ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುಗಾದಿ ಹಬ್ಬದಂದು ಹಣ ಹಂಚಿದರಾ ಸಾ.ರಾ ಮಹೇಶ್ ?

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಮಾರ್ಚ್ 26 : ಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಈ ಹಿನ್ನೆಲೆ ಚುನಾವಣೆ ಸಮೀಪಿಸುತ್ತಿದ್ದಂತೆ ಹಲವು ಆಮಿಷಗಳಿಗೆ ಮತದಾರ ಪ್ರಭು ಬಲಿಯಾಗುತ್ತಿದ್ದಾನೆ. ಹಣ, ಬಟ್ಟೆ, ಕುಕ್ಕರ್ ಮುಂತಾದ ಅಮಿಷಗಳನ್ನು ಒಡ್ಡಿ ಮತದಾರರನ್ನು ಸೆಳೆಯುವ ರಾಜಕೀಯ ನಾಯಕರ ತಂತ್ರ ದಿನೇ ದಿನೇ ಹೆಚ್ಚುತ್ತಿದೆ.ಕೆ.ಆರ್ ನಗರ ಶಾಸಕರಾದ ಸಾ.ರಾ ಮಹೇಶ್ ಅವರು ಯುಗಾದಿ ಹಬ್ಬದ ಹೆಸರಲ್ಲಿ ಮತದಾರರಿಗೆ ಹಣ ಹಂಚಿದ ಘಟನೆ ನಡೆದಿದೆ. ಕಳೆದ ಎರಡು ಭಾರಿ ಗೆಲುವು ಸಾಧಿಸಿ ಈ ಚುನಾವಣೆಯಲ್ಲಿ ಸೋಲಿನ ಭಯದಿಂದ ತತ್ತರಿಸಿರುವ ಸಾ.ರಾ. ಮಹೇಶ್ ಯುಗಾದಿ ಹಬ್ಬದ ಹೆಸರಿನಲ್ಲಿ .ಕೆ.ಆರ್. ನಗರ ತಾಲೂಕಿನ ದೊಡ್ಡ ಕೊಪ್ಪಲು ಗ್ರಾಮದಲ್ಲಿ ಮತದಾರರಿಗೆ ನೇರವಾಗಿ ಹಣ ಹಂಚಿದ್ದಾರೆ.

ಜೆಡಿಎಸ್ ಬಂಡಾಯ ಶಾಸಕರು ಇಂದು ಕಾಂಗ್ರೆಸ್‌ಗೆ ಜೆಡಿಎಸ್ ಬಂಡಾಯ ಶಾಸಕರು ಇಂದು ಕಾಂಗ್ರೆಸ್‌ಗೆ

ಸದ್ಯ ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ ನ. ಪ್ರಭಾವೀ ಶಾಸಕನಾಗಿರೋ ಸಾ.ರಾ. ಮಹೇಶ್ ಅವರಿಗೆ ಪ್ರತಿ ಸ್ಪರ್ಧಿಗಳಾಗಿ ಬಿಜೆಪಿಯ ಹೊಸಳ್ಳಿ ವೆಂಕಟೇಶ್, ಕಾಂಗ್ರೆಸ್ ನಿಂದ ರವಿಶಂಕರ್ ರಿಂದ ಪ್ರಬಲ ಪೈಪೋಟಿ ಉಂಟಾಗಿದೆ.

In the name of the Ugadi festival, MLA sa ra Mahesh distributes money to votersIn the name of the Ugadi festival, MLA sa ra Mahesh distributes moneay to voters

ಹೀಗಾಗಿ ಮತದಾರರನ್ನು ತಮ್ಮತ್ತ ಸೆಳೆಯಲು ಯುಗಾದಿ ಹಬ್ಬದ ಗಿಫ್ಟ್ ಹೆಸರಿನಲ್ಲಿ ಮತದಾರರ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಪಡೆದು 1000 ಸಾವಿರ ರೂ. ನೀಡಿದ್ದಾರೆ. ಹಣವಿದ್ದ ಕವರ್ ಮೇಲೆ ಜನರಿಗೆ ಶುಭಾಷಯ ಕೋರಿದ್ದು ಹಣ ಹಂಚುತ್ತಿರುವ ವಿಡಿಯೋ ವೈರಲ್ ಆಗಿದೆ. ಮಾಜಿ ಸಂಸದ ಹೆಚ್. ವಿಶ್ವನಾಥ್ ಅವರನ್ನ ಪಕ್ಕದಲ್ಲೇ ಕೂರಿಸಿಕೊಂಡೇ ಹಣ ಹಂಚಿದ್ದಾರೆ.

English summary
In the name of Ugadi festival, money was distributed in public to the voters by MLA Sa Ra Mahesh at Mysuru district K R Nagar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X