ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಷಾಢ ಮಾಸದಲ್ಲಿ ಸಾಂಸ್ಕೃತಿಕ ನಗರಿಗೆ ಹರಿದುಬರುತ್ತಿದೆ ಪ್ರವಾಸಿಗರ ದಂಡು

By Yashaswini
|
Google Oneindia Kannada News

ಮೈಸೂರು, ಜುಲೈ 22: ಆಷಾಢ ಮಾಸದಲ್ಲಿ ಪ್ರವಾಸ ಮಾಡಲು ಸರಿಯಾದ ಸಮಯವಲ್ಲ ಎಂಬ ಮಾತಿದೆ. ಆದರೆ ಇದಕ್ಕೆ ತದ್ವಿರುದ್ಧವೆಂಬಂತೆ ಮೈಸೂರಿನಲ್ಲಿ ಆಷಾಢವೂ ಆಶಾವಾದದ ಮಾಸವಾಗಿ ಪರಿವರ್ತನೆಯಾಗಿದೆ.

ಹೌದು, ಶುಭ ಶ್ರಾವಣ ಮಾಸಕ್ಕಿಂತ ಆಷಾಢದಲ್ಲಿಯೇ ಅಧಿಕ ಪ್ರವಾಸಿಗರು ಮೈಸೂರು ಪ್ರವಾಸಿ ಕೇಂದ್ರಗಳಿಗೆ ಬರಲಾರಂಭಿಸಿದ್ದಾರೆ. ಪರಿಣಾಮ ಮೈಸೂರು ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳಲ್ಲಿ ಆದಾಯ ಅಧಿಕವಾಗಲಾರಂಭಿಸಿದೆ.

ಮೈಸೂರು ಚಾಮುಂಡಿ ಬೆಟ್ಟದಲ್ಲಿ ವೈಭವದ ಆಷಾಢ ಶುಕ್ರವಾರ ಆಚರಣೆಮೈಸೂರು ಚಾಮುಂಡಿ ಬೆಟ್ಟದಲ್ಲಿ ವೈಭವದ ಆಷಾಢ ಶುಕ್ರವಾರ ಆಚರಣೆ

ದಶಕದ ಹಿಂದೆ ಆಷಾಢ ಶುಕ್ರವಾರದಲ್ಲಿ ಮೈಸೂರಿಗೆ ಭೇಟಿ ನೀಡುತ್ತಿದ್ದ ಪ್ರವಾಸಿಗರ ಸಂಖ್ಯೆ ಲಕ್ಷದ ಆಸುಪಾಸಿನಲ್ಲಿ ಇದ್ದರೆ, 2018ರ ಈ ಹೊತ್ತಿಗೆ ಪ್ರವಾಸಿಗರ ಸಂಖ್ಯೆ ಮೂರೂವರೆ ಲಕ್ಷದ ಸಮೀಪಕ್ಕೆ ಬಂದು ನಿಂತಿದೆ. ದೇವಾಲಯಕ್ಕೆ ಬರುತ್ತಿದ್ದ ಆದಾಯ ಪ್ರಮಾಣವೂ ಲಕ್ಷರೂ. ಗಳಿಂದ ಕೋಟಿ ರೂ. ದಾಟಿದೆ.

In Ashada Most of the tourists have come to Mysore tourist centers

ಧಾರ್ಮಿಕ ದತ್ತಿ ಇಲಾಖೆ, ಜಿಲ್ಲಾಡಳಿತ, ಕೆಎಸ್ ಆರ್‌ಟಿಸಿಯಂತಹ ಸಂಸ್ಥೆಗಳ ಯೋಜನೆ ಫಲ ನೀಡಿದೆ.

2104ರಿಂದ 2016ರವರೆಗೆ ಬೆಟ್ಟದಲ್ಲಿ ಭಕ್ತರಿಗೆ ಉಚಿತ ಪ್ರವೇಶದ ಜತೆಗೆ 50 ರೂ. ಟಿಕೆಟ್ ಮೂಲಕ ಸುಲಭವಾಗಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿತ್ತು. 2017ರಲ್ಲಿ 50 ರೂ. ಮತ್ತು 300 ರೂ. ಟಿಕೆಟ್ ವ್ಯವಸ್ಥೆಯೂ ಜಾರಿಗೆ ತರಲಾಗಿತ್ತು.

ಇದರಿಂದ 2014ರಲ್ಲಿ ಬರಿ ಟಿಕೆಟ್ ಶುಲ್ಕದಿಂದಲೇ 3.039 ಲಕ್ಷ ರೂ., 2015ರಲ್ಲಿ 3.477, 2016ರಲ್ಲಿ 3.873 ಲಕ್ಷ ರೂ, 2017ರಲ್ಲಿ 10.382 ಲಕ್ಷ ರೂ. ಬರೀ ಟಿಕೆಟ್ ನಿಂದಲೇ ಸಂಗ್ರಹವಾಗಿತ್ತು. ಭಕ್ತರ ಹರಕೆ ರೂಪದಲ್ಲಿ ಲಕ್ಷಾಂತರ ರೂ. ಆದಾಯ ಸಂಗ್ರಹವಾಗಿದೆ.

