ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ಯಾಕೇಜ್ಡ್ ಕುಡಿಯುವ ನೀರಿನ ಕ್ಯಾನ್ ಎಷ್ಟು ಸುರಕ್ಷಿತ?

|
Google Oneindia Kannada News

ಮೈಸೂರು, ಜೂನ್ 22: ಕುಡಿಯುವ ನೀರಿಗೆ 25-30 ರೂ ಕೊಟ್ಟು ಪ್ಯಾಕೇಜ್ಡ್ ನೀರಿನ ಬಾಟಲಿಯನ್ನು ತರಿಸುವುದು ಈಗ ಸಾಮಾನ್ಯ. ಆದರೆ ಈ ಪ್ಯಾಕೇಜ್ಡ್ ನೀರಿನ ಬಾಟಲಿ ಎಷ್ಟು ಸುರಕ್ಷಿತ ಎಂಬುದನ್ನೂ ಆಲೋಚಿಸಬೇಕಿದೆ.

ಪ್ಯಾಕೇಜ್ಡ್ ಕುಡಿಯುವ ನೀರಿನ ಕ್ಯಾನ್ ‌ಗಳನ್ನು ಸರಬರಾಜು ಮಾಡುವ 42 ಅಧಿಕೃತ ಘಟಕಗಳು ಜಿಲ್ಲೆಯಲ್ಲಿದ್ದರೆ, ನಗರದಲ್ಲಿ ಕೇವಲ 9 ಇವೆ. ಆದರೆ, ಇದಕ್ಕಿಂತಲೂ ಹೆಚ್ಚಾಗಿ ಅನಧಿಕೃತ ಘಟಕಗಳು ನಗರದಲ್ಲಿ ಕಾರ್ಯಾಚರಿಸುತ್ತಿವೆ. ಸಣ್ಣ ಸಣ್ಣ ಬೀದಿಗಳಲ್ಲಿ, ನಗರದ ಹೊರವಲಯದ ಬಡಾವಣೆಗಳಲ್ಲಿ ಐಎಸ್ ‌ಐ ಮುದ್ರೆ ಇರದ ಪ್ಯಾಕೇಜ್ಡ್ ನೀರಿನ ಕ್ಯಾನ್ ಗಳು ಮಾರಾಟಕ್ಕೆ ಲಭ್ಯವಿವೆ. ಇಂತಹ ಅನಧಿಕೃತ ಕ್ಯಾನ್ ಗಳ ಸಾಮಾನ್ಯ ಬೆಲೆ 25. ಕೆಲವೊಂದು ಕ್ಯಾನ್ ಗಳು 20 ರೂಪಾಯಿಗೂ ಸಿಗುತ್ತಿವೆ. ಬೆಲೆಯಷ್ಟೇ ಅಲ್ಲ, ಸರ್ಟಿಫೈಡ್ ಮುದ್ರೆ ಇಲ್ಲದ ಈ ನೀರಿನ ಕ್ಯಾನ್ ‌ಗಳ ಗುಣಮಟ್ಟವೂ ಕಡಿಮೆಯಿರುತ್ತದೆ.

ಅಂಗಡಿಯವರನ್ನು ಕ್ಯಾನಿನ ಶುದ್ಧತೆ ಬಗ್ಗೆ ವಿಚಾರಿಸಿದರೆ, ಕ್ಯಾನಿನ ಮೇಲ್ಭಾಗದ ಕೊಳೆ ಅದು, ಒಳಗೆ ಶುದ್ಧವಾಗಿದೆ ಎನ್ನುತ್ತಾರೆ. ಮತ್ತೆ ಕೆಲವು ಕ್ಯಾನ್ ಗಳನ್ನು ಹೆಗಲ ಮೇಲೆ ಹೊತ್ತುಕೊಂಡರೆ ಮುದುಡುತ್ತವೆ. ಇಂತಹ ಕ್ಯಾನ್ ‌ಗಳು ನಗರದ ಬಹುತೇಕ ಅಂಗಡಿ ಮತ್ತು ಬೇಕರಿಗಳಲ್ಲಿ ಸಿಗುತ್ತಿವೆ.

