ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್ ಡಿ ಕೆ ಬಜೆಟ್ ನಲ್ಲಿ ಮೈಸೂರು ಭಾಗಕ್ಕೆ ಕೆಲವೇ ಯೋಜನೆಗಳು ಸೀಮಿತ

By Yashaswini
|
Google Oneindia Kannada News

ಮೈಸೂರು, ಜುಲೈ 5 : ಈ ಬಾರಿಯ ಬಜೆಟ್ ನಲ್ಲಿ ಮೈತ್ರಿ ಸರ್ಕಾರ ಮೈಸೂರು ಜನರ ಮೂಗಿಗೆ ತುಪ್ಪ ಸವರಿದ್ದು, ಬಜೆಟ್ ನಲ್ಲಿ ಕೆಲವೇ ಯೋಜನೆ ಮಾತ್ರ ಮೈಸೂರು ಭಾಗಕ್ಕೆ ಸೀಮಿತವಾಗಿವೆ.

ಆದರೆ ಹಳೇ ಮೈಸೂರು ಭಾಗದ ಹಾಸನ, ಮಂಡ್ಯ, ರಾಮನಗರ, ಕನಕಪುರಕ್ಕೆ ಹೆಚ್ಚಿನ ಅನುದಾನಗಳನ್ನು ನೀಡಲಾಗಿದ್ದು, ರಾಜ್ಯದ ಇತರೆ ಜಿಲ್ಲೆಗಳನ್ನು ಮುಖ್ಯಮಂತ್ರಿಗಳು ಕಡೆಗಣಿಸಿದ್ದಾರೆ ಎಂಬ ಆರೋಪ ಇದೀಗ ಕೇಳಿಬರುತ್ತಿದೆ.

ಕರ್ನಾಟಕ ಬಜೆಟ್ 2018 : ಕುಮಾರಸ್ವಾಮಿ ಆಯವ್ಯಯದ Highlightsಕರ್ನಾಟಕ ಬಜೆಟ್ 2018 : ಕುಮಾರಸ್ವಾಮಿ ಆಯವ್ಯಯದ Highlights

ಮೈಸೂರಿಗೆ ಬಜೆಟ್ ನಲ್ಲಿ ಏನೇನಿದೆ?

3 ಕೋಟಿ ರೂ. ವೆಚ್ಚದಲ್ಲಿ ರೇಷ್ಮೆ ಗೂಡು. ಮಾರುಕಟ್ಟೆ ಸ್ಥಾಪನೆ: 2018-19ರಲ್ಲಿ 1 ಕೋಟಿ ರೂ. ಅನುದಾನ, ಹೃದ್ರೋಗ ಮತ್ತು ಕ್ಯಾನ್ಸರ್ ಹಾಗೂ ಇತರ ರೋಗಗಳಿಗೆ ಸಂಬಂಧಿಸಿದ ತೃತೀಯ ಹಂತದ ಆರೋಗ್ಯ ಸೇವೆ ಒದಗಿಸಲು ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭ, ಚಾಮರಾಜನಗರ ವೈದ್ಯಕೀಯ ಕಾಲೇಜುಗಳಲ್ಲಿ 450 ಹಾಸಿಗೆ ಸಾಮರ್ಥ್ಯದ ಹೊಸ ಆಸ್ಪತ್ರೆ ಸ್ಥಾಪನೆ, 200 ಕೋಟಿ ರೂ. ಅನುದಾನ., ಐಸಿಬಿ ಘಟಕ, ಮೈಸೂರು ನಗರ ಹಾಗೂ ಮಾರ್ಗ ಮಧ್ಯದ 92 ಹಳ್ಳಿಗಳಿಗೆ ಹಳೇ ಉಂಡವಾಡಿ ಬಳಿ ಕಾವೇರಿ ನದಿಯಿಂದ ಹೆಚ್ಚುವರಿಯಾಗಿ 300 ಎಂಎಲ್ ಡಿ ನೀರು ಪೂರೈಕೆ ಯೋಜನೆಗೆ 50 ಕೋಟಿ ರೂ. ಅನುದಾನ ನೀಡಲಾಗಿದೆ.

