ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಲ್ಲಿ ಅಕ್ರಮ ಪಡಿತರ ಅಕ್ಕಿ ವಶ: ನಾಲ್ವರ ಬಂಧನ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 20: ಮೈಸೂರು ನಗರದ ಸಿಸಿಬಿ ಪೊಲೀಸರು ಇಂದು ಬೆಳಿಗ್ಗೆ ಹಠಾತ್‌ ದಾಳಿ ನಡೆಸಿ, ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಸೇರಿದ ಈ ಅಕ್ಕಿಯನ್ನು ಅಕ್ರಮವಾಗಿ ಗೋದಾಮಿನಲ್ಲಿ ಇಟ್ಟುಕೊಂಡಿದ್ದ ಶಕ್ಲೀನ್ ಷರೀಫ್ (26), ನಯಾಜ್ ಖಾನ್ (34), ಇಶಾನ್ ಬೇಗ್ (31) ಹಾಗೂ ಜಮೀರ್ ಪಾಷ (38) ಬಂಧಿತ ಆರೋಪಿಗಳು.

ಇವರು ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಸಂಗ್ರಹಿಸಿ ನಂತರ ಅದನ್ನು ಮಿಲ್‌ ಗಳಲ್ಲಿ ಪಾಲಿಷ್‌ ಮಾಡಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಗೋದಾಮಿನಲ್ಲಿ ಸಂಗ್ರಹಿಸಿ ಇಟ್ಟುಕೊಂಡಿದ್ದರು.

Illegal Ration Rice Siezed In Mysuru

ಪೊಲೀಸರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಗೋದಾಮು ಮೇಲೆ ದಾಳಿ ನಡೆಸಿ 49.16 ಕ್ವಿಂಟಾಲ್ ಅಕ್ಕಿ, 1 ಎಲೆಕ್ಟ್ರಾನಿಕ್ ಯಂತ್ರ, ಚೀಲ ಹೊಲೆಯುವ ಯಂತ್ರ, 4,000 ನಗದು ಹಾಗೂ ಅಕ್ಕಿ ಸಾಗಿಸುವುದಕ್ಕಾಗಿ ಬಳಸಿದ ಟಾಟಾ ಏಸ್ ಗೂಡ್ಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Four accused were arrested for illegally stocking rations in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X