ಧುಮ್ಮಿಕ್ಕುತ್ತಿರುವ ಜೋಗದ ವೈಭವ ನೋಡಲು ಮುಗಿಬಿದ್ದ ಪ್ರವಾಸಿಗರುಧುಮ್ಮಿಕ್ಕುತ್ತಿರುವ ಜೋಗದ ವೈಭವ ನೋಡಲು ಮುಗಿಬಿದ್ದ ಪ್ರವಾಸಿಗರು

ಹಾರವೂ ಆಷಾಢದಲ್ಲಿ ಗಗನ ಕುಸುಮ
ಆಷಾಢ ಶುಕ್ರವಾರದ ಅಂಗವಾಗಿ ಹೂವಿನ ಹಾರಗಳ ದರಗಳು ಏರಿಕೆ ಕಂಡಿವೆ. ಆರಡಿಯ ಗುಲಾಬಿ ಹಾರ 1,200ರೂಕ್ಕೇರಿದೆ. ಕಳೆದ ವಾರಕ್ಕೆ 600ರೂ.ಗೆ ಮಾರಾಟವಾಗುತ್ತಿತ್ತು. ನಾಲ್ಕಡಿಯ ಗುಲಾಬಿ ಹಾರ 400 ರೂ.ರಿಂದ 800 ರೂ. ಒಂದೂವರೆ ಅಡಿಯ ಮೈಸೂರು ಮಲ್ಲಿಗೆ ಹಾರಕ್ಕೆ ಕಳೆದ ವಾರ 80 ರೂ. ಇದ್ದುದು ಈ ವಾರ 120ಕ್ಕೇರಿದೆ.

ಎರಡೂವರೆ ಅಡಿಯ ಮಲ್ಲಿಗೆ ಹಾರ 150 ರೂ. ರಿಂದ 200 ರೂ.ರಷ್ಟಾಗಿದೆ. ಮೂರಡಿಯ ಸುಗಂಧರಾಜ 300 ರೂ.ರಿಂದ 450 ರೂ.ಗೆ ಏರಿದೆ. ಕಳೆದ ವಾರ ಕನಕಾಂಬರ ಕೆ.ಜಿಗೆ 240 ರೂ. ಇದ್ದುದು 200 ರೂ., ಗುಲಾಬಿ ಹೂವು 160 ರೂ. ನಿಂದ 120 ರೂ., ಸೇವಂತಿಗೆ 120 ರೂ.ನಿಂದ 80, ಮರ್ಲೆ ಮಲ್ಲಿಗೆ 200 ರೂ ರಿಂದ 120, ಮೈಸೂರು ಮಲ್ಲಿಗೆ 140 ರೂ ರಿಂದ 120ಕ್ಕೆ ಇಳಿದಿವೆ. ಚೆಂಡು ಹೂವು 20 ರೂ ರಲ್ಲೇ ಮುಂದುವರಿದಿದೆ.

ಹಣ್ಣಿನ ದರಗಳಲ್ಲಿ ಸೇಬು ಧಾರಣೆ ಇಳಿಕೆಯಾಗಿಲ್ಲ. ಉತ್ತಮ ಗುಣಮಟ್ಟದ ಸೇಬು ಕೆ.ಜಿಗೆ 180 ರೂ.ನಿಂದ 220, ಪೈನಾಪಲ್ 30ರಿಂದ 50 ರೂ ತುಟ್ಟಿಯಾಗಿವೆ. ದಾಳಿಂಬೆ 100ರಿಂದ 80 ರೂ, ಏಲಕ್ಕಿ ಬಾಳೆಹಣ್ಣು 50ರಿಂದ 40 ರೂ ಕ್ಕೆ ಇಳಿಕೆಯಾಗಿವೆ.

ಒಟ್ಟಾರೆ ಆಷಾಢಮಾಸದ ಆಚರಣೆ ಮೈಸೂರಿನಲ್ಲಿರುವ ಜನತೆ ವೈಭವೋಪೇತವಾಗಿ ಆಚರಿಸುತ್ತಿದ್ದು , ದೇವಿಯ ಆರಾಧನೆಯಲ್ಲಿ ನಿರತರಾಗಿದ್ದಾರೆ.

English summary
In Ashada Most of the tourists have come to Mysore tourist centers. This is Effect to increase profit in tourist destinations in Mysuru and around.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X