In budget Only a few projects are limited to Mysuru

ಇದ್ದ ನಿರೀಕ್ಷೆ ಏನು ?

ಮೈಸೂರಿಗೆ ಹೆರಿಟೇಜ್ ಸಿಟಿ ಎಂಬ ಪಟ್ಟವಿದ್ದು, ದಿಲ್ಲಿಯ ವಿಜ್ಞಾನ ಭವನದ ಮಾದರಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕನ್ವೆನ್ಷನ್ ಸೆಂಟರ್‌ ಸ್ಥಾಪನೆ ಮಾಡುವ ಕನಸಿತ್ತು.

ಮೈಸೂರಿನ ಕೈಗಾರಿಕಾ ಪ್ರದೇಶಕ್ಕೆ ಪ್ರತ್ಯೇಕ ಹೆಲಿಪ್ಯಾಡ್, ಟ್ರಕ್ ಟರ್ಮಿನಲ್‌ ನಿರ್ಮಾಣ, ತ್ಯಾಜ್ಯ ಸಂಸ್ಕರಣಾ ಕೇಂದ್ರಸ್ಥಾಪನೆ, ಹೆಬ್ಬಾಳ್ ರಫ್ತು ಕೇಂದ್ರಕ್ಕೆ ಮತ್ತಷ್ಟು ಆರ್ಥಿಕ ನೆರವು, ಮೈಸೂರಿನಲ್ಲಿ ಫುಡ್‌, ಐಟಿ, ಫಾರ್ಮಾ ಪಾರ್ಕ್‌ ಸ್ಥಾಪನೆ, ಮೈಸೂರಿಗೆ ಪ್ರತ್ಯೇಕ ಜಲಮಂಡಳಿ ಸ್ಥಾಪನೆ ಕುಮಾರಸ್ವಾಮಿ ಬಜೆಟ್ ನಲ್ಲಿ ಸೇರ್ಪಡೆಯಾಗುವ ನಿರೀಕ್ಷೆಗಳಿತ್ತು.

7 ಶಾಸಕರನ್ನು ಗೆಲ್ಲಿಸಿದ ಮಂಡ್ಯ ಜನತೆಗೆ ಕುಮಾರಸ್ವಾಮಿ ಋಣ ಸಂದಾಯ7 ಶಾಸಕರನ್ನು ಗೆಲ್ಲಿಸಿದ ಮಂಡ್ಯ ಜನತೆಗೆ ಕುಮಾರಸ್ವಾಮಿ ಋಣ ಸಂದಾಯ

ಆದರೆ ಇವೆಲ್ಲವೂ ಸಂಪೂರ್ಣ ನೆನೆಗುದಿಗೆ ಬಿದ್ದಿದೆ. ಇನ್ನು ಕೆ.ಆರ್. ನಗರದ ಶ್ರೀ ರಾಮ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಕುರಿತಾಗಿಯೂ ಬಜಟ್ ನಲ್ಲಿ ಘೋಷಿಸಲಿದ್ದಾರೆ. ದಸರಾ ಮಹೋತ್ಸವಕ್ಕೆ ಮತ್ತಷ್ಟು ಹೆಚ್ಚಿನ ಅನುದಾನವನ್ನು ನಿರೀಕ್ಷಿಸಿತ್ತು. ಪ್ರವಾಸಿ ತಾಣವನ್ನು ಅಭಿವೃದ್ಧೀಗೊಳಿಸುವ ನಿಟ್ಟಿನಲ್ಲಿಯೂ ಸಾಕಷ್ಟು ನಿರೀಕ್ಷೆಯಿತ್ತು.

ಆದರೆ ಇವೆಲ್ಲವೂ ಹೊಳೆಯಲ್ಲಿ ಹುಣಸೆಹಣ್ಣು ಕಿವುಚಿದ ಹಾಗಾಗಿದೆ.

