ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿಯ ಮನ್‌ ಕಿ ಬಾತ್‌ ನಲ್ಲಿ ಮೈಸೂರಿನ ದರ್ಶನ್ ಹೆಸರು!

By Yashaswini
|
Google Oneindia Kannada News

ಮೈಸೂರು, ಜನವರಿ 29 : ಕಳೆದ ಕೆಲವು ತಿಂಗಳಿನಿಂದ ಭೀಮ ಆಪ್‌ ಮತ್ತು ರುಪೇ ಬಳಸಿ ಲಕ್ಕಿ ಗ್ರಾಹಕರ ಯೋಜನೆಯಡಿ ಒಂದು ಸಾವಿರ ಬಹುಮಾನ ಗೆದ್ದ ಮೈಸೂರಿನ ತಿಲಕನಗರದ ಯುವಕನ ಬಗ್ಗೆ ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಅದೇ ಮತ್ತೊಮ್ಮೆ ಮರುಕಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮನ್‌ ಕಿ ಬಾತ್‌ನಲ್ಲಿ ಪ್ರಧಾನಮಂತ್ರಿ ಜನ ಔಷಧಿ ಯೋಜನೆಯಿಂದ ಪ್ರಯೋಜನ ಪಡೆದ ಮೈಸೂರಿನ ದರ್ಶನ್‌ ಎನ್ನುವವರ ಕುರಿತು ಪ್ರಸ್ತಾಪ ಮಾಡಿದ್ದಾರೆ.

ಮನ್‌ ಕಿ ಬಾತ್‌: ಪದ್ಮ ಪುರಸ್ಕೃತ ಸಾಮಾನ್ಯರ ಮಾತು, ರಾಜ್ಯದ ಸೀತವ್ವನ ಸ್ಮರಣೆಮನ್‌ ಕಿ ಬಾತ್‌: ಪದ್ಮ ಪುರಸ್ಕೃತ ಸಾಮಾನ್ಯರ ಮಾತು, ರಾಜ್ಯದ ಸೀತವ್ವನ ಸ್ಮರಣೆ

ದರ್ಶನ್ ಅವರು ತಮ್ಮ ತಂದೆಯ ಔಷದಿಗಾಗಿ ಪ್ರತಿ ತಿಗಂಳು 6 ಸಾವಿರ ರೂಪಾಯಿ ಖರ್ಚು ಮಾಡುತ್ತಿದ್ದರಂತೆ. ಜನ ಔಷಧ ಕೇಂದ್ರ ಮೂಲಕ ಔಷಧಿ ಖರೀದಿ ಮಾಡಲು ಪ್ರಾರಂಭಿಸಿದ ನಂತರ ತಿಂಗಳಿಗೆ ಶೇ 75 ರಷ್ಟು ಉಳಿತಾಯ ಆಗುತ್ತಿದೆಯಂತೆ. ಈ ಬಗ್ಗೆ ಅವರು ಮೈ ಗೌರ್ಮೆಂಟ್ ಆಪ್ ನಲ್ಲಿ ಬರೆದುಕೊಂಡಿದ್ದರು.

In Mann ki baat PM Modi Mentioned Mysurean Darshan

ಈ ಬಾರಿಯ ಮನ್‌ ಕಿ ಬಾತ್‌'ನಲ್ಲಿ ಜನ ಔಷಧಿ ಕೇಂದ್ರದ ಬಗ್ಗೆ ಮಾತನಾಡುತ್ತಾ ಮೋದಿ ಅವರು ಮೈಸೂರಿನ ದರ್ಶನ್ ಅವರ ಪ್ರತಿಕ್ರಿಯೆಯನ್ನು ಉದಾಹರಣೆ ನೀಡಿದರು.

ಸಂತಸದಿಂದ ಉಬ್ಬಿದ ದರ್ಶನ್
ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್‌ನಲ್ಲಿ ಪ್ರಶಂಸಿರುವ ಬಗ್ಗೆ ಅತೀವ ಸಂತೋಶ ವ್ಯಕ್ತಪಡಿಸಿರುವ ದರ್ಶನ್ ಅವರು 'ಮೋದಿ ಅವರು ಪ್ರಶಂಸೆಯಿಂದ ನನಗೆ ತುಂಬಾ ಸಂತೋಷವಾಗಿದೆ ನಮ್ಮ ತಂದೆಯೂ ಈ ವಿಚಾರ ತಿಳಿದು ತುಂಬಾ ಸಂತೋಷ ವ್ಯಕ್ತಪಡಿಸಿದ್ದಾರೆ' ಎಂದು ದರ್ಶನ್ ಹೇಳಿದ್ದಾರೆ.

English summary
Prime minister Modi mentioned Mysuru resident Darshan who wrote to PM through my government app about 'Jan Ovshad' center. Modi said Darshan spending 6000 per month for his fathers medicine then he started purchasing in Jan Ovshad center. Now he is saving 75% on his fathers medical bill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X