ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾದಲ್ಲಿ ಈ ಬಾರಿ ಮೈಸೂರು ಮೃಗಾಲಯಕ್ಕೆ ಬಂದ ಆದಾಯವೆಷ್ಟು?

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 9: ಕಳೆದ ಮೂರು ವರ್ಷದಲ್ಲಿ ಆಯುಧ ಪೂಜೆ ಹಾಗೂ ದಸರಾ ಹಬ್ಬದ ಹತ್ತು ದಿನಗಳ ಅವಧಿಯ ಮೃಗಾಲಯದ ವೀಕ್ಷಕರ ಸಂಖ್ಯೆ ಹಾಗೂ ಆದಾಯದಲ್ಲಿ ಏರಿಕೆ ಕಂಡಿದೆ.

ಮೈಸೂರು ಮೃಗಾಲಯಕ್ಕೆ ಈ ಬಾರಿ ಹತ್ತು ದಿನದಲ್ಲಿ 1.65 ಲಕ್ಷ ಜನರು ಭೇಟಿ ನೀಡಿದ್ದು, ಒಟ್ಟಾರೆ ಟಿಕೆಟ್ ನಿಂದ 159.76 ಲಕ್ಷ ಆದಾಯ ಸಂಗ್ರಹವಾಗಿದೆ.

ಮೈಸೂರು ಮೃಗಾಲಯದ ಪ್ರವೇಶ ಶುಲ್ಕ ಏರಿಕೆ ಮೈಸೂರು ಮೃಗಾಲಯದ ಪ್ರವೇಶ ಶುಲ್ಕ ಏರಿಕೆ

2016ರಲ್ಲಿ ಹತ್ತು ದಿನಗಳ ಅವಧಿಯಲ್ಲಿ ವೀಕ್ಷಕರ ಸಂಖ್ಯೆ 1.24 ಲಕ್ಷವಿದ್ದು, ಟಿಕೆಟ್ ನಿಂದ 70.53 ಲಕ್ಷ ಸಂಗ್ರಹವಾಗಿತ್ತು. ವಿಜಯ ದಶಮಿ ದಿನದಂದು 15.08 ಲಕ್ಷ ರೂಪಾಯಿ ಸಂಗ್ರಹವಾಗಿತ್ತು. 2017ರಲ್ಲಿ ಹತ್ತು ದಿನಗಳ ಅವಧಿಯಲ್ಲಿ ವೀಕ್ಷಕರ ಸಂಖ್ಯೆ 1.23 ಲಕ್ಷವಿದ್ದು, ಟಿಕೆಟ್ ನಿಂದ ಆದಾಯ 69.17 ಲಕ್ಷ ರೂಪಾಯಿ ದೊರೆತಿತ್ತು.

Income Of The Mysuru Zoo In Dasara Holiday

2018ರಲ್ಲಿ 1.53ಲಕ್ಷ ವೀಕ್ಷಕರು ಬಂದಿದ್ದು, 105.64 ಲಕ್ಷ ರೂ ಆದಾಯ ಸಂಗ್ರಹವಾಗಿತ್ತು. ಈ ಬಾರಿ, ಅಂದರೆ, 2019ರಲ್ಲಿ 1.65 ಲಕ್ಷ ವೀಕ್ಷಕರು ಭೇಟಿ ನೀಡಿದ್ದು, 159.76 ಲಕ್ಷ ರೂಪಾಯಿ ಆದಾಯ ಸಂಗ್ರಹವಾಗಿದೆ. ಆಯುಧ ಪೂಜೆ ದಿನ 30,273 ಜನ ಭೇಟಿ ನೀಡಿದ್ದು, 29.77 ಲಕ್ಷ ರೂ, ವಿಜಯದಶಮಿ ದಿನ 28,386 ಜನರು ಭೇಟಿ ನೀಡಿದ್ದು, 28.28 ಲಕ್ಷ ರೂಪಾಯಿ ಸಂಗ್ರಹವಾಗಿರುವುದಾಗಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

English summary
Over the past three years, the number of visitors and income of the zoo has increased during Dasara festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X