ಮೈಸೂರಿಗೆ ಸಿದ್ದರಾಮಯ್ಯ ಘೋಷಿಸಿದ್ದ ಕೊಡುಗೆಗಳು

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 2018-19ನೇ ಸಾಲಿಗೆ ಫೆಬ್ರವರಿ 16ರಂದು ಮಂಡಿಸಿದ್ದ ಬಜೆಟ್ ನಲ್ಲಿ ತವರು ಜಿಲ್ಲೆಗೆ ನಾನಾ ಯೋಜನೆಗಳನ್ನು ನೀಡಿದ್ದರು.
ಮೈಸೂರಿನ ವಸ್ತುಪ್ರದರ್ಶನ ಪ್ರಾಧಿಕಾರದ ಜಾಗದಲ್ಲಿ 'ಮೈಸೂರು ಹಾಟ್‌ ಅಭಿವೃದ್ಧಿ'.

ಕುಮಾರಸ್ವಾಮಿ ಬಜೆಟ್ 2018: ಯಾವುದು ಏರಿಕೆ? ಯಾವ್ದು ಇಳಿಕೆ?ಕುಮಾರಸ್ವಾಮಿ ಬಜೆಟ್ 2018: ಯಾವುದು ಏರಿಕೆ? ಯಾವ್ದು ಇಳಿಕೆ?

ದಸರಾ ವೇಳೆ ಆಯೋಜಿಸುವ ಕ್ರೀಡಾಕೂಟವನ್ನು ದಸರಾ-ಸಿಎಂ ಕಪ್‌ ಆಗಿ ಆಯೋಜಿಸಲು 7 ಕೋಟಿ ರೂ.ಅನುದಾನ, ರಾಷ್ಟ್ರಕವಿ ಕುವೆಂಪು ಅವರ ಮೈಸೂರಿನ ನಿವಾಸ 'ಉದಯರವಿ'ಯನ್ನು ರಾಷ್ಟ್ರಕವಿ ಸ್ಮಾರಕವನ್ನಾಗಿ ಅಭಿವೃದ್ಧಿಪಡಿಸುವುದು.

ದಿವಂಗತ ಅಜೀಜ್ ಸೇಠ್ ಸ್ಮಾರಕ ಸಮುದಾಯ ಭವನ ನಿರ್ಮಿಸಲು 3 ಕೋಟಿ ರೂ. ಅನುದಾನ, ಹುಣಸೂರು ಹಾಗೂ ಎಚ್‌.ಡಿ.ಕೋಟೆ ತಾಲೂಕಿನಲ್ಲಿ ಒಂದು ಕೋಟಿ ರೂ.ವೆಚ್ಚದಲ್ಲಿ ಆದಿವಾಸಿಗಳ ಸಮುದಾಯ ಭವನ ನಿರ್ಮಾಣ, ಮೈಸೂರಿನಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಘಟಕ ಸ್ಥಾಪನೆ.

ಮೈಸೂರಿನ ನರ್ಸಿಂಗ್‌ ಕಾಲೇಜಿಗೆ 30 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣ, ಮೈಸೂರು ವಿವಿಯಲ್ಲಿ ಬಸವ ಅಧ್ಯಯನ ಕೇಂದ್ರ ಸ್ಥಾಪನೆಗೆ 2 ಕೋಟಿ ರೂ. ಅನುದಾನ, ಮೈಸೂರಿನಲ್ಲಿ ರೇಷ್ಮೆ ಟೂರಿಸಂ ಅಭಿವೃದ್ಧಿ, ಬಂಡಿಪಾಳ್ಯ ಬಳಿ ಟ್ರಕ್ ಟರ್ಮಿನಲ್‌ ನಿರ್ಮಾಣ ಇಷ್ಟೆಲ್ಲಾ ಕೊಡುಗೆಗಳನ್ನು ಮಾಜಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು.

English summary
Karnataka Budget 2018: In the HD Kumaraswamy budget Only a few projects are limited to Mysuru. Most of the grants were given to Hassan, Mandya, Ramanagara and Kanakapura of Old Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X