 ಕುಡಿಯುವ ನೀರಿನ ಸಮಸ್ಯೆಯೇ ಸಹಾಯವಾಣಿಗೆ ಕರೆ ಮಾಡಿ ಕುಡಿಯುವ ನೀರಿನ ಸಮಸ್ಯೆಯೇ ಸಹಾಯವಾಣಿಗೆ ಕರೆ ಮಾಡಿ

ಮುಂಬೈನ ಬಾಬಾ ಪರಮಾಣು ಸಂಶೋಧನಾ ಕೇಂದ್ರದ ಪರಿಸರ ಪರಿವೀಕ್ಷಣೆ ಮತ್ತು ಮೌಲ್ಯಮಾಪನ ವಿಭಾಗವು 2015ರಲ್ಲೇ ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಇಂತಹ ಕಳಪೆ ದರ್ಜೆಯ ಪ್ಯಾಕೇಜ್ಡ್ ನೀರು ಸೂಕ್ಷ್ಮಾಣುಜೀವಿ ಹೊಂದಿರುವ ನೀರಿಗಿಂತ ಹೆಚ್ಚು ಅಪಾಯಕಾರಿ ಎಂದು ಆ ವರದಿ ಹೇಳಿತ್ತು.

Illegal Packaged drinking water supply started in Cities

ಅನಧಿಕೃತ ಪ್ಯಾಕೇಜ್ಡ್ ಕುಡಿಯುವ ನೀರಿನ ಪೂರೈಕೆ ಹಿಂದೆ ವಿತರಕರ ಮೋಸದ ಜಾಲವೂ ಅಡಗಿದೆ. ಹಲವು ವಿತರಕರು ಅಧಿಕೃತ ಘಟಕಗಳಿಂದ ಒಂದಷ್ಟು ನೀರಿನ ಕ್ಯಾನ್ ಗಳನ್ನು ಪಡೆಯುತ್ತಾರೆ. ಇದರ ಜತೆಗೆ, ಅನಧಿಕೃತ ಘಟಕಗಳಿಂದಲೂ ಹಲವು ನೀರಿನ ಕ್ಯಾನ್ ಗಳನ್ನು ಪಡೆದು ಅಗ್ಗದ ದರಕ್ಕೆ ಮಾರಾಟ ಮಾಡುತ್ತಾರೆ. ಹಲವು ಮಂದಿ ಐಎಸ್ ‌ಐ ಮುದ್ರೆ ಹೊಂದಿರುವಂಥ ಕಂಪನಿಯ ನೀರಿನ ಕ್ಯಾನ್ ‌ಗೆ ಪಾಲಿಕೆಯಲ್ಲಿ 5 ರೂಪಾಯಿಯ ನಾಣ್ಯ ಹಾಕಿ ಪಡೆಯುವ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ನೀರು ತುಂಬಿಸಿ, ಸೀಲ್ ಹಾಕಿ ಮಾರಾಟ ಮಾಡುತ್ತಾರೆ.

ರಾಜ್ಯದ ಪ್ರತೀ ಮನೆಗೆ ನಲ್ಲಿ ಮೂಲಕ ಕುಡಿಯುವ ನೀರು: ಕುಮಾರಸ್ವಾಮಿರಾಜ್ಯದ ಪ್ರತೀ ಮನೆಗೆ ನಲ್ಲಿ ಮೂಲಕ ಕುಡಿಯುವ ನೀರು: ಕುಮಾರಸ್ವಾಮಿ

