮೈಮುಲ್ ತೆಗೆದುಕೊಂಡಿದೆ. ಗುರುವಾರದಿಂದಲೇ ಹೊಸ ದರ ಅನ್ವಯವಾಗಿದ್ದು, ಜಿಲ್ಲೆಯ 95 ಸಾವಿರ ರೈತರಿಗೆ ಇದರಿಂದ ಅನುಕೂಲವಾಗಲಿದೆ.

 ರಾಜಧಾನಿ ದೆಹಲಿಗೂ ಲಗ್ಗೆ ಇಟ್ಟ ನಂದಿನಿ, ಎಷ್ಟು ಲೀಟರ್ ಪೂರೈಕೆ? ರಾಜಧಾನಿ ದೆಹಲಿಗೂ ಲಗ್ಗೆ ಇಟ್ಟ ನಂದಿನಿ, ಎಷ್ಟು ಲೀಟರ್ ಪೂರೈಕೆ?

ಈ ಹಿಂದೆ ರೈತರಿಗೆ ಲೀಟರ್‌ ಹಾಲಿಗೆ ಕನಿಷ್ಠ ದರ 23 ರೂಪಾಯಿ ನೀಡಲಾಗುತಿತ್ತು. ಅದನ್ನು 24 ರೂಪಾಯಿಗೆ ಹೆಚ್ಚಿಸಲಾಗಿದೆ. ರಾಜ್ಯ ಸರ್ಕಾರವು ಪ್ರತಿ ಲೀಟರ್‌ ಹಾಲಿಗೆ 6 ರೂ ಪ್ರೋತ್ಸಾಹಧನ ನೀಡುತ್ತಿದೆ. ಇದರಿಂದ ರೈತರಿಗೆ ಒಟ್ಟು 30 ರೂ ಸಿಗಲಿದೆ. ಮೈಮುಲ್ ಆಡಳಿತ ಮಂಡಳಿ ಸಭೆಯು ಈಚೆಗೆ ಈ ನಿರ್ಧಾರ ತೆಗೆದುಕೊಂಡಿದೆ. ಹಾಲು ಉತ್ಪಾದನೆ ಕಡಿಮೆ ಆದಾಗ ರೈತರನ್ನು ಪ್ರೋತ್ಸಾಹಿಸುವುದು ನಮ್ಮ ಉದ್ದೇಶ. ಹೀಗಾಗಿ, ಖರೀದಿ ದರ ಹೆಚ್ಚಿಸಿದ್ದೇವೆ ಎಂದು ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

Increase Of Rs 1 For Milk Producers by MYMUL

ಮೈಸೂರು ಜಿಲ್ಲೆಯ 95 ಸಾವಿರ ರೈತರಿಂದ ಸುಮಾರು 1,250 ಸಹಕಾರ ಸಂಘಗಳ ಮೂಲಕ ನಿತ್ಯ 6.46 ಲಕ್ಷ ಲೀಟರ್ ಹಾಲು ಖರೀದಿಸಲಾಗುತ್ತಿದೆ. ‌ಸಂಘಗಳಿಗೆ ಲೀಟರ್‌ ಹಾಲಿಗೆ 25.65 ನೀಡಲಾಗುತ್ತಿದೆ. ಉತ್ತಮ ಗುಣಮಟ್ಟದ ಹಾಲಿಗೆ ಬೆಲೆ ಹೆಚ್ಚುತ್ತಾ ಹೋಗುತ್ತದೆ. ಇನ್ನು ಮೈಮುಲ್ ತಯಾರಿಸುವ ಹಾಲಿನ ಉತ್ಪನ್ನಗಳಿಗೂ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆ ಅಲ್ಲಿನ ಲಾಭವನ್ನು ಉತ್ಪಾದಕರಿಗೆ ಹಂಚಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

English summary
Mysuru Milk Union Ltd has increased the milk prices for farmers in district by Rs.1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X