ಪ್ರತಿ ಘಟಕದಲ್ಲಿ ಸಂಸ್ಕರಣೆಯಾಗುವ ನೀರಿನಲ್ಲಿನ ಆಮ್ಲಾಂಶ ಹಾಗೂ ಖನಿಜಾಂಶಗಳನ್ನು ಪರೀಕ್ಷಿಸಬೇಕು. ಅದರಲ್ಲಿನ ಹಾನಿಕಾರಕ ಅಂಶಗಳನ್ನು ನಾಶ ಮಾಡುವ, ಕ್ಯಾಲ್ಸಿಯಂ ಮತ್ತು ಮೆಗ್ನೇಷಿಯಂಗಳನ್ನು ಸೇರ್ಪಡೆ ಮಾಡುವ ಆರ್.ಒ ತಂತ್ರಜ್ಞಾನ ಹೊಂದಿರಬೇಕು. ಪ್ರತಿ ಘಟಕದಲ್ಲೂ ಪ್ರಯೋಗಾಲಯ ಇದ್ದು, ಅದರಲ್ಲಿ ಜೀವರಸಾಯನ ಸಿಬ್ಬಂದಿ ಇರಬೇಕು. ಇಂತಹ ಘಟಕಗಳ ನೀರನ್ನು ಪದೇ ಪದೇ ಪರೀಕ್ಷಿಸುತ್ತಿರಬೇಕು ಎಂದು ಆಹಾರ ಸುರಕ್ಷತಾ ಕಾಯ್ದೆ ಹೇಳುತ್ತದೆ. ಆದರೆ, ಬಹಳಷ್ಟು ಅನಧಿಕೃತ ಘಟಕಗಳಲ್ಲಿ ಕೇವಲ ಕೊಳವೆಬಾವಿ ನೀರನ್ನೇ ನಿಯಮಬಾಹಿರವಾಗಿ ಶುದ್ಧೀಕರಿಸಿ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಸಮುದ್ರ ನಗರಿ ಚೆನ್ನೈನಲ್ಲಿ ನೀರಿಗೆ ಹಾಹಾಕಾರ, ದುಪ್ಪಟ್ಟು ಹಣ ಕೊಡ್ತೀವಂದ್ರೂ ಸಿಗ್ತಿಲ್ಲ ನೀರು ಸಮುದ್ರ ನಗರಿ ಚೆನ್ನೈನಲ್ಲಿ ನೀರಿಗೆ ಹಾಹಾಕಾರ, ದುಪ್ಪಟ್ಟು ಹಣ ಕೊಡ್ತೀವಂದ್ರೂ ಸಿಗ್ತಿಲ್ಲ ನೀರು

ಇಂತಹ ಘಟಕಗಳ ಜಾಡು ಹಿಡಿಯುವುದೂ ಸುಲಭ ಸಾಧ್ಯವಲ್ಲ. ಕ್ಯಾನಿನ ಮೇಲೆ ಯಾವುದೋ ವಿಳಾಸ ಹಾಕಿರುತ್ತಾರೆ. ಆ ವಿಳಾಸದಲ್ಲಿ ಘಟಕವೇ ಇರುವುದಿಲ್ಲ. ಅಂಗಡಿಗೆ ಸರಬರಾಜು ಮಾಡುವ ಏಜೆಂಟ್‌ಗಳ ಮೂಲಕ ಮಾತ್ರ ಇಂಥ ಘಟಕಗಳನ್ನು ಪತ್ತೆ ಹಚ್ಚಬೇಕಿದೆ. ಇದು ಸವಾಲಿನ ಕೆಲಸ.

ಸಾರ್ವಜನಿಕರು ಖರಿದೀಸುವ ಬಾಟಲಿಯಲ್ಲಿ ಐಎಸ್ ‌ಐ ಚಿಹ್ನೆ ಇದೆಯೇ ಎಂದು ಪರಿಶೀಲಿಸಿ ನಂತರ ಖರೀದಿಸಬೇಕು, ನೀರಿನ ಕ್ಯಾನ್ ಗಳು ಸರಿಯಾಗಿ ಸೀಲ್ ಆಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಕ್ಯಾನ್ ಗಳ ಮೇಲೆ ನೀರು ಶುದ್ಧೀಕರಣವಾದ ದಿನಾಂಕ ಇದೆಯೇ ಎಂದು ಪರೀಕ್ಷಿಸಬೇಕು, ವಿತರಕರ ಬಳಿ ಕಂಪನಿಯ ಗುರುತಿನ ಪತ್ರ ಇದೆಯೇ ಎಂದು ನೋಡಬೇಕು.

English summary
Illegal Packaged drinking water supply has been started in Cities. It is one of the big racket